ಉಜಿರೆ:(ಆ.7) ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಕಾಲೇಜು ಹಾಗೂ ಎಸ್ ಡಿ ಎಂ ರೆಸಿಡೆನ್ಸಿಯಲ್ ಪದವಿಪೂರ್ವ ಕಾಲೇಜು ಉಜಿರೆ ಇವರ ಜಂಟಿ ಆಶ್ರಯದಲ್ಲಿ ದಿನಾಂಕ ಆಗಸ್ಟ್ 5 ಮಂಗಳವಾರ ರಂದು ನಡೆದ

ಇದನ್ನೂ ಓದಿ: ⭕ಧರ್ಮಸ್ಥಳ: ಮುಳಿಕ್ಕಾರು ನಿವಾಸಿ ವಿನುತ ಆತ್ಮಹತ್ಯೆ
ಬೆಳ್ತಂಗಡಿ ತಾಲೂಕು ಪದವಿಪೂರ್ವ ಕಾಲೇಜುಗಳ ಬಾಲಕ ಹಾಗೂ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು ಉಜಿರೆಯ ಬಾಲಕರ ತಂಡ ಚಾಂಪಿಯನ್ ಪಟ್ಟವನ್ನು ಹಾಗೂ ಬಾಲಕಿಯರ ತಂಡ ದ್ವಿತೀಯ ಸ್ಥಾನವನ್ನು ಗಳಿಸಿ ಪೊಂಪೈ ಕಾಲೇಜು ಐಕಳದಲ್ಲಿ ನಡೆಯುವ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ನಮ್ಮ ಕಾಲೇಜಿನ ತಂಡ ಆಯ್ಕೆ ಆಗಿರುತ್ತದೆ.
ಬಾಲಕರ ವಿಭಾಗದಲ್ಲಿ ಉತ್ತಮ ಹೊಡೆತಗಾರನಾಗಿ ಶ್ಯಾಮ್ ದ್ವಿತೀಯ ವಾಣಿಜ್ಯ ವಿಭಾಗ, ಉತ್ತಮ ಸೆಟ್ಟರ್ ಪ್ರಫುಲ್, ದ್ವಿತೀಯ ವಾಣಿಜ್ಯ ವಿಭಾಗ ಹಾಗೂ ಬಾಲಕಿಯರ ವಿಭಾಗದಲ್ಲಿ ಉತ್ತಮ ಸವ್ಯಸಾಚಿ ಆಟಗಾರ್ತಿ, ರಕ್ಷಾ ಪ್ರಥಮ ವಾಣಿಜ್ಯ ವಿಭಾಗ ಇವರು ಪಡೆದುಕೊಂಡಿರುತ್ತಾರೆ. ಇವರಿಗೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ದೈಹಿಕ ಶಿಕ್ಷಣ ನಿರ್ದೇಶಕರು, ತರಬೇತುದಾರರು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಶುಭ ಕೋರಿದ್ದಾರೆ.


