Sat. Jul 12th, 2025

Ujire: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಯೋಗ ನೃತ್ಯ ಪ್ರದರ್ಶನ

ಉಜಿರೆ:(ಜು.12) ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಗಿನ್ನೆಸ್ ದಾಖಲೆ ಖ್ಯಾತಿಯ ನೃತ್ಯ ಕಲಾವಿದರಾದ ಉಡುಪಿಯ ತನುಶ್ರೀ ಅವರಿಂದ ಯೋಗ – ನೃತ್ಯ ಎಂಬ ವಿಶೇಷ ನೃತ್ಯ ಕಾರ್ಯಕ್ರಮದ 130ನೇ ಪ್ರದರ್ಶನ ನಡೆಯಿತು.

ಇದನ್ನೂ ಓದಿ: ☘ಬಂಟ್ವಾಳ : ವೀರಕಂಭ ಮಜಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ – ರಕ್ಷಕ ಸಭೆ

ಯೋಗದ ಮಹತ್ವ , ಆರೋಗ್ಯವನ್ನು ಕಾಪಾಡುವಲ್ಲಿ ಯೋಗದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿ ಯೋಗನೃತ್ಯ ಪ್ರಸ್ತುತ ಪಡಿಸಿದರು.


ಕಾಲೇಜಿನ ಪ್ರಾಚಾರ್ಯರಾದ ಶ್ರೀ ಪ್ರಮೋದ್ ಕುಮಾರ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ , ವಿದ್ಯಾರ್ಥಿಗಳ ಏಕಾಗ್ರತೆ , ಆರೋಗ್ಯ ಪೂರ್ಣ ದೇಹ ಮತ್ತು ಮನಸ್ಸಿಗೆ ಯೋಗ ಎಂಬುದು ಅತ್ಯಗತ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಶ್ರೀ ನಾಗರಾಜ್ ಪಿ‌. ಭಂಡಾರಿ ಮತ್ತು ಸದಸ್ಯರಾದ ಶ್ರೀಮತಿ ಅಮೃತಾ ಗೋಖಲೆ , ಶ್ರೀಮತಿ ಅಕ್ಷತಾ ಉಪಸ್ಥಿತರಿದ್ದರು . ವಿದ್ಯಾರ್ಥಿನಿ ಹಂಸಿನಿ ಭಿಡೆ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *