Mon. Aug 4th, 2025

ಉಜಿರೆ: ಎಸ್.ಡಿ.ಎಂ. ಕಾಲೇಜು ಎನ್ನೆಸ್ಸೆಸ್ ಘಟಕ ನಾಯಕರ ಆಯ್ಕೆ

ಉಜಿರೆ:(ಆ.4) ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಪ್ರಸಕ್ತ ವರ್ಷದ ವಿದ್ಯಾರ್ಥಿ ನಾಯಕರ ಆಯ್ಕೆ ಇತ್ತೀಚೆಗೆ ನಡೆಯಿತು.

ಇದನ್ನೂ ಓದಿ: 💐💐ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷರಾಗಿ ಸಂತೋಷ್ ಪಿ.ಕೋಟ್ಯಾನ್ ಪುನರಾಯ್ಕೆ

ಘಟಕ ಒಂದರ ನಾಯಕರಾಗಿ ನೆವಿಲ್ ನವೀನ್ ಮೋರಸ್ (ದ್ವಿತೀಯ ಬಿಎ) ಮತ್ತು ಮಾನ್ಯ ಕೆ.ಆರ್. (ದ್ವಿತೀಯ ಬಿಕಾಂ) ಹಾಗೂ ಘಟಕ ಎರಡರ ನಾಯಕರಾಗಿ ಟಿ. ಸುದರ್ಶನ್ ನಾಯಕ್ (ದ್ವಿತೀಯ ಬಿಕಾಂ) ಮತ್ತು ರಕ್ಷಾ ಆರ್. ದೇವಾಡಿಗ (ದ್ವಿತೀಯ ಬಿಸಿಎ) ಆಯ್ಕೆಗೊಂಡಿದ್ದಾರೆ.

“ಕಾಲೇಜಿನಲ್ಲಿ ಎರಡು ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 200 ಸ್ವಯಂಸೇವಕರು ಎನ್.ಎಸ್.ಎಸ್. ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕಳೆದ 53 ವರ್ಷಗಳಿಂದ ನಮ್ಮ ಎನ್ನೆಸ್ಸೆಸ್ ಘಟಕಗಳು ವಿಭಿನ್ನ ಕಾರ್ಯ ಮತ್ತು ಸೇವಾ ಚಟುವಟಿಕೆಗಳಿಂದ ತಾಲೂಕು ಮತ್ತು ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿಶೇಷ ಮನ್ನಣೆಯೊಂದಿಗೆ ಪುರಸ್ಕೃತಗೊಂಡಿವೆ. ವಿದ್ಯಾರ್ಥಿ ನಾಯಕರಿಗೆ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ಶುಭ ಹಾರೈಸಿದ್ದಾರೆ” ಎಂದು ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *