Sun. Jul 27th, 2025

Bangalore: ಪ್ರೀತಿ ಮಾಯೇ ಹುಷಾರು – MBA ವಿದ್ಯಾರ್ಥಿನಿಗೆ ಕಾರು ಚಾಲಕನ​ ಮೇಲೆ ಲವ್ – ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆ – ಭೀಮನ ಅಮಾವಾಸ್ಯೆಯಂದು ಬಂತು ಆ ಒಂದು ಕಾಲ್‌..! – ಆಮೇಲೆ ನಡೆದಿದ್ದೇ ಬೇರೆ..!

ಬೆಂಗಳೂರು (ಜು.26): ಯಲಹಂಕದ ಖಾಸಗಿ ಕಾಲೇಜಿನಲ್ಲಿ ಎಂಬಿಎ ವಿದ್ಯಾಭ್ಯಾಸ ಮಾಡುತ್ತಿದ್ದ ಕನಕಪುರದ ನಿವಾಸಿ ಸ್ಪಂದನಾ ಇನ್ಸ್ಟಾಗ್ರಾಂ ನಲ್ಲಿ ಅಭಿಷೇಕ್ ಪರಿಚಯವಾಗಿದ್ದ.‌

ಇದನ್ನೂ ಓದಿ: ⭕ಪುತ್ತೂರು: ಫೈನಾನ್ಸ್ ಮ್ಯಾನೇಜರ್ ನಿಂದ ವ್ಯಕ್ತಿಗೆ ಹಲ್ಲೆ!!

ಬಳಿಕ ಕಾಡಿಬೇಡಿ ಮನೆಯವರ ವಿರೋಧದ ನಡುವೆಯೂ ಸ್ಪಂದನಾಳನ್ನು ಮದುವೆಯಾಗಿದ್ದ. ಮಾದನಾಯಕನಹಳ್ಳಿಯ ಅಂಚೆ ಪಾಳ್ಯದಲ್ಲಿ ಅಭಿಷೇಕ್-ಸ್ಪಂದನ ವಾಸವಾಗಿದ್ದರು. ಆದ್ರೆ, ಮದುವೆಯಾದ ಒಂದೂವರೆ ವರ್ಷದಲ್ಲೇ ಸ್ಪಂದನಾ ದುರಂತ ಸಾವು ಕಂಡಿದ್ದಾಳೆ.


ಭೀಮನ ಅಮಾವಾಸ್ಯೆ ಹಿನ್ನೆಲೆ ಗಂಡನಿಗೆ ಬೆಳಿಗ್ಗೆ 10 ಗಂಟೆಗೆ ಖುಷಿಯಿಂದಲೇ ಪೂಜೆ ಮಾಡಿದ್ದಳು. ಆದರೆ ಅವರಿಬ್ಬರ ಖುಷಿ ಕೇವಲ ಕ್ಷಣಮಾತ್ರವಾಗಿತ್ತು. ಆದ್ರೆ, 11 ಗಂಟೆಗೆ ಅಭಿಷೇಕ್ ಗೆ ಅವರ ಆಫೀಸ್ ನಲ್ಲಿದ್ದ ಯುವತಿ ಮಾಡಿದ ಅದೊಂದು ಫೋನ್ ಕರೆ ಇಬ್ಬರ ನಡುವೆ ಜಗಳ ಶುರುವಾಗಿತ್ತು. ಮೊದಲೇ ಗಂಡನ ಮೇಲೆ ಅನುಮಾನದಲ್ಲಿದ್ದ ಸ್ಪಂದನಾ ಮಾನಸಿಕವಾಗಿ ಕುಗ್ಗಿದ್ದಳು. ಬಳಿಕ ರಾತ್ರಿ 12:45 ಸ್ಪಂದನಾ ತಂಗಿಗೆ ಮೆಸೇಜ್ ಮಾಡಿ ಬಳಿಕ ಮನೆಯ ಕಿಟಕಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದ್ರೆ, ಆತ್ಮಹತ್ಯೆಗೂ ಮುನ್ನ ಸ್ಪಂದನಾ, ತನ್ನ ತಂಗಿಗೆ ಮೆಸೇಜ್ ಮಾಡಿದ್ದು, ನನ್ನ ಸಾವಿಗೆ ನನ್ನ ಗಂಡ ಅವರ ತಂದೆತಾಯಿ ಹಾಗೂ ಅವರ ಕಚೇರಿಯಲ್ಲಿದ್ದವರು ಕಾರಣ ಎಂದು ಮೆಸೇಜ್ ಮಾಡಿ ನೇಣಿಗೆ ಶರಣಾಗಿದ್ದಾಳೆ.


