Mon. Jul 14th, 2025

ಉಜಿರೆ: ಉಜಿರೆ ಸೈಂಟ್ ಜಾರ್ಜ್ ಚರ್ಚ್‌ ನಲ್ಲಿ ಯುವಜನ ಸಮ್ಮೇಳನ

ಉಜಿರೆ:(ಜು.13) ಉಜಿರೆ ಸೈಂಟ್ ಜಾರ್ಜ್ ಚರ್ಚ್‌ ನಲ್ಲಿ ಯುವಜನ ಸಮ್ಮೇಳನ ನಡೆಯಿತು. ಬೆಳಗ್ಗೆ 7.30 ಕ್ಕೆ ಬಲಿಪೂಜೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

ಇದನ್ನೂ ಓದಿ: ⭕ಕಿರುತೆರೆ ನಟಿ ಶ್ರುತಿಗೆ ಚಾಕು ಇರಿತ ಪ್ರಕರಣ

ಸೈಂಟ್ ಜಾರ್ಜ್ ಚರ್ಚಿನ ಧರ್ಮಗುರುಗ ಫಾ. ಬಿಜು ಮ್ಯಾಥ್ಯೂ ಅಂಬಟ್ ರವರು ಬಲಿಪೂಜೆ ಅರ್ಪಿಸಿದರು. ಚರ್ಚಿನ ಎಲ್ಲ ಯುವಕ ಯುವತಿಯರು ಬಲಿಪೂಜೆಯಲ್ಲಿ ಕಾಣಿಕೆಯನ್ನು ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದರು.

ಎಲ್ಲ ಯುವಜನರಿಗೆ ಚರ್ಚಿನ ಹೆಸರಲ್ಲಿ ಶುಭ ಹಾರೈಸಲಾಯಿತು. ತದನಂತರ ನಡೆದ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯದಲ್ಲಿ ಅಧ್ಯಕ್ಷರಾಗಿ ಅಶ್ವಿನ್ ತೋಟಕಾಟ್ ರನ್ನು ನೇಮಿಸಲಾಯಿತು. ಹಾಲಿ ಅಧ್ಯಕ್ಷ ಜಿನ್ಸನ್ ತೋಟಂಗರ ರವರಿಗೆ ಧನ್ಯವಾದ ಸಮರ್ಪಿಸಲಾಯಿತು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

Leave a Reply

Your email address will not be published. Required fields are marked *