Tue. Jul 8th, 2025

Puttur: ಉದ್ಘಾಟನೆಗೆ ಸಿದ್ಧಗೊಂಡ ಹೊಸ ನ್ಯಾಯಾಲಯ ಸಂಕೀರ್ಣ

ಪುತ್ತೂರು:(ಜು.8) ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಹೊಸ ನ್ಯಾಯಾಲಯ ಕಟ್ಟಡ ಸಿದ್ಧಗೊಂಡು ಉದ್ಘಾಟನೆಗೆಗಾಗಿ ಕಾಯುತ್ತಿದೆ. ಸದ್ಯ ಹಳೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ನ್ಯಾಯಾಲಯವು ಉದ್ಘಾಟನೆ ಬಳಿಕ ಬನ್ನೂರಿನ ಹೊಸ ನ್ಯಾಯಾಲಯ ಸಂಕೀರ್ಣಕ್ಕೆ ಶಿಫ್ಟ್ ಆಗಲಿದೆ.

ಇದನ್ನೂ ಓದಿ: 🟠ಬಂಟ್ವಾಳ : ನರಿಕೊಂಬು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಒಕ್ಕೂಟದ ತ್ರೈ ಮಾಸಿಕ ಸಭೆಯಲ್ಲಿ ಮಾದಕವಸ್ತು ವಿರೋಧಿ ದಿನಾಚರಣೆ

2022 ರಲ್ಲಿ ಈ ಹೊಸ ನ್ಯಾಯಾಲಯ ಕಟ್ಟಡದ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಇದೀಗ ಕಟ್ಟಡದ ಬಹುತೇಕ ಕಾಮಗಾರಿಗಳು ಮುಕ್ತಾಯವಾಗಿದೆ. ಅಂದಿನ ಶಾಸಕರಾಗಿದ್ದ ಸಂಜೀವ ಮಠಂದೂರು ಮೂಲಕ ಸುಮಾರು 50 ಕೋಟಿ ವೆಚ್ಚದ ನ್ಯಾಯಾಲಯ ಸಂಕೀರ್ಣ ಮತ್ತು 5 ಕೋಟಿ ವೆಚ್ಚದ ವಕೀಲರ ಸಂಘದ ಕಟ್ಟಡ ಇಲ್ಲಿ ನಿರ್ಮಾಣಗೊಂಡಿದೆ‌ ಮೊದಲ ಹಂತದಲ್ಲಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ನ್ಯಾಯಾಲಯ‌ ಸಂಕೀರ್ಣ ಮತ್ತು 5 ಕೋಟಿ ರೂಪಾಯಿ ವೆಚ್ಚದಲ್ಲಿ ವಕೀಲರ ಸಂಘದ ಕಟ್ಟಡವನ್ನು ನಿರ್ಮಿಸುವ ಯೋಜನೆಯಿತ್ತು.

ಆ ಬಳಿಕ ಅಂದಿನ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್ ಇದೇ ನ್ಯಾಯಾಲಯ ಸಂಕೀರ್ಣ ಜಿಲ್ಲಾ ನ್ಯಾಯಾಲಯದ ಸ್ಥಾಪನೆಗೂ ಅವಕಾಶವಿರಬೇಕು ಎನ್ನುವ ಕಾರಣಕ್ಕೆ ಇದೇ ಕಟ್ಟಡಕ್ಕೆ ಹೆಚ್ಚುವರಿ 25 ಕೋಟಿ ರೂಪಾಯಿಗಳನ್ನು ವಿನಿಯೋಗಿಸಿ ಒಟ್ಟು 55 ಕೋಟಿ ರೂಪಾಯಿ ವ್ಯಯಿಸಿ ಈ ಕಟ್ಟಡದ ನಿರ್ಮಾಣವಾಗಿದೆ.

ಬೆಳೆಯುತ್ತಿರುವ ಪುತ್ತೂರು ಜಿಲ್ಲೆಯಾಗುವ ಎಲ್ಲಾ ಅವಕಾಶಗಳನ್ನು ಹೊಂದಿರುವ ಹಿನ್ನಲೆಯಲ್ಲಿ ಜಿಲ್ಲಾ ಕೇಂದ್ರಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಪುತ್ತೂರಿನಲ್ಲಿ ಮಾಡಲಾಗುತ್ತಿದೆ. ಇದೇ ಮುಂದಾಲೋಚನೆಯ ಹಿನ್ನಲೆಯಲ್ಲಿ ನಗರದ ಹೊರವಲಯದಲ್ಲಿರುವ ಬನ್ನೂರಿನಲ್ಲಿ ಈ ನ್ಯಾಯಾಲಯ ಸಂಕೀರ್ಣವನ್ನು ಸಿದ್ಧಪಡಿಸಲಾಗಿದೆ. ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ಕಟ್ಟಡಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ.

ಹೊಸ ನ್ಯಾಯಾಲಯ ಸಂಕೀರ್ಣದ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಕರೆಸಿಕೊಳ್ಳಬೇಕೆನ್ನುವ ಇರಾದೆಯಲ್ಲೂ ಇಂದಿನ ಶಾಸಕ ಅಶೋಕ್ ಕುಮಾರ್ ರೈ ಅವರದ್ದಾಗಿದೆ. ಶಾಸಕರು ಈಗಾಗಲೇ ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರೂ, ಮುಖ್ಯಮಂತ್ರಿ ಕಛೇರಿಯಿಂದ ಈವರೆಗೂ ಗ್ರೀನ್ ಸಿಗ್ನಲ್ ದೊರಕದ ಹಿನ್ನಲೆಯಲ್ಲಿ ಕಟ್ಟಡದ ಉದ್ಘಾಟನೆ ಕೊಂಚ ವಿಳಂಬವಾಗುವ ಸಾಧ್ಯತೆಯಿದೆ. ನ್ಯಾಯಾಲಯಕ್ಕೆ ಸಂಪರ್ಕ ಕಲ್ಪಿಸು ವ ಹೊಸ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *