ತೆಕ್ಕಾರು: (ಜು.18) ಪತ್ನಿಯನ್ನು ಪತಿಯೇ ಕೊಂದ ಘಟನೆ ಬೆಳ್ತಂಗಡಿಯ ತೆಕ್ಕಾರು ಎಂಬಲ್ಲಿ ನಡೆದಿದೆ.

ಬಾಜಾರುವಿನ ರಫೀಕ್ ಎಂಬಾತ ತನ್ನ ಪತ್ನಿ ಝೀನತ್ ರನ್ನು ಚಾಕುವಿನಿಂದ ಇರಿದು ಕೊಲೆಗೈದಿರುವುದಾಗಿ ತಿಳಿದುಬಂದಿದೆ.
ಕೌಟುಂಬಿಕ ಕಲಹ ಮುಂದುವರಿದಿದ್ದರಿಂದ ಪತಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.


ರಫೀಕ್ ವಿದೇಶದಲ್ಲಿ ಉದ್ಯೋಗದಲ್ಲಿದ್ದ. ಎರಡು ವರ್ಷದ ಹಿಂದೆ ವಿದೇಶದ ಉದ್ಯೋಗ ತ್ಯಜಿಸಿ ತೆಕ್ಕಾರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಉಪ್ಪಿನಂಗಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

