Wed. Nov 20th, 2024

Bus stuck in mud : ಕೆಸರಿನಲ್ಲಿ ಸಿಕ್ಕಿಹಾಕಿಕೊಂಡ ಬಸ್ – ಎರಡು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ಬಂದ್

ಬೆಳ್ತಂಗಡಿ:(ಜು.19) ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಎಲ್ಲಾ ನದಿ , ತೊರೆಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.

ಇದನ್ನೂ ಓದಿ: https://uplustv.com/2024/07/19/mogru-hill-collapsed-ವಿಪರೀತ-ಮಳೆಗೆ-ಗುಡ್ಡ-ಕುಸಿದು-ಮನೆ-ಸಂಪೂರ್ಣ-ಬಿರುಕು/

ಈ ಮಧ್ಯೆ ರಾಷ್ಟ್ರೀಯ ಹೆದ್ದಾರಿಯ ಗುತ್ತಿಗೆದಾರರಿಂದಾಗಿರುವಂತಹ ಕಾಮಗಾರಿ ವೈಫಲ್ಯದಿಂದಾಗಿ, ಅನೇಕ ಕಡೆ ಕೃತಕ ಸಮಸ್ಯೆಗಳು ಸೃಷ್ಟಿಯಾಗುತ್ತಿದೆ.

ಬೆಳಗ್ಗಿನ ಜಾವ ಸುಮಾರು 5 ಗಂಟೆಗೆ ಚಾರ್ಮಾಡಿ ರಸ್ತೆಯ ನಿಡಿಗಲ್‌ ಸಮೀಪ ಬಸ್ಸೊಂದು ರಸ್ತೆಯ ಬದಿಯೇ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡು , ಸುಮಾರು ಎರಡು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಸಂಪೂರ್ಣ ವಾಹನಗಳು ಎರಡು ಕಡೆ ಸಾಲುಗಟ್ಟಿ ನಿಂತದ್ದು ದೃಶ್ಯದಲ್ಲಿ ಕಂಡುಬರುತ್ತಿತ್ತು. ಎಲ್ಲರ ಹರಸಾಹಸದ ಬಳಿಕ ಸುಮಾರು 7 ಗಂಟೆಗೆ ಬಸ್ಸನ್ನು ತೆರವು ಮಾಡೋ ಕಾರ್ಯ ನಡೆಯಿತು.

ಮುಂಡಾಜೆ- ಸೋಮಂತ್ತಡ್ಕ ಫಾರೆಸ್ಟ್‌ ಕ್ವಾಟ್ರಸ್‌ ಬಳಿಯ ಪರಿಸರದಲ್ಲಿ ಮತ್ತು ಅಂಬಡ್ತ್ಯಾರ್‌ ಈ ಪ್ರದೇಶದಲ್ಲಿ ರಾಷ್ಟ್ರಿಯ ಹೆದ್ದಾರಿಯ ಕಾಮಗಾರಿಯಿಂದಾಗಿ ಸುಮಾರು 10 ಫೀಟ್‌ ನಷ್ಟು ಮಣ್ಣು ತುಂಬಿದ್ದಾರಿಂದಾಗಿ ,

ರಸ್ತೆಯಲ್ಲಿ ವಾಹನದ ಟಯರ್ ಗಳು ಸಿಲುಕಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಸಂಪೂರ್ಣವಾಗಿ ರಸ್ತೆ ಕೆಸರುಮಯವಾಗಿದೆ.

ದ್ವಿ-ಚಕ್ರ ವಾಹನ ಸವಾರರಿಗೆ ರಸ್ತೆ ಬಹಳ ಸವಾಲಾಗಿ ಪರಿಣಮಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿರುವ ಎಲ್ಲಾ ವಾಹನಗಳಿಗೂ ತೀವ್ರ ಸಮಸ್ಯೆ ಉಂಟಾಗುತ್ತಿದೆ.

ಶಿರಾಡಿ ಘಾಟ್‌ ನಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

Leave a Reply

Your email address will not be published. Required fields are marked *