ಸುಳ್ಯ : (ಜು.4) ಸುಳ್ಯದ ಜನತೆಗೆ, ಆಭರಣ ಪ್ರಿಯರಿಗೆ ಚಿನ್ನಾಭರಣಗಳ ವೈವಿಧ್ಯಮಯ ಆಯ್ಕೆಗಾಗಿ ಹೊಸದೊಂದು ಮಳಿಗೆ ‘ಸ್ವರ್ಣಂ ಜುವೆಲ್ಸ್’ ಶೀಘ್ರದಲ್ಲೇ ಶುಭಾರಂಭಗೊಳ್ಳಲಿದೆ.


ಗ್ರಾಹಕರ ಸೇವೆಯಲ್ಲಿ, ಚಿನ್ನೋದ್ಯಮದಲ್ಲಿ 20ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿರುವವರ ಪಾಲುದಾರಿಕೆಯೊಂದಿಗೆ ಕಾರ್ಯಾರಂಭ ಮಾಡಲಿರುವ ಸ್ವರ್ಣಂ ಜುವೆಲ್ಸ್, ಜುಲೈ 7ರಂದು ಸೋಮವಾರ ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು ಸುಂತೋಡು ಎಂಪೋರಿಯಂ ನಲ್ಲಿ ಉದ್ಘಾಟನೆಗೊಳ್ಳಲಿದೆ.
ಗ್ರಾಹಕರಿಗೆ ಸಾಕಷ್ಟು ಪಾರ್ಕಿಂಗ್ ಅವಕಾಶವೂ ಲಭ್ಯವಿದೆ. ವಿಶೇಷ ಪಾರ್ಕಿಂಗ್‌ಗಾಗಿ ಕರೆಮಾಡಿ- 7975425067.
ಸುಂದರ ಸುಳ್ಯಕ್ಕೆ ಸ್ವರ್ಣಂ ಸ್ಪರ್ಶ ಎಂಬ ಘೋಷವಾಕ್ಯದೊಂದಿಗೆ ಕಾರ್ಯಾರಂಭ ಮಾಡಲಿರುವ ನೂತನ ಮಳಿಗೆಯಲ್ಲಿ ಪ್ರತೀ ಖರೀದಿಗೆ ಖಚಿತ ಉಡುಗೊರೆಗಳೂ ಲಭ್ಯವಿವೆ.

, ಪ್ರವೀಣ್ ಬಿ ಗೌಡ, ಭವಿತ್ ಯು ಹಾಗೂ ಲೋಕೇಶ್ ಎಂ.ಎಸ್, ಸಂಜೀವ ಕೆ. ಅವರು ಸ್ವರ್ಣಂ ಜುವೆಲ್ಸ್‌ನ ಆಡಳಿತ ಪಾಲುದಾರರಾಗಿದ್ದಾರೆ.
ದೀಪೋಜ್ವಲನ ಕಾರ್ಯಕ್ರಮದಲ್ಲಿ ಮುಳಿಯ ಗೋಲ್ಡ್ & ಡೈಮಂಡ್ಸ್‌ನ ಮಾಲೀಕರಾದ ಶ್ರೀಮತಿ ಮತ್ತು ಶ್ರೀ ಕೇಶವ ಪ್ರಸಾದ್ ಮುಳಿಯ, ಶ್ರೀಮತಿ ಮತ್ತು ಶ್ರೀ ಕೃಷ್ಣನಾರಾಯಣ ಮುಳಿಯ,ಹಾಗೂ ಕುಂಭಕೋಡಿ ಶ್ರೀಮತಿ ಶಶಿಕಲಾ ಶುಭಕರ್ ರಾವ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಪ್ರಧಾನ ಕಾರ್ಯದರ್ಶಿ Ar.ಅಕ್ಷಯ್ ಕೆ.ಸಿ ಅವರು ಡೈಮಂಡ್ ಕೌಂಟರ್ ಅನ್ನು ಉದ್ಘಾಟಿಸಲಿದ್ದಾರೆ. ಸುಂತೋಡು ಎಂಪೋರಿಯಂ ಮಾಲಕ ಸೂರಯ್ಯ ಗೌಡ ಅವರು ಚಿನ್ನಾಭರಣ ಕೌಂಟರ್ ಉದ್ಘಾಟಿಸಲಿದ್ದಾರೆ. ಶ್ರೀಮತಿ ಶ್ರಮಿಕಾ ಸುಂತೋಡು ರವರು ಸ್ವರ್ಣಂ ಸ್ಪೆಷಲ್ ಆಭರಣಗಳನ್ನು ಬಿಡುಗಡೆ ಮಾಡಲಿದ್ದಾರೆ.