ಮತ್ತೊಂದೆಡೆ ಮದುವೆಯಾದ ಬಳಿಕ ಸ್ಪಂದನಾಗೆ ಅಭಿಷೇಕ್​ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಇದೆ. ಅಭಿಷೇಕ್​ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದ ಬಗ್ಗೆ ಸ್ಪಂದನಾ ತಂದೆಗೆ ಹೇಳಿದ್ದಳಂತೆ. ಬಳಿಕ 5 ಲಕ್ಷ ಹಣವನ್ನು ಕೊಟ್ಟು ರಾಜಿ ಸಂಧಾನ ಮಾಡಿಸಿದ್ದರಂತೆ. ಮತ್ತೆ ತಂದೆಗೆ ಕರೆ ಮಾಡಿ ಅತ್ತೆ ಮಾತನ್ನು ಕೇಳಿ ನನ್ನ ಗಂಡ ಕಿರುಕುಳ ಕೊಡ್ತಿದ್ದಾನೆ ಅಂಥ ಕಣ್ಣೀರಿಟ್ಟಿದ್ದಳಂತೆ ಸ್ಪಂದನಾ. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಕರೆ ಮಾಡಿ ನಿಮ್ಮ ಮಗಳು ಸಾವನ್ನಪ್ಪಿದ್ದಾಳೆ ಎಂಬ ವಿಚಾರ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಆಸ್ಪತ್ರೆಗೆ ಹೋಗಿ ನೋಡಿದಾಗ ಮಗಳು ಪ್ರಾಣ ಬಿಟ್ಟಿದ್ದಳು.

ನೇಣು ಬಿಗಿದ ಸ್ಥಿತಿಯಲ್ಲಿ ಮೃತ ಸ್ಪಂದನಾ ಬಾಡಿ ಇತ್ತಂತೆ. ಬಳಿಕ ಯಾರಿಗೂ ಮಾಹಿತಿ ಕೊಡದೇ ತಾವೇ ಮೃತದೇಹವನ್ನು ಇಳಿಸಿ ಆಸ್ಪತ್ರೆಗೆ ಸಾಗಿಸಿದ್ದಾರಂತೆ. ಅಲ್ಲದೇ, ಸ್ಪಂದನಾ ಮೈ ಮೇಲೆ ಗಾಯದ ಗುರುತುಗಳಿವೆ ಅನ್ನೋ ಆರೋಪ ಕೂಡ ಇದೆ. ಹೀಗಾಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಇದಾದ ಬಳಿಕ ಸ್ಪಂದನಾ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುವುದು. ಈ ಘಟನೆ ಸಂಬಂಧ ಪತಿ ಅಭಿಷೇಕ್ ಮತ್ತು ಅತ್ತೆ ಲಕ್ಷ್ಮಮ್ಮ ವಿರುದ್ಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಬಳಿಕ ಸ್ಪಂದನಾ ಸಾವಿಗೆ ಅಸಲಿ ಕಾರಣ ಏನು ಎನ್ನುವುದು ತಿಳಿದುಬರಲಿದೆ.

Leave a Reply

Your email address will not be published. Required fields are marked *