ಮಂಗಳೂರು :(ಜು.19) ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ
ಇದನ್ನೂ ಓದಿ: https://uplustv.com/2024/07/19/c-arm-machine-ಉಜಿರೆ-ಎಸ್-ಡಿ-ಎಂ-ಮಲ್ಟಿ-ಸ್ಪೆಷಾಲಿಟಿ-ಆಸ್ಪತ್ರೆಯಲ್ಲಿ-ಹೊಸ-ಅತ್ಯಾಧುನಿಕ/
ಸಿಎ ವಿದ್ಯಾರ್ಥಿನಿ ದಾರುಣವಾಗಿ ಮೃತಪಟ್ಟ ಘಟನೆ ಮಂಗಳೂರು ಹೊರವಲಯದ ಗುರುಪುರ ಎಂಬಲ್ಲಿ ಇಂದು ನಡೆದಿದೆ.
ಮಳೆಯಿಂದಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸಿ. ಎ ವಿದ್ಯಾರ್ಥಿನಿ ಆಶ್ನಿ (21) ಮೃತಪಟ್ಟಿದ್ದು
ಗದ್ದೆಯಲ್ಲಿ ದನ ಕಟ್ಟಿ ಹಾಕಲು ಮನೆಯಿಂದ ತೆರಳಿದ್ದ ವೇಳೆ ಈ ಅವಘಡ ನಡೆದಿದೆ.
ತಂದೆಯೊಂದಿಗೆ ಗದ್ದೆಗೆ ಹೋಗಿದ್ದ ಆಶ್ನಿ ಜೊತೆಗೆ ಮನೆಯ ಸಾಕು ನಾಯಿ ಕೂಡಾ ತೆರಳಿದ್ದು,
ನಾಯಿಗೆ ಮೊದಲು ವಿದ್ಯುತ್ ಶಾಕ್ ತಗುಲಿದೆ. ಶಾಕ್ ಹೊಡೆದಿದ್ದರಿಂದ ನಾಯಿ ಗದ್ದೆಯಲ್ಲಿ ಬಿದ್ದು ಹೊರಳಾಡುವುದನ್ನು ನೋಡಿ ಆಶ್ನಿ ನಾಯಿಯ ರಕ್ಷಣೆಗೆ ಮುಂದಾಗಿದ್ದು
ಈ ವೇಳೆ ಗಮನಿಸದೇ ತುಂಡಾಗಿ ಬಿದ್ದಿದ್ದ ತಂತಿ ತುಳಿದು ಶಾಕ್ ಗೆ ಒಳಗಾಗಿ ಮೃತಪಟ್ಟಿದ್ದಾಳೆ.
ಭಾರೀ ಪ್ರಮಾಣದಲ್ಲಿ ಗಾಳಿ ಮತ್ತು ಮಳೆಯಿಂದ ವಿದ್ಯುತ್ ತಂತಿ ತುಂಡಾಗಿ ಗದ್ದೆಯಲ್ಲಿ ಬಿದ್ದಿದ್ದರಿಂದ ಈ ಅನಾಹುತ ನಡೆದಿದೆ.