ಬೆಳ್ತಂಗಡಿ:(ಆ.೧೨) ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗಾಗಿ ಬನ್ನಿ ಸ್ ದಳದ ಕ್ರಿಯಾ ಚಟುವಟಿಕೆಯನ್ನು ರೋವರ್ ಸ್ಕೌಟ್ ಲೀಡರ್ ಲಕ್ಷ್ಮೀಶ ಆರ್ ಭಟ್ ಶ್ರೀ ಧರ್ಮಸ್ಥಳ ಪದವಿ ಪೂರ್ವ ಕಾಲೇಜು ಉಜಿರೆ ಬೆಳ್ತಂಗಡಿ ಮಕ್ಕಳಿಗೆ ಬನ್ನಿಸ್ ಏಪ್ರೋನ್ ನೀಡುವ ಮೂಲಕ ಕ್ರಿಯಾ ಚಟುವಟಿಕೆಯನ್ನು ಉದ್ಘಾಟಿಸಿ , ಮಾತನಾಡಿದ ಮುಖ್ಯ ಅತಿಥಿಗಳು ಸ್ಕೌಟ್ಸ್ ಮತ್ತು ಗೈಡ್ಸ್ ಶಿಸ್ತು ಬದ್ಧ ಚಟುವಟಿಕೆ ಮುಂದಕ್ಕೆ ಸ್ಕೌಟ್ಸ್ ಗೈಡ್ ನಲ್ಲಿ ಒಳ್ಳೆಯ ಭವಿಷ್ಯವಿದೆ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಇದನ್ನೂ ಓದಿ: 🟣ನಿಡ್ಲೆ: 34ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರ ಉದ್ಘಾಟನೆ
ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್ ರವರ ಸಲಹೆ ಸೂಚನೆಯ ಮೇರೆಗೆ ಪ್ರಭಾರ ಮುಖ್ಯ ಶಿಕ್ಷಕಿ ಜಸಿಂತಾ ರೋಡ್ರಿಗಸ್ ಅಧ್ಯಕ್ಷತೆ ವಹಿಸಿದ್ದುರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕಾರ್ಯದರ್ಶಿ ಪ್ರಮೀಳಾ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಮೀಳಾ ಪೂಜಾರಿ ಸಂಘಟಿಸಿದ ಕಾರ್ಯಕ್ರಮದಲ್ಲಿ ಸ್ಕೌಟ್ ಮಾಸ್ಟರ್ ಶಿಕ್ಷಕಿ ಗೀತಾ ಪಿ ನಿರೂಪಿಸಿ , ಮಂಜುನಾಥ್ ,ಕಾರುಣ್ಯ, ಜಯರಾಮ್, ಪ್ರಮೀಳಾ ಎನ್ ,ರಮ್ಯ, ಬಿ ಎಸ್, ಜಯಲಕ್ಷ್ಮಿ, ನೀತಾ ಕೆ ಎಸ್ ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


