Sat. Jul 12th, 2025

Kumta: ಕುಮಟಾದಲ್ಲಿ ಶ್ರೀ ಮಹಾಮಂಡಲೇಶ್ವರ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತಾಚರಣೆ – ಶಾಸಕ ಹರೀಶ್ ಪೂಂಜ ಭಾಗಿ

ಕುಮಟಾ:(ಜು.11) ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ 1008 ಮಹಾಮಂಡಲೇಶ್ವರ ಸದ್ಗುರು ಬ್ರಹ್ಮಾನಂದ ಸರಸ್ವತಿಜೀ ಮಹಾರಾಜ ಅವರ 6 ನೇ ವರ್ಷದ ಚಾರ್ತುಮಾಸ್ಯ ವ್ರತಾಚರಣೆ ಉತ್ತರ ಕನ್ನಡದ ಕುಮಟಾದ ಕೋನಳ್ಳಿ ಶ್ರೀ ವನದುರ್ಗಾ ದೇವಾಲಯದಲ್ಲಿ ಜು.10 ರಿಂದ ಪ್ರಾರಂಭಗೊಂಡು ಆ.20ರವರೆಗೆ ನಡೆಯಲಿದೆ.

ಇದನ್ನೂ ಓದಿ: ⭕ಮಂಗಳೂರು: ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಕದ್ರಿ ಟ್ರಾಫಿಕ್ ಹೆಡ್ ಕಾನ್ಸ್ಟೇಬಲ್

ಚಾತುರ್ಮಾಸ್ಯ ಗುರು ಪೂರ್ಣಿಮೆಯ ದಿನವಾದ ಜು.10 ರಂದು ಸಚಿವ ಮಂಕಾಳ್‌ ಎಸ್‌. ವೈದ್ಯ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಚಿವ ಮಧು ಬಂಗಾರಪ್ಪ ವಹಿಸಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ಸಂಸದರು ಹಾಗೂ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *