ಕಾಶಿಪಟ್ಣ:(ಜು.28) ಜನಗಳಿಗೆ ಕಸ ಹಾಕಬೇಡಿ ಎಂದು ಎಷ್ಟೇ ಬುದ್ಧಿವಾದ ಹೇಳಿದರೂ ಜನರು ಕ್ಯಾರೇ ಎನ್ನದೆ ಕಸ ಹಾಕುತ್ತಾರೆ. ಜನರು ಕಸ ಹಾಕುವುದನ್ನು ತಡೆಗಟ್ಟಲು ಕಾಶಿಪಟ್ಣದ “ಕ್ಯಾಪ್ಸಿ ಫ್ರೆಂಡ್ಸ್” ತಂಡದವರು ಗ್ರಾಮವನ್ನು ಸಂಪರ್ಕಿಸುವ ಮುರಂತಕಾಡು ಸೇತುವೆಗೆ ನೆಟ್ ಅಳವಡಿಸಿದ್ದರು.

ಇದನ್ನೂ ಓದಿ: 🔴ಕೊಡಿಪ್ಪಾಡಿ: ಕಬಕ ಬ್ಲಾಕ್ ನ ಕೊಡಿಪ್ಪಾಡಿಯಲ್ಲಿ ಹಲವು ಯುವಕರು SDPI ಪಕ್ಷಕ್ಕೆ ಸೇರ್ಪಡೆ
ಆದರೆ ಜನರಿಗೆ ಬುದ್ದೀ ಇಲ್ಲದೆ , ಪರಿಸರದ ಬಗ್ಗೆ ಎಳ್ಳಷ್ಟು ಕಾಳಜಿಯಿಲ್ಲದ ಮನುಜರು ಈಗಲೂ ಸೇತುವೆಯ ಮೇಲೆ ಅಥವಾ ರಸ್ತೆ ಬದಿಯಲ್ಲಿ ಕಸ ಎಸೆಯುವುದನ್ನು ಮುಂದುವರಿಸಿರುವ ಪರಿಣಾಮ ಪ್ರತಿ ವರ್ಷ ಕಸಗಳ ರಾಶಿ ಕಂಡುಬರುತ್ತಿದೆ.
ಇದನ್ನು ಕಂಡ “ಕ್ಯಾಪ್ಸಿ ಫ್ರೆಂಡ್ಸ್ ಕಾಶಿಪಟ್ಣ” ತಂಡದವರು ಜುಲೈ.27 ರಂದು ಸ್ವಚ್ಛತಾ ಕಾರ್ಯವನ್ನು ನಡೆಸಿದರು. ಜೊತೆಗೆ ಗ್ರಾಮದ ಸೌಂದರ್ಯವನ್ನು ಹೆಚ್ಚಿಸುವ ಸಲುವಾಗಿ ಮೊದಲ ಪ್ರಯತ್ನವೆಂಬಂತೆ ರಸ್ತೆ ಬದಿಯಲ್ಲಿ ಗಾರ್ಡನ್ ಗಿಡವನ್ನು ನೆಡುವ ಕೆಲಸವನ್ನು ಕೂಡ ಮಾಡಿದ್ದಾರೆ ಕ್ಯಾಪ್ಸಿ ಫ್ರೆಂಡ್ಸ್ ಕಾಶಿಪಟ್ಣ” ತಂಡ. ಮುಂದಿನ ದಿನಗಳಲ್ಲಿ ಗ್ರಾಮದೊಳಗೆ ಅವಕಾಶ ಇದ್ದ ಕಡೆಯೆಲ್ಲಾ ಗಾರ್ಡನ್ ನಿರ್ಮಿಸುವ ಜೊತೆಗೆ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯವನ್ನು ಮಾಡಲಿದ್ದೇವೆ ಎಂದು ತಂಡದವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷರು ಹಾಗೂ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದರು.


