ಉಜಿರೆ: (ಜು.30) NABH ಪುರಸ್ಕೃತ ಉಜಿರೆಯ ಬೆನಕ ಹೆಲ್ತ್ ಸೆಂಟರ್ ಆವರಣದಲ್ಲಿ ದಿನಾಂಕ 30.07.2025 ನೇ ಬುಧವಾರ ಹಮ್ಮಿಕೊಳ್ಳಲಾದ ಬಂಜೆತನ ನಿವಾರಣೆ ಮತ್ತು ಸ್ತ್ರೀರೋಗ ತಪಾಸಣೆಯ ಉಚಿತ ಶಿಬಿರವನ್ನು ಹಮ್ಮಿಕೊಂಡಿದ್ದು,

ಇದನ್ನೂ ಓದಿ: 🟢ಬೆಳ್ತಂಗಡಿ: ಡಿಜಿಟಲ್ ಮಾರ್ಕೆಟಿಂಗ್ ಮತ್ತು ಸೈಬರ್ ಸೆಕ್ಯೂರಿಟಿ ಸ್ಕ್ಯಾಮ್ ನ ಬಗ್ಗೆ ಮಾಹಿತಿ ಕಾರ್ಯಾಗಾರ
ಅದರ ಉದ್ಘಾಟನೆ ನೆರವೇರಿಸಿ ಮಾತನಾಡಿದ ವೈದ್ಯಕೀಯ ನಿರ್ದೇಶಕರಾದ ಡಾ.ಗೋಪಾಲಕೃಷ್ಣರವರು ಬಂಜೆತನ ಇವತ್ತಿನ ಕಾಲದಲ್ಲಿ ಶಾಪವಾಗಿಲ್ಲ, ವೈಜ್ಞಾನಿಕ ತಂತ್ರಜ್ಞಾದಿಂದ ದಂಪತಿಗಳು ತಮ್ಮದೇ ಮಗುವನ್ನು ಪಡೆಯಬಹುದಾಗಿದೆ.
ಯಾಕೆಂದರೆ ಪ್ರತಿ ದಂಪತಿಗಳಿಗೂ ಸ್ವಂತ ಮಗು ಬೇಕೆನ್ನುವ ಆಸೆ ಇದ್ದೇ ಇರುತ್ತದೆ. ನಮ್ಮ ಆಸ್ಪತ್ರೆಯ ಡಾ.ನವ್ಯ ಭಟ್ ರವರು ಇದೇ ವಿಷಯದಲ್ಲಿ ಪರಿಣಿತರಾಗಿದ್ದು ಅವರ ಸಲಹೆ ಮತ್ತು ಸೂಚನೆಗಳನ್ನು ಪಾಲಿಸಿ ಮಗುವನ್ನು ಪಡೆಯಲು ಸಾಧ್ಯವಾಗುತ್ತದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

IVF ತಜ್ಞೆ ಡಾ.ನವ್ಯ ಭಟ್ ಇವರು ಈ ಕುರಿತು ವಿವರವಾದ ಮಾಹಿತಿ ನೀಡಿ ಮಕ್ಕಳ ಕನಸು ಎಲ್ಲರಿಗೂ ಸಮಾನ, ಇಂದು ಅದನ್ನು ಎತ್ತಿ ಹಿಡಿಯಲು ವಿಜ್ಞಾನ ಕೈ ಜೋಡಿಸಿದೆ, ಯಾವುದೇ ಆತಂಕವಿಲ್ಲದೆ ಈ ಉಚಿತ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಲು ವಿನಂತಿಸಿದರು. ಡಾ.ಭಾರತಿ ಜಿ ಕೆ ವಂದನಾರ್ಪಣೆಗೈದ ಕಾರ್ಯಕ್ರಮದಲ್ಲಿ PRO ಎಸ್ ಜಿ ಭಟ್ ಸ್ವಾಗತಿಸಿ, ನಿರೂಪಿಸಿದರು.

