Mon. Aug 11th, 2025

ಪುಂಜಾಲಕಟ್ಟೆ: ಪ್ರಥಮ ದರ್ಜೆ ಕಚೇರಿ ಸಹಾಯಕ ಪ್ರವೀಣ್ ಕುಮಾರ್ ರವರಿಗೆ ರಾಜ್ಯದಲ್ಲೇ ಮಾದರಿ ಬೀಳ್ಕೊಡುಗೆ- ಹರೀಶ್ ಪೂಂಜ

ಪುಂಜಾಲಕಟ್ಟೆ:(ಆ.11) ಸರಕಾರಿ ನೌಕರರೊಬ್ಬನು ತನ್ನ ವೃತ್ತಿಯಲ್ಲಿ ವಯೋನಿವೃತ್ತಿಯಾಗುವುದು ಇದೊಂದು ಸಹಜ ಪ್ರಕ್ರಿಯೆ. ತನ್ನ ವೃತ್ತಿ ಬದುಕಿನಲ್ಲಿ ಸುಮಾರು 39 ವರ್ಷಗಳ ಕಾಲ ಕರ್ತವ್ಯವನ್ನು ಭಗವಂತ ಮೆಚ್ಚುವಂತೆ ಮಾಡಿ ಪ್ರತಿಯೊಬ್ಬರ ಮನವನ್ನು ಗೆದ್ದಿರುವವರು ಪ್ರವೀಣ್ ಕುಮಾರ್ ದೊಟ ಎಂದರು ತಪ್ಪಲ್ಲ.

ಇದನ್ನೂ ಓದಿ:🟠ಬೆಳ್ತಂಗಡಿ: ರಾಜ ಕೇಸರಿ ಸೇವಾ ಟ್ರಸ್ಟ್ (ರಿ.) ಬೆಳ್ತಂಗಡಿ ತಾಲೂಕು ಇದರ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮ

ನನ್ನ ಬದುಕಿನಲ್ಲಿಯೂ ಕೂಡ ಇವರು ಹಲವಾರು ರೀತಿಯಲ್ಲಿ ಪ್ರಭಾವವನ್ನು ಬೀರಿದ್ದಾರೆ. ಇವರು ಓರ್ವ ರಾಜ್ಯಮಟ್ಟದ ಇಲಾಖಾ ಪರೀಕ್ಷಾ ಮಾಹಿತಿಯ ನೀಡುವ ತರಬೇತುದಾರರಾಗಿಯೂ ಕೂಡ ಎಲ್ಲರ ಮನವನ್ನು ಗೆದ್ದವರು.ಇವರ ಬಳಿ ಯಾವುದೇ ಒಬ್ಬ ವಿದ್ಯಾರ್ಥಿ ಅಥವಾ ಪೋಷಕರು ಬಂದಾಗ ಅವರಿಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ಸಹಕಾರ ಹಾಗೂ ಮಾರ್ಗದರ್ಶನ ನೀಡುವುದು ಇವರ ಸ್ವಭಾವವಾಗಿದೆ. ಇಂತಹ ನಿಷ್ಕಲ್ಮಶ ಮತ್ತು ಕಾಯಕವೇ ಕೈಲಾಸವೆಂದು ನಂಬಿ ಕರ್ತವ್ಯ ಮಾಡಿರುವ ಇವರು ಇಂದು ಇಲಾಖೆಯಿಂದ ವಯೋ ನಿವೃತ್ತಿ ಹೊಂದುತ್ತಿರುವುದು ಖಂಡಿತವಾಗಿಯೂ ಈ ಸಂಸ್ಥೆಗೆ ಮಾತ್ರವಲ್ಲದೆ ಶಿಕ್ಷಣ ಇಲಾಖೆಗೆ ತುಂಬಲಾರದ ನಷ್ಟವೇ ಸರಿ.

ಮುಂದೆ ತಮ್ಮ ಬದುಕಿನಲ್ಲಿ ಸರ್ವ ರೀತಿಯಲ್ಲಿಯೂ ತಾವು ಎಣಿಸಿದ ಕಾರ್ಯ ನಡೆಯಲಿ ಅದೇ ರೀತಿ ಸಮಾಜಕ್ಕೆ ತಮ್ಮ ಕೊಡುಗೆ ಸದಾ ಅನನ್ಯವಾಗಿರಲಿ ಎಂದು ಬೆಳ್ತಂಗಡಿ ತಾಲೂಕಿನ ಪರವಾಗಿ ತಮಗೆ ಶುಭವನ್ನು ಕೋರುತ್ತಿದ್ದೇನೆ ಎಂದು ಬೆಳ್ತಂಗಡಿ ತಾಲೂಕಿನ ಮಾನ್ಯ ಶಾಸಕರಾದ ಹರೀಶ್ ಪೂಂಜ ರವರು ಕರ್ನಾಟಕ ಪಬ್ಲಿಕ್ ಸ್ಕೂಲ್, ಪುಂಜಾಲಕಟ್ಟೆಯ ಪ್ರಥಮ ದರ್ಜೆ ಸಹಾಯಕರಾದ ಪ್ರವೀಣ್ ಕುಮಾರ್ ದೊಟ ರನ್ನು ಸರ್ವರ ಪರವಾಗಿ ಸನ್ಮಾನಿಸಿ ಮಾತನಾಡಿದರು.


