ಕಟಪಾಡಿ:(ಜು.13) ಕಟಪಾಡಿಯ ಎಸ್ ವಿ ಕೆ / ಎಸ್ ವಿ ಎಸ್ ಆಂಗ್ಲಮಾಧ್ಯಮ ಸಂಸ್ಥೆಯ ಶಿಕ್ಷಕ – ರಕ್ಷಕ ಸಂಘದ ಮಹಾಸಭೆ ಹಾಗೂ 2024 – 25 ಸಾಲಿನ ಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಎಸ್. ವಿ. ಎಸ್ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಚಂದ್ರಕಾಂತ್ ಪೈಯವರ ಅಧ್ಯಕ್ಷತೆ ಯಲ್ಲಿ ಜರುಗಿತು. ಸಂಸ್ಥೆಯ ಮೇಲೆ ವಿಶ್ವಾಸವಿರಿಸಿ ಮಕ್ಕಳನ್ನು ಶಾಲೆಗೆ ಸೇರಿಸಿದ್ದಕ್ಕಾಗಿ ಹೆತ್ತವರಿಗೆ ಮತ್ತು ಹಿತೈಷಿಗಳಿಗೆ ಅಭಿನಂದನೆ ಸಲ್ಲಿಸಿದರು.

ಇದನ್ನೂ ಓದಿ: ⭕ಕೊಯ್ಯೂರು : ವಿವಾಹಿತೆ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶೆಫಿನ್ ಸಂಸ್ಥೆಯ ಸ್ಥಾಪಕರು, ಜಿಸಿಐ ಯ ವ್ಯಕ್ತಿತ್ವ ವಿಕಸನ ತರಬೇತುದಾರ ಹಾಗೂ ವೃತ್ತಿಪರ ಮಾರ್ಗದರ್ಶಕರಾದ ಮನೋಜ್ ಕಡಬ ರವರು ಭಾಗವಹಿಸಿ ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಉಂಟಾಗುವ ಮಾನಸಿಕ ಹಾಗೂ ದೈಹಿಕ ಪರಿಣಾಮಗಳ ಬಗ್ಗೆ ತಿಳಿಸುತ್ತ, ಮೊಬೈಲ್ ನ್ನು ಹಿತಮಿತವಾಗಿ ಬಳಸಿದಾಗ ವ್ಯಕ್ತಿಯಲ್ಲಿ ಧನಾತ್ಮಕ ಬದಲಾವಣೆ ಉಂಟಾಗಲು ಸಾಧ್ಯಎಂದು ತಿಳಿಸಿ ಮಕ್ಕಳ ಪೋಷಕರು ಈ ಬಗ್ಗೆ ಜಾಗೃತರಾಗಬೇಕು ಎಂದು ಕರೆ ನೀಡಿದರು.

