Sun. Jul 27th, 2025

Bengaluru: “ಬೆಂಗಳೂರಿಗರ ತಲೆಯಲ್ಲಿ ಬುದ್ದಿ ಇಲ್ಲ” ನಾಲಿಗೆ ಹರಿಬಿಟ್ಟ ಉತ್ತರ ಭಾರತದ ಯುವತಿ

ಬೆಂಗಳೂರು (ಜು.26): ಇತ್ತೀಚಿಗೆ ಅನ್ಯ ರಾಜ್ಯದ ಯುವಕ-ಯುವತಿಯರು ಬೆಂಗಳೂರು ಮತ್ತು ಬೆಂಗಳೂರಿನ ಜನರ ಹಾಗೂ ಕನ್ನಡದ ಬಗ್ಗೆ ಅವಹೇಳಕಾರಿಯಾಗಿ ಮಾತನಾಡುವುದು ಹೆಚ್ಚಾಗಿದೆ.

ಇದನ್ನೂ ಓದಿ: 📷ಉಜಿರೆ: ರಮ್ಯಾ 1 ಗ್ರಾಂ ಗೋಲ್ಡ್‌ & ಫ್ಯಾನ್ಸಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದು ಕೃಷ್ಣ ಫೋಟೋ ಸ್ಪರ್ಧೆ

ಈ ಹಿಂದೆ ಬ್ಯಾಂಕ್​ವೊಂದರ ಮಹಿಳಾ ಸಿಬ್ಬಂದಿ ಕನ್ನಡ ಮಾತನಾಡುವುದಿಲ್ಲ ಅಂತ ದುರಹಂಕಾರವಾಗಿ ವರ್ತಿಸಿದ್ದಳು. ಓಲಾ ಬುಕ್ಕಿಂಗ್​ ಸಂಬಂಧ ಆಟೋ ಚಾಲಕ ಮತ್ತು ಯುವತಿ ನಡುವೆ ವಾಗ್ವಾದ ನಡೆದಿತ್ತು. ಇಷ್ಟೇ ಅಲ್ಲದೇ ಉತ್ತರ ಭಾರತದ ಟೆಕ್ಕಿ ಮಹಿಳೆ ಆಟೋ ಚಾಲಕನಿಗೆ ಸಾರ್ವಜನಿಕ ಸ್ಥಳದಲ್ಲಿ ಚಪ್ಪಲಿಯಲ್ಲಿ ಹೊಡೆದಿದ್ದಳು. ಇದೀಗ ಮತ್ತೊಬ್ಬ ಉತ್ತರ ಭಾರತದ ಯುವತಿ ಬೆಂಗಳೂರಿನ ಜನರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾಳೆ. ಬೆಂಗಳೂರಿಗರ ತಲೆಯಲ್ಲಿ ಬುದ್ದಿ ಇಲ್ಲ ಎಂದು ಒಡಿಶಾ ಮೂಲದ ಯುವತಿ ನೇಹಾ ಬಿಸ್ವಾಲ್ ದುರಹಂಕಾರದ ಮಾತುಗಳನ್ನು ಆಡಿದ್ದಾಳೆ.

ನೇಹಾ ಬಿಸ್ವಾಲ್ ಬೆಂಗಳೂರಿನಲ್ಲಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು, ಪಿಜಿಯಲ್ಲಿ ವಾಸವಾಗಿದ್ದಾಳೆ. ಈಕೆ ಬೆಂಗಳೂರು ಜನರ ಬಗ್ಗೆ ಕೆಟ್ಟದಾಗಿ ಮಾತನಾಡಿ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್​ ಆಗಿದೆ. ಯುವತಿ ನೇಹಾ ಬಿಸ್ವಾಲ್ ವಿಡಿಯೋದಲ್ಲಿ ಹೇಳಿರುವಂತೆ, “ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ನನ್ನ ಪಕ್ಕದಲ್ಲೇ ಕಾರುವೊಂದು ಪಾಸ್​ ಆಗಿದೆ. ಆಗ, ರಸ್ತೆ ಮೇಲೆ ನಿಂತಿದ್ದ ನೀರು ನನ್ನ ಮೈಮೇಲೆ ಹಾರಿದೆ. ಮುಖಕ್ಕೆ ಸಿಡಿದಿದೆ” ಎಂದು ಹೇಳಿದ್ದಾಳೆ.

ಮುಂದುವರೆದು ನೇಹಾ ಬಿಸ್ವಾಲ್ ​ಬೆಂಗಳೂರಿಗರಿಗೆ ತಲೆಯಲ್ಲಿ ಬುದ್ದಿ ಇಲ್ಲ. ಜೋರು ಮಳೆ ಬರುತ್ತಿದ್ದರೂ, ವಾಹನವನ್ನು ಜೋರಾಗಿ ಓಡಿಸುತ್ತಾರೆ. ಬೆಂಗಳೂರಿಗರು ಅನಕ್ಷರಸ್ಥರು. ಚೂ*** ಥೂ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಕೋಪದಲ್ಲಿ ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಟ್ಟ ನೇಹಾ ಬಿಸ್ವಾಲ್​ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕನ್ನಡಿಗರು ಕಾಮೆಂಟ್​ ಮೂಲಕ ನೇಹಾ ಬಿಸ್ವಾಲ್​ಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *