ಉಜಿರೆ: (ಆ.2) ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ, ಉಜಿರೆಯಲ್ಲಿ ದಿನಾಂಕ 1.8.2025 ರಂದು 10ನೇ ತರಗತಿಯ ವಿದ್ಯಾರ್ಥಿಗಳ ಪೋಷಕರಸಭೆಯು ಅನುಗ್ರಹ ಪ್ರೌಢಶಾಲಾ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ವಂ ಫಾ ವಿಜಯ್ ಲೋಬೊ ಇವರು ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಸಹಶಿಕ್ಷಕಿ ಹೇಮಲತಾ ಅವರು ಶಿಕ್ಷಣ ಇಲಾಖೆಯ ಹೊರತಂದಿರುವ ನೂತನ ಕಾರ್ಯಕ್ರಮ ಪಠ್ಯಧಾರಿತ ಮೌಲ್ಯಮಾಪನದ ಕುರಿತು ವಿಸ್ಕೃತ ಮಾಹಿತಿಯನ್ನು ನೀಡಿದರು.

ಹಾಗೆಯೇ ಸಹಶಿಕ್ಷಕಿ ಶ್ರೀಮತಿ ವಿನಯಲತಾ ಇವರು ಆಂತರಿಕ ಮೌಲ್ಯಮಾಪನದ ಬಗ್ಗೆಯೂ ಹೆಚ್ಚಿನ ಮಾಹಿತಿಯನ್ನು ನೀಡಿದರು.ಪ್ರಾಂಶುಪಾಲರಾದ ವಂ ಫಾ ವಿಜಯ್ ಲೋಬೊ ಇವರು ಮಕ್ಕಳು ಪರೀಕ್ಷೆಗಳ ಬಗ್ಗೆ ಅಸಡ್ಡೆ ಮಾಡದೆ ಉತ್ತಮ ಅಂಕಗಳನ್ನು ಪಡೆಯುವಲ್ಲಿ ತಮ್ಮ ಗುರಿಯನ್ನಿಡಬೇಕು, ಇದಕ್ಕೆ ಪೋಷಕರ ಕೂಡ ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು ಎಂದು ತಿಳಿಸಿದರು.ಸಹಶಿಕ್ಷಕಿ ಶ್ರೀಮತಿ ಐರಿನ್ ರೋಡ್ರಿಗಸ್ ಸ್ವಾಗತಿಸಿ ,ಗಣೇಶ್ ಇವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