ಇತ್ತೀಚಿಗೆ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರವೀಣರನ್ನು ಸನ್ಮಾನಿಸಿ, ಈ ಮಾತುಗಳನ್ನು ಹೇಳಿದರು.
ಸನ್ಮಾನವನ್ನು ಸ್ವೀಕರಿಸಿದ ಪ್ರವೀಣರವರು ನನ್ನ ಬದುಕಿನಲ್ಲಿ ನನ್ನೊಂದಿಗೆ ಸಹಕರಿಸಿದ ಪ್ರತಿಯೊಬ್ಬರನ್ನು ಸ್ಮರಿಸುತ್ತಾ ಇದೊಂದು ಯಾವತ್ತೂ ಮರೆಯದ ಭಾವನಾತ್ಮಕ ಕ್ಷಣವಾಗಿದೆ ಎಂದು ಭಾವುಕರಾಗಿ ವಿಚಾರಗಳನ್ನು ಹಂಚಿಕೊಂಡರು.


ಈ ಸಮಾರಂಭದಲ್ಲಿ ಮಡಂತ್ಯಾರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ರೂಪ ನವೀನ್ ಕುಮಾರ್ ಕೊಡ್ಲಕ್ಕೆ , ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುನೀತ್ ಕುಮಾರ್, ಬೆಳ್ತಂಗಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ತಾರಕೇಸರಿ, ಕಾರ್ಕಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಕಚೇರಿ ಪ್ರಬಂಧಕರಾದ ಸುನಿಲ್ ಕುಮಾರ್, ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪದವಿ ಪೂರ್ವ ಕಾಲೇಜು ವಿಭಾಗದ ಪ್ರಾಂಶುಪಾಲರಾದ ಡಾ. ಸರೋಜಿನಿ ಆಚಾರ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ಯಾಂಪ್ರಸಾದ್ ಸಂಪಿಗೆತ್ತಾಯ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಹಿರಿಯ ಸದಸ್ಯ ದಿವಾಕರ ಶೆಟ್ಟಿ ಕಂಗಿತ್ತಲು ಹಾಗೂ ಹಲವಾರು ಸಂಘ-ಸಂಸ್ಥೆಯ ಪದಾಧಿಕಾರಿಗಳು ಸಮಯೋಚಿತವಾಗಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ದೈಹಿಕ ಶಿಕ್ಷಣಾಧಿಕಾರಿ ಶ್ರೀಮತಿ ಸುಜಯ, ಶಿಕ್ಷಣ ಸಂಯೋಜಕರಾದ ಶ್ರೀಮತಿ ಚೇತನಾಕ್ಷಿ, ದಕ್ಷಿಣ ಕನ್ನಡ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಹಮ್ಮದ್ ರಿಯಾಜ್ ಮತ್ತು ತಂಡ, ಬೆಳ್ತಂಗಡಿ ತಾಲೂಕು ಸರಕಾರಿ ನೌಕರ ಸಂಘದ ಅಧ್ಯಕ್ಷ ಜಯರಾಜ್ ಜೈನ್, ಕರ್ನಾಟಕ ಪಬ್ಲಿಕ್ ಸ್ಕೂಲ್ ಪೂಜ್ಯಲಕಟ್ಟೆಯ ಹಿರಿಯ ವಿದ್ಯಾರ್ಥಿ ಸಂಘದ ಸರ್ವ ಪದಾಧಿಕಾರಿಗಳು,ಬೆಳ್ತಂಗಡಿ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ ತಚ್ಚುಮೆ ಮತ್ತು ಬಳಗ, ಬೆಳ್ತಂಗಡಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು,ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬಳಗ, ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ವಿಭಾಗದ ಶಿಕ್ಷಕ ಹಾಗೂ ಶಿಕ್ಷಕೇತರ ಬಳಗ, ಜಿಸಿಐ ಮಡಂತ್ಯಾರೀನಾ ಅಧ್ಯಕ್ಷರಾದ ಶ್ರೀಮತಿ ಅಮಿತಾ ಅಶೋಕ್ ಭಂಡಾರಿ ಮತ್ತು ಸದಸ್ಯರು, ರೋಟರಿ ಕ್ಲಬ್ ಮಡಂತ್ಯಾರನ ಅಧ್ಯಕ್ಷರು ಮತ್ತು ಸದಸ್ಯರು, ಮಡಂತ್ಯಾರ್ ಮತ್ತು ಮಾಲಾಡಿ ಗ್ರಾಮ ಪಂಚಾಯತಿಯ ಸದಸ್ಯರು, ನಮ್ಮ ಬಂಟ್ವಾಳ ಚಾನೆಲ್ ನ ಮಾಲಕರಾದ ಪ್ರಶಾಂತ್, ಮಡಂತ್ಯಾರ್ ನ ಶ್ರೀದೇವಿ ಟ್ರೇಡರ್ಸ್ ಮಾಲಕರಾದ ಪ್ರಶಾಂತ್ ಶೆಟ್ಟಿ, ಶ್ರೀ ಕ್ಷೇತ್ರ ಬಳ್ಳಮಂಜದ ಅನುವಂಶಿಕ ಆಡಳಿತ ಮೋಕ್ತೇಸರರಾದ ಹರ್ಷ ಸಂಪಿಗೆತ್ತಾಯ, ಬಂಟ್ವಾಳದ ರಾರಾಸಂ ಇದರ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ಮತ್ತು ತಂಡ, ಮಂಗಳೂರು ಉಪನಿರ್ದೇಶಕ ಕಚೇರಿಯ ಶ್ರೀಮತಿ ಹರಿಣಾಕ್ಷಿ ಮತ್ತು ತಂಡ, ಬೆಳ್ತಂಗಡಿ ತಾಲೂಕು ಕಂದಾಯ ಇಲಾಖೆಯ ಸಿಬ್ಬಂದಿ ವರ್ಗ, ಮಡಂತ್ಯಾರು ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೋಕಿಂ ಡಿ ಸೋಜಾ ಮತ್ತು ಸಿಬ್ಬಂದಿ ವರ್ಗ, ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿ ಗುಡ್ಡೆ, ದಕ್ಷಿಣ ಕನ್ನಡ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪೂರ್ವ ಅಧ್ಯಕ್ಷ ಕೆ ಶಿವಶಂಕರ್ ಭಟ್, ಬೆಳ್ತಂಗಡಿ ತಾಲೂಕು ಲಿಪಿಕ ನೌಕರರ ಸಂಘದ ಅಧ್ಯಕ್ಷ ಶಿವಶಂಕರ್ , ಬೆಳ್ತಂಗಡಿ ತಾಲೂಕಿನ ಹೆಚ್ಚಿನ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರುಗಳು, ಹಾಗೂ ಹಿತೈಷಿಗಳು ಮತ್ತು ಅವರ ಕುಟುಂಬಸ್ಥರು ಉಪಸ್ಥಿತರಿದ್ದು ಪ್ರವೀಣ್ ರವರಿಗೆ ಶುಭವನ್ನು ಹಾರೈಸಿದರು.


