ಬೆಳ್ತಂಗಡಿ :(ಆ.1) ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶ್ರೀ ಮಂಜುನಾಥ ದಳದ ಬುಲ್ ಬುಲ್ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಕಾರ್ಗಿಲ್ ದಿನಾಚರಣೆಯನ್ನು ಆಚರಿಸಿದರು.

ಇದನ್ನೂ ಓದಿ: ⭕ಬಂಟ್ವಾಳ: ಬಂಟ್ವಾಳ ಪಿ ಎಸ್ ಐ ಆತ್ಮಹತ್ಯೆ ಪ್ರಕರಣ
ಮುಖ್ಯ ಅತಿಥಿಯಾಗಿ ಕಾರ್ಗಿಲ್ ಯೋಧ ಶ್ರೀ ವಿಕ್ಟರ್ ಕ್ರಾಸ್ತ ಆಗಮಿಸಿ ಸ್ಕೌಟ್ಸ್ ಗೈಡ್ಸ್ ಕ್ಲಬ್ ಬುಲ್ ಬುಲ್ ವಿದ್ಯಾರ್ಥಿಗಳು ಡ್ರಾಯಿಂಗ್, ಕವನ ರಚನೆ ,ಪದ್ಯ ,ಕಥೆ ಪತ್ರ ಲೇಖನ, ಗ್ರೀಟಿಂಗ್ ಕಾರ್ಡ್ ಗಳನ್ನು ಉದ್ಘಟಿಸಿ , ಮಾತಾನಾಡಿ ಮಕ್ಕಳಿಗೆ ಕಾರ್ಗಿಲ್ ಯುದ್ಧದ ಬಗ್ಗೆ ಹಾಗೂ ಅಲ್ಲಿಯ ಪರಿಸ್ಥಿತಿಯ ಬಗ್ಗೆ ವಿವರಿಸಿದರು., ಹಾಗೂ ಮಕ್ಕಳನ್ನು ಸೈನ್ಯಕ್ಕೆ ಸೇರುವಂತೆ ಪ್ರೇರೇಪಿಸಿದರು. ಮುಖ್ಯ ಅಭ್ಯಂಗತರಾಗಿ ಭಾರತ್ಮ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾಸಹಾಯಕ ಆಯುಕ್ತರಾದ ಬಿ ಸೋಮಶೇಖರ ಶೆಟ್ಟಿ ಆಗಮಿಸಿದ್ದರು. ಮಕ್ಕಳಿಗೆ ದೇಶದ ಬಗ್ಗೆ ಅಭಿಮಾನ ಮೂಡಿಸಬೇಕೆನ್ನುವ ಹುರುಪಿನೊಂದಿಗೆ, . ನಮ್ಮ ಯೋಧರು ನಮ್ಮ ಹೆಮ್ಮೆ ಎಂಬುದನ್ನು ತಿಳಿಸಿದರು.

ಮಕ್ಕಳು ತಾವೇ ತಾವ ರಚಿಸಿದ ಕವನ ರಚನೆ , ಡ್ರಾಯಿಂಗ್, ಕಥೆ, ಪತ್ರ ಗಳನ್ನು ಬರೆದು ದೇಶ ಕಾಯುವ ವೀರ ಯೋಧರಿಗೆ ಕಳಿಸುವ ವ್ಯವಸ್ಥೆಯನ್ನು ಮಾಡಲಾಯಿತು.
ವೇದಿಕೆಯಲ್ಲಿ ಮುಖ್ಯ ಶಿಕ್ಷಕರಾದ ಶ್ರೀಮತಿ ಹೇಮಲತಾ ಎಂ ಆರ್ ಉಪಸ್ಥಿತರಿದ್ದರು. ಹಾಗೂ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರಮೀಳಾ ಪೂಜಾರಿ ಉಪಸ್ಥಿತರಿದ್ದರು.

ಗೈಡ್ಸ್ ವಿದ್ಯಾರ್ಥಿ ಶ್ರುತಾ ಶೆಟ್ಟಿ ನಿರೂಪಿಸಿ, ಗೈಡ್ ವಿದ್ಯಾರ್ಥಿ ಪ್ರಾಪ್ತಿ ವಿ ಶೆಟ್ಟಿ ಸ್ವಾಗತ ಹಾಗೂ ಪ್ರಾಸ್ತಾವಿಕ ಮಾತುಗಳನ್ನಾಡಿ, ಗೈಡ್ ವಿದ್ಯಾರ್ಥಿ ಪರಿಣಿತ ಧನ್ಯವಾದ ವಿತ್ತರು. ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಪ್ರಮೀಳಾ ಪೂಜಾರಿ ಸಂಘಟಿಸಿದ ಕಾರ್ಯಕ್ರಮದಲ್ಲಿ ಸ್ಕೌಟ್ ಗೈಡ್ ಶಿಕ್ಷಕರುಗಳಾದ ನೀತಾ ಕೆಎಸ್, ಕಾರುಣ್ಯ, ಗೀತಾ ಪಿ, ಜಯಲಕ್ಷ್ಮಿ, ಮಂಜುನಾಥ್, ಜಯರಾಮ್, ರಮ್ಯ ಪ್ರಮೀಳಾ ಎನ್ ಸಹಕರಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