ಇನ್ನೊರ್ವ ಅತಿಥಿ ಕೆನರಾ ಬ್ಯಾಂಕಿನ ಹಿರಿಯ ಪ್ರಬಂಧಕರಾದ ಬಿ ಆರ್ ಹಮಾನಿ ಅವರು ವಿದ್ಯಾರ್ಥಿಗಳ ಜೀವನವು ಅತ್ಯಂತ ಮಹತ್ತರ ಘಟ್ಟವಾಗಿದ್ದು ಸರಿಯಾದ ಮಾರ್ಗ ದರ್ಶನದಿಂದ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದು ತಿಳಿಸುತ್ತಾ, ಶಿಕ್ಷಣವನ್ನು ಮುಂದುವರಿಸಲು ಅಗತ್ಯವಿರುವ ಸಾಲ ಸೌಲಭ್ಯವನ್ನು ತಮ್ಮ ಬ್ಯಾಂಕಿನಿಂದ ಪಡೆಯಬಹುದೆಂದು ಮಕ್ಕಳ ಹೆತ್ತವರಿಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಶೈಕ್ಷಣಿಕ ಸಹಪಠ್ಯ ಚಟುವಟಿಕೆಗಳಾದ ಯೋಗ, ಯಕ್ಷಗಾನ, ಕರಾಟೆ, ಭರತ ನಾಟ್ಯ, ಚಂಡೆ, ನೃತ್ಯ, ಆರ್ಟ್ ಮತ್ತು ಕ್ರಾಫ್ಟ್ ಮತ್ತು ಅಬಾಕಸ್ ಸಂಘಟನೆಗಳ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
2025 ಏಪ್ರಿಲ್ ನಲ್ಲಿ ನಡೆದ ಎಸ್ ಎಸ್ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ 100% ಪಲಿತಾಂಶ ಪಡೆದುದಕ್ಕಾಗಿ ಎಲ್ಲಾ ವಿದ್ಯಾರ್ಥಿಗಳನ್ನು ಅವರ ಹೆತ್ತವರೊಂದಿಗೆ ಗೌರವಿಸಲಾಯಿತು. ರಾಜ್ಯಮಟ್ಟದಲ್ಲಿ 8ನೇ ಸ್ಥಾನ ಗಳಿಸಿದ ಕೆ. ತನ್ವಿ ಕಾಮತ್ ಯನ್ನು ಶಾಲು ಹೊದಿಸಿ ಗೌರವಿಸಲಾಯಿತು. ಸನ್ಮಾನಿತರ ಪೈಕಿ ಕೆ ತನ್ವಿ ಕಾಮತ್ ಮತ್ತು ಮಾನ್ಯ ಸಾಲಿಯಾನ್ ಸಂಸ್ಥೆಯವರು ತಮ್ಮನ್ನು ಗೌರವಿಸಿದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು. ರಕ್ಷಕರ ಪರವಾಗಿ ಕಳೆದ ಸಾಲಿನ ಶಿಕ್ಷಕ – ರಕ್ಷಕ ಸಂಘದ ಉಪಾಧ್ಯಕ್ಷೆ ಮೋಹಿನಿ ಸುರೇಶ್ ರವರು ಸಂಸ್ಥೆಯ ಮತ್ತು ಅವರ ನಡುವಿನ ಬಾಂಧವ್ಯದ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದರು.

ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಸುದರ್ಶನ್ ಮಲ್ಯ, ಕೆ ವೆಂಕಟರಮಣ ಭಟ್, ಆಡಳಿತಾಧಿಕಾರಿ ಸುಧಾಕರ್ ಬ್ರಹ್ಯಾವರ್ , ಶಾಲಾ ಮುಖ್ಯ ಶಿಕ್ಷಕಿ ಶ್ವೇತಾ ಶೆಟ್ಟಿ ಮತ್ತು ಶಿಕ್ಷಕ – ರಕ್ಷಕ ಸಂಘದ ಉಪಾಧ್ಯಕ್ಷೆ ಪ್ರಿಯಾ ಶೆಣೈ ವೇದಿಕೆಯಲ್ಲಿ ಹಾಜರಿದ್ದರು.
ಸಾಧಕ ವಿದ್ಯಾರ್ಥಿಗಳ ಸಾಧನೆಯನ್ನು ಶಿಕ್ಷಕಿ ಆಶ್ವಿನಿ ಪರಿಚಯಿಸಿದರು. ವಿದ್ಯಾರ್ಥಿ ಆರಾಧನ ಮತ್ತು ತಂಡದವರು ಪ್ರಾರ್ಥಿಸಿದರು. ಶಿಕ್ಷಕಿ ದೀಪಿಕಾ ಮನೋಜ್ ಕಡಬ ರವರನ್ನು ಸಭೆಗೆ ಪರಿಚಯಿಸಿದರು. ಶಿಕ್ಷಕಿಯರಾದ ವಿದ್ಯಾ ಮತ್ತು ರೇಣುಕಾ ರವರು ಕಾರ್ಯಕ್ರಮ ನಿರ್ವಹಣೆಗೈದರು. ಶೈಕ್ಷಣಿಕ ಸಲಹೆಗಾರರಾದ ದೇವೇಂದ್ರ ನಾಯಕ್ ರವರು ಸ್ವಾಗತಿಸಿದರು. ಶಿಕ್ಷಕಿ ಶಿಲ್ಪ ವಂದನಾರ್ಪಣೆಗೈದರು. ಶಿಕ್ಷಕಿಯರಾದ ಉಮ ಶರ್ಮ, ಶಾರ್ಲೆಟ್ , ಜಯಲಕ್ಷ್ಮಿ ವಿನೋದಿನಿ ಸಹಕರಿಸಿದರು.

