ಬಳಂಜ:(ಆ.4) ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಆಡಳಿತ ಮಂಡಳಿಗೆ ಎರಡನೇ ಅವಧಿಗೆ ನೂತನ ಅಧ್ಯಕ್ಷರಾಗಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಯುವ ಮುಂದಾಳು ಸಂತೋಷ್ ಕೋಟ್ಯಾನ್ ಬಳಂಜ ಪುನರಾಯ್ಕೆಯಾದರು.

ಇದನ್ನೂ ಓದಿ: 🚘ಧರ್ಮಸ್ಥಳ: ಮಹೇಂದ್ರ ಕಂಪೆನಿಯ ಹೊಸ ಮಾದರಿಯ ಕಾರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕೊಡುಗೆಯಾಗಿ ಅರ್ಪಣೆ

ಆ.3 ರಂದು ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಮಿತಿ ರಚನೆ ಮಾಡಿ ಅಧ್ಯಕ್ಷರಾಗಿ ಘೋಷಣೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಕೃಷ್ಣಪ್ಪ ಪೂಜಾರಿ ಬೊಂಟ್ರೋಟ್ಟು ಗುತ್ತು,ಪ್ರಧಾನ ಕಾರ್ಯದರ್ಶಿಯಾಗಿ ರಂಜಿತ್ ಪೂಜಾರಿ ಮಜಲಡ್ಡ,ಕೋಶಾಧಿಕಾರಿಯಾಗಿ ಪ್ರವೀಣ್ ಕುಮಾರ್ ಹೆಚ್.ಎಸ್,ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಪೂಜಾರಿ ನಿಟ್ಟಡ್ಕ ಆಯ್ಕೆಯಾದರು.
ನಿರ್ದೇಶಕರಾಗಿ ಸಂತೋಷ್ ಕುಮಾರ್ ಕಾಪಿನಡ್ಕ, ಯತೀಶ್ ವೈ.ಎಲ್ ಬಳಂಜ, ಜಗದೀಶ್ ಬಳ್ಳಿದಡ್ಡ, ಮನೋಹರ್ ಬಳಂಜ,
ಪ್ರವೀಣ್ ಡಿ ಕೋಟ್ಯಾನ್ ದರ್ಖಾಸು, ದಿನೇಶ್ ಪೂಜಾರಿ ಅಂತರ, ಪ್ರದೀಪ್ ಮೈಂದಕುಮೇರ್, ದೀಪಕ್ ಹೆಚ್.ಡಿ ಸಂಧ್ಯಾದೀಪ, ಯೋಗೀಶ್ ಕೊಂಗುಳ, ವಿಜಯ್ ಪೂಜಾರಿ ಯೈಕುರಿ,ಸಂತೋಷ್ ಕುಮಾರ್ ಹಿಮರಡ್ಡ,ಸಂತೋಷ್ ಕಡೆಂಗಾಲು,ರತ್ನಾಕರ ಪೂಜಾರಿ ಕೆಂಪುರ್ಜ ಆಯ್ಕೆಯಾದರು.

ಒಂದೇ ಜಾತಿ,ಒಂದೇ ಮತ, ಒಬ್ಬನೇ ದೇವರು ಎಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶಗಳನ್ನು ಪರಿಪಾಲಿಸಿಕೊಂಡು ಬರುತ್ತಿರುವ ಬಳಂಜ ಬಿಲ್ಲವ ಸಂಘಕ್ಕೆ ಸುಮಾರು 46 ವರ್ಷಗಳ ಪರಂಪರೆಯಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಸುಮಾರು ರೂ. ಒಂದು ಕೋಟಿ ವೆಚ್ಚದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿದೆ. ಗೌರವಾಧ್ಯಕ್ಷರಾಗಿ ಹೆಚ್.ಧರ್ಣಪ್ಪ ಪೂಜಾರಿ,ಗೌರವ ಮಾರ್ಗದರ್ಶಕರಾಗಿ ಕೆ.ವಸಂತ ಸಾಲಿಯಾನ್ ಸೇವೆ ಸಲ್ಲಿಸುತ್ತಿದ್ದಾರೆ.
