Thu. Jul 3rd, 2025

ಪುತ್ತೂರು:(ಜು.2) ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೋರ್ವಳು ನಾಪತ್ತೆಯಾದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಇದನ್ನೂ ಓದಿ: 🩺ಉಜಿರೆ : ಉಜಿರೆ ಎಸ್. ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೋರ್ವಳು ಜೆರಾಕ್ಸ್ ಮಾಡಿ ಬರುವುದಾಗಿ ಹೋಗಿ ಬಳಿಕ ಮನೆಗೆ ಬಾರದೆ ನಾಪತ್ತೆಯಾದ ಬಗ್ಗೆ ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಲಾಗಿದೆ.

ಪುತ್ತೂರು ಪಡ್ನೂರು ನಿವಾಸಿ ಗಿರಿಜಾ ದೇವಿ ಮತ್ತು ಮಂಟು ಪಾಸ್ವಾನ ದಂಪತಿಗಳ ಪುತ್ರಿ ರೂಪ (19) ನಾಪತ್ತೆಯಾದ ಯುವತಿ.
ತಾಯಿ ಮಂಗಳೂರಿನ ನರ್ಸಿಂಗ್ ಹೋಂ ನಲ್ಲಿ, ತಂದೆ ಉಡುಪಿಯಲ್ಲಿ ಗಾರೆ ಕೆಲಸ ನಿರ್ವಹಿಸುತ್ತಿದ್ದು ಮನೆಯಲ್ಲಿ ರೂಪ ಮತ್ತು ಆಕೆಯ ತಮ್ಮ ವಾಸವಿದ್ದು ನಿನ್ನೆ ಜೆರಾಕ್ಸ್ ಮಾಡಿಸಲು ಪೇಟೆಗೆ ಹೋಗಿ ಬರುವುದಾಗಿ ತಿಳಿಸಿ ತೆರಳಿದ್ದಳು.

ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಮನೆಗೂ ಹೋಗದೆ ಸಂಬಂಧಿಕರಲ್ಲಿಗೂ ಹೋಗದೆ, ಸ್ನೇಹಿತರಲ್ಲಿಗೂ ತೆರಳದೆ ನಾಪತ್ತೆಯಾಗಿರುವುದಾಗಿ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಆಕೆ ಎಲ್ಲಿಯಾದರೂ ಕಂಡು ಬಂದಲ್ಲಿ ಕೂಡಲೇ 6361807956/ 8971783524 ಈ ಸಂಖ್ಯೆಯನ್ನು ಸಂಪರ್ಕಿಸಬೇಕಾಗಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *