Sat. Aug 9th, 2025

Ujire: ಉಜಿರೆ ಎಸ್ .ಡಿ.ಎಮ್ ಪ. ಪೂ. ಕಾಲೇಜಿನ ಎನ್ ಎಸ್ ಎಸ್ ಸ್ವಯಂ ಸೇವಕರಿಗೆ ಜಲ ಸಂರಕ್ಷಣೆ ಕುರಿತು ಪ್ರಾತ್ಯಕ್ಷಿಕೆ

ಉಜಿರೆ:(ಆ.9) ಉಜಿರೆ ಶ್ರೀ ಧ. ಮಂ. ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಿಗೆ ಜಲ ಸಂರಕ್ಷಣೆ ಕುರಿತು ಶ್ರೀ ಧ. ಮಂ. ಕಾಲೇಜು,ಉಜಿರೆ ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ಡಾ. ಮೋಹನ್ ನಾರಾಯಣ ಹಾಗೂ ಶ್ರೀಮತಿ ಪೂರ್ಣಿಮಾರವರು ಮಾಹಿತಿ ನೀಡಿದರು.

ಇದನ್ನೂ ಓದಿ: 🟠ಬೆಳ್ತಂಗಡಿ: ಗೇರುಕಟ್ಟೆ ಪತಂಜಲಿ ಯೋಗ ಶಾಖೆಯಲ್ಲಿ ರಕ್ಷಾಬಂಧನ ಆಚರಣೆ


ತಮ್ಮ ಮನೆಯಲ್ಲಿ ಅಳವಡಿಸಿರುವ ಮಳೆ ಕೊಯ್ಲು, ಮಳೆ ನೀರಿನ ಸ್ವಚ್ಛತೆ, ಸೋಲಾರ್ ದೀಪ, ನೀರಿನ ಶೇಖರಣೆ ಮುಂತಾದುವುಗಳ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಗಳೊಂದಿಗೆ ವಿವರಿಸಿದರು.


ಎನ್ ಎಸ್ ಎಸ್ ಸಲಹಾ ಸಮಿತಿ ಸದಸ್ಯ ನಾಗರಾಜ್ ಭಂಡಾರಿ, ಯೋಜನಾಧಿಕಾರಿ ವಿಶ್ವನಾಥ್ ಎಸ್ ಸಹ ಯೋಜನಾಧಿಕಾರಿ ಶ್ರೀಮತಿ ಶೋಭಾ ಉಪಸ್ಥಿತರಿದ್ದರು. ಸ್ವಯಂ ಸೇವಕ ಸಂದೀಪ್ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *