ಮಧ್ಯಪ್ರದೇಶ (ಆ. 04): ಮತಾಂತರ ಹಾಗೂ ಮದುವೆ ನಿರಾಕರಿಸಿದ್ದಕ್ಕೆ ಶೇಖ್ ರಯೀಸ್ ಎಂಬಾತ ಭಾಗ್ಯಶ್ರೀ ಎಂಬುವವರನ್ನು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಇದನ್ನೂ ಓದಿ: 🔴ವೇಣೂರು: ವೇಣೂರಿನ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ- ಕಾಲೇಜಿನಲ್ಲಿ ಶಿಕ್ಷಕ – ರಕ್ಷಕ ಸಂಘದ ಸಭೆ
ನೇಪಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ನವರಾದಲ್ಲಿ ಹಿಂದೂ ಮಹಿಳೆಗೆ ಇಸ್ಲಾಂಗೆ ಮತಾಂತರವಾಗುವಂತೆ ರಯೀಸ್ ಒತ್ತಡ ಹಾಕುತ್ತಿದ್ದ, ಆಕೆ ನಿರಾಕರಿಸಿದ್ದಕ್ಕೆ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

ಭಾಗ್ಯಶ್ರೀ ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿ, ಕತ್ತು ಸೀಳಿದ್ದಷ್ಟೇ ಅಲ್ಲದೆ, ಹಲವು ಬಾರಿ ಇರಿದು ಹತ್ಯೆ ಮಾಡಿದ್ದಾನೆ. ಈ ಬಗ್ಗೆ ಭಾಗ್ಯಶ್ರೀ ಸಹೋದರಿ ಸುಭದ್ರಾ ಬಾಯಿ ರಯೀಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಆತ ತುಂಬಾ ದಿನಗಳಿಂದ ತನ್ನ ಅಕ್ಕನ ಬಳಿ ಮದುವೆಯಾಗುವಂತೆ ಹಾಗೂ ಮತಾಂತರಗೊಳ್ಳುವಂತೆ ಆತ ಒತ್ತಡ ಹಾಕುತ್ತಿದ್ದ. ಆದರೆ ಆಕೆ ಒಪ್ಪಿಕೊಂಡಿರಲಿಲ್ಲ, ಹೀಗಾಗಿ ರಾತ್ರೋ ರಾತ್ರಿ ಆಕೆಯ ಮನೆಗೆ ನುಗ್ಗಿ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

