Hansika Motwani :(ಜು.21) ಹನ್ಸಿಕಾ ಮೋಟ್ವಾನಿ ಹಾಗೂ ಸೊಹೈಲ್ ಖತುರಿಯಾ ಅವರು 2022ರಲ್ಲಿ ವಿವಾಹ ಆದರು. ಆದರೆ, ಈ ದಾಂಪತ್ಯದಲ್ಲಿ ಯಾವುದೂ ಸರಿ ಇಲ್ಲ ಎಂಬ ವದಂತಿಗಳು ಹುಟ್ಟಿಕೊಂಡಿದೆ ಎಂದರೆ ನಂಬಲೇಬೇಕು. ಈ ವಿಚಾರ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಸೊಹೈಲ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಹನ್ಸಿಕಾ ಅವರ ಸ್ಪಷ್ಟನೆ ಸರಿ ಇಲ್ಲ ಎಂದು ಫ್ಯಾನ್ಸ್ ಆರೋಪಿಸುತ್ತಾ ಇದ್ದಾರೆ.

ಇದನ್ನೂ ಓದಿ: ⭕ಪಡುಬಿದ್ರಿ : ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್
ಹನ್ಸಿಕಾ ಮೋಟ್ವಾನಿ ಅವರು ಡಿಸೆಂಬರ್ 2022ರಲ್ಲಿ ವಿವಾಹ ಆದರು. ಇವರು ಮದುವೆ ಆದ ಬಳಿಕ ಹಲವು ಕಡೆಗಳಲ್ಲಿ ಸುತ್ತಾಟ ನಡೆಸಿದ್ದಾರೆ. ಈಗ ಹನ್ಸಿಕಾ ಹಾಗೂ ಸೊಹೈಲ್ ಸಂಬಂಧದಲ್ಲಿ ಬಿರುಕು ಉಂಟಾಗಿದೆ. ಪರಿಣಾಮ ಹನ್ಸಿಕಾ ಅವರು ತಾಯಿ ಮನೆಗೆ ಶಿಫ್ಟ್ ಆಗಿದ್ದಾರಂತೆ. ಅಂದರೆ ಇಬ್ಬರೂ ಬೇರೆ ಆಗಿ ವಾಸ ಮಾಡುತ್ತಿರುವುದು ಮೂಲಗಳಿಂದ ಸ್ಪಷ್ಟವಾಗಿದೆ ಎಂದೇ ಹೇಳಬಹುದು.

ಈ ಬಗ್ಗೆ ಸೊಹೈಲ್ ಅವರು ಸ್ಪಷ್ಟನೆ ನೀಡಿದ್ದಾರೆ. ‘ಇದು ಸತ್ಯ ಅಲ್ಲ’ ಎಂದು ಹೇಳಿದ್ದಾರೆ. ಆದರೆ, ಮುಂದೆ ಏನನ್ನೂ ಹೇಳಿಲ್ಲ. ಈ ವಿಚಾರ ಸದ್ಯ ಚರ್ಚೆಯ ಕೇಂದ್ರ ಬಿಂದು ಆಗಿದೆ. ಜೈಪುರದಲ್ಲಿ ಹನ್ಸಿಕಾ ಹಾಗೂ ಸೊಹೈಲ್ ಅವರು ವಿವಾಹ ಆದರು. ಇವರ ಮದುವೆ ಅದ್ದೂರಿಯಾಗಿ ನೆರವೇರಿತು. ಈಗ ಇವರು ಬೇರೆ ಆಗುತ್ತಿರುವುದು ಸಾಕಷ್ಟು ಶಾಕಿಂಗ್ ಎನಿಸಿದೆ.

ಸೊಹೈಲ್ಗೆ ಇದು ಮೊದಲ ಮದುವೆ ಅಲ್ಲವೇ ಅಲ್ಲ. ಈ ಮೊದಲು ಅವರು ರಿಂಕಿ ಎಂಬುವವರನ್ನು ಮದುವೆ ಆಗಿದ್ದರು. ನಂತರ ವಿಚ್ಛೇದನ ಆಯಿತು. ಹೀಗಾಗಿ, ಹನ್ಸಿಕಾ ಪತ್ನಿ ಬಿಟ್ಟವನನ್ನು ಮದುವೆ ಆಗುತ್ತಿದ್ದಾರೆ ಎಂದಾಗ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ವಿಚಿತ್ರ ಎಂದರೆ ಹನ್ಸಿಕಾ ಅವರು ರಿಂಕಿಯ ಗೆಳತಿಯೇ ಆಗಿದ್ದರು. ಈಗ ಇವರ ಸಂಬಂಧ ಕೂಡ ಕೊನೆ ಆಗುತ್ತಾ ಇದೆ ಅನ್ನೋದು ವಿಶೇಷ. ಹನ್ಸಿಕಾ ಅವರು ದಕ್ಷಿಣ ಭಾರತದಲ್ಲಿ ಬ್ಯುಸಿ ಇದ್ದಾರೆ. ಅವರು ಪುನೀತ್ ಜೊತೆ ‘ಬಿಂದಾಸ್’ ಸಿನಿಮಾದಲ್ಲಿ ನಟಿಸಿದ್ದರು.