ಪ್ರವೀಣ್ ಕುಮಾರ್ ದೊಟ ಹಾಗೂ ಪತ್ನಿ ಶ್ರೀಮತಿ ಜಯ ಕೆ ಮತ್ತು ಮಕ್ಕಳಾದ ಪ್ರಜ್ಞಾ ಡಿ.ಪಿ ಹಾಗೂ ಪೃಥ್ವಿ ಡಿ ಪಿರವರ ತೊಡಗಿಸಿಕೊಳ್ಳುವಿಕೆಯೊಂದಿಗೆಊರವರ ಮತ್ತು ಪೋಷಕರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭಗೊಂಡು, ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ಬಿ ಉದಯಕುಮಾರ್ ರವರ ಪ್ರಸ್ತಾವನೆ ಮತ್ತು ಸ್ವಾಗತದೊಂದಿಗೆ ಮುಂದುವರಿದು, ಕನ್ನಡ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದ ಕನ್ನಡ ಶಿಕ್ಷಕಿ ಶ್ರೀಮತಿ ಶಾಂತ ಎಸ್ ಸನ್ಮಾನ ಪತ್ರ ವಾಚಿಸಿ, ಪ್ರಾಥಮಿಕ ಶಾಲೆ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅನಿತಾ ಬರೆಟ್ಟೊರವರ ಧನ್ಯವಾದಗಳೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು. ಈ ಕಾರ್ಯಕ್ರಮವನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದ ಸಮಾಜ ವಿಜ್ಞಾನ ಶಿಕ್ಷಕರಾದ ಧರಣೇಂದ್ರ ಕೆ ರವರು ನಿರೂಪಿಸಿದರು. ಕಾರ್ಯಕ್ರಮ ಸಮಾಪನದ ಬಳಿಕ ಊರ ಗಣ್ಯರೆಲ್ಲರೂ ಸೇರಿ ಅವರನ್ನು ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆಯೊಂದಿಗೆ ಅವರ ಸ್ವಗೃಹದವರೆಗೆ ಕರೆದುಕೊಂಡು ಹೋಗಿ ಬೀಳ್ಕೊಟ್ಟ ಸಮಾರಂಭ ಬಂತು ಸರ್ವರ ಮನವನ್ನು ಗೆದ್ದಿತು.

Leave a Reply

Your email address will not be published. Required fields are marked *