Tue. Jul 15th, 2025

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿಯಲ್ಲಿ ಗಿಡ ನಾಟಿ ಕಾರ್ಯಕ್ರಮ

ಬಂಟ್ವಾಳ:(ಜು.15) ನೈಸರ್ಗಿಕ ವೀಪತಿಗೆ ಮೂಲ ಕಾರಣವೆ ಅರಣ್ಯನಾಶ. ಜಲ ನೆಲ ಪ್ರಾಣಿ ಸಂಕುಲಗಳು ದೇವರ ಆಸ್ತಿ ಅವುಗಳನ್ನು ಸರಿಯಾಗಿ ನಡೆಸುವ ಜವಾಬ್ದಾರಿ ನಮ್ಮದು. ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ .ಕಳೆದ 5 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿಯಲ್ಲಿ 7 ಕೋಟಿ ಕಾಡುಹಣ್ಣಿನ ಗಿಡಗಳನ್ನು ನೆಟ್ಟು ರಕ್ಷಣೆ ಮಾಡಲಾಗುತ್ತಿದೆ ಎಂದು ಕೃಷಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಮನೋಜ್ ಮಿನೇಜಸ್ ಹೇಳಿದರು.

ಇದನ್ನೂ ಓದಿ: 🟠ಬಂಟ್ವಾಳ : ಕಟ್ಟೆಮಾರ್ ಶ್ರೀ ಮಂತ್ರದೇವತಾ ಜನಸೇವಾ ಟ್ರಸ್ಟ್ ವತಿಯಿಂದ ಮಗುವಿನ ಚಿಕಿತ್ಸೆಗೆ ಸಹಾಯಹಸ್ತ

ಅವರು ಸೋಮವಾರ ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಬಬ್ಬರ್ಯಬೈಲು ಇಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ರಿ.) ಬಂಟ್ವಾಳ. ಪ್ರಗತಿ ಬಂದು ಸ್ವ- ಸಹಾಯ ಸಂಘಗಳ ಒಕ್ಕೂಟ ಬಂಟ್ವಾಳ ತಾಲೂಕು, ಉಪ ಅರಣ್ಯ ಇಲಾಖೆ ಬಂಟ್ವಾಳ ತಾಲೂಕು, ಶೌರ್ಯ ವಿಪತ್ತು ನಿರ್ವಹಣಾ ಘಟಕ ಬಂಟ್ವಾಳ ತಾಲೂಕು, ಇವುಗಳ ಸಹಯೋಗದೊಂದಿಗೆ ನಡೆದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿಯಲ್ಲಿ ಬಬ್ಬರ್ಯ ದೈವಸ್ಥಾನದ ವಠಾರದಲ್ಲಿ ಗಿಡ ನೆಟ್ಟು ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾದ ಶ್ರೀ ಕೃಷ್ಣ ನಾಯ್ಕ್ ಉಪವಲಯ ಅರಣ್ಯಾಧಿಕಾರಿ ಬಂಟ್ವಾಳರವರು ಮಾತನಾಡುತ್ತಾ ಪ್ರಪಂಚದಲ್ಲಿ ಜನ ಸಂಕುಲ ಉತ್ತಮ ರೀತಿಯಲ್ಲಿ ಬದುಕಬೇಕಾದರೆ 33% ಮರಗಿಡಗಳು ಬೇಕು, ಅರಣ್ಯನಿಂದ ನಮಗೆ ಹಲವಾರು ಉಪಯೋಗಗಳಿದ್ದರು ನಾವು ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ ಮಾಡುತ್ತಾ ಬಂದಿದ್ದೇವೆ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಳೆಗಳು ಆಗುತ್ತದೆ ಆದರೆ ಮಳೆಯ ಬೀಳುವ ದಿನಗಳು ಕಡಿಮೆ ಆಗುತ್ತಿದೆ ಇದು ಹೆಚ್ಚಾಗಬೇಕು ಇದಕ್ಕೆ ಅರಣ್ಯದ ಅವಶ್ಯಕತೆ ಎಂದರು.

ಈ ಸಂದರ್ಭದಲ್ಲಿ ಶೌರ್ಯ ಘಟಕ ಪ್ರತಿನಿಧಿಗಳಿಗೆ ಹಣ್ಣಿನ ಗಿಡ ವಿತರಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಅಧ್ಯಕ್ಷ ರೊನಾಲ್ಡ್ ಡಿಸೋಜ, ಸಿದ್ದಕಟ್ಟೆ ವಲಯ ಅಧ್ಯಕ್ಷ ಜಗದೀಶ್ ಕೊಯ್ಲ, ,ಜಿಲ್ಲಾ ನಿರ್ದೇಶಕರಾದ ದಿನೇಶ್ ಡಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ರಾಯೀ, ಹರಿಶ್ಚಂದ್ರ ಶೆಟ್ಟಿ ಬಬ್ಬರ್ಯಬೈಲು, ರಾಧಾಕೃಷ್ಣ ಆಚಾರ್ಯ, ಹರ್ಷೇಂದ್ರ ಹೆಗ್ಡೆ, ಶೌರ್ಯ ಸಮಿತಿಯ ಮಾಸ್ಟರ್ ಪ್ರಕಾಶ್ ,ಕ್ಯಾಪ್ಟನ್ ಕೃಷ್ಣಪ್ಪ ನಾಯ್ಕ, ಪ್ರವೀಣ್ ಪೂಜಾರಿ, ಸದಾನಂದ ನಾವೂರ, ಶಶಿಧರ ಆಚಾರ್ಯ, ಶ್ರೀಮತಿ ಶಾಲಿನಿ, ಶೌರ್ಯ ಕಾರ್ಯಕ್ರಮದ ಯೋಜನಾಧಿಕಾರಿಗಳಾದ ಜಯವಂತ ಪಟೆಗಾರ,, ಕಿಶೋರ್ ಕುಮಾರ್, ಜನಜಾಗೃತಿ ಮೇಲ್ವಿಚಾರಕ ಶ್ರೀ ನಿತೇಶ್ ಕೆ ಉಪಸ್ಥಿತರಿದ್ದರು.

ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯನಂದ ಪಿ ಸ್ವಾಗತಿಸಿ, ವಲಯ ಮೇಲ್ವಿಚಾರಕಿ ಹರಿಣಾಕ್ಷಿ ವಂದಿಸಿ, ತಾಲೂಕು ಕೃಷಿ ಅಧಿಕಾರಿ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನಾ ಸಭಾ ಕಾರ್ಯಕ್ರಮದ ನಂತರ ಶೌರ್ಯ ತಂಡದ ಸದಸ್ಯರಿಂದ ಗಿಡ ನಾಟಿ  ಮಾಡಲಾಯಿತು
.

Leave a Reply

Your email address will not be published. Required fields are marked *