Wed. Nov 20th, 2024

Reverse Moving Waterfall: ಭಾರತದಲ್ಲಿದೆ ಹಿಮ್ಮುಖವಾಗಿ ಚಲಿಸುವ ಜಲಪಾತ, ಏನಿದರ ವಿಶೇಷತೆ..?

Reverse Moving Waterfall: ಬೇಸಿಗೆಯಲ್ಲಿ ನೀರಿಲ್ಲದೆ ಬತ್ತಿ ಹೋದ ಜಲಪಾತಗಳು ಮಳೆಗಾಲ ಆರಂಭವಾಗುತ್ತಿದ್ದಂತೆ ಜೀವಕಳೆಯನ್ನು ಪಡೆಯುತ್ತವೆ.

ಇದನ್ನೂ ಓದಿ: https://uplustv.com/2024/07/19/bandaru-hill-collapsed-ವಿಪರೀತ-ಮಳೆಗೆ-ಗುಡ್ಡ-ಕುಸಿದು-ಮನೆಗೆ-ಹಾನಿ/

ಈ ಋತುವಿನಲ್ಲಿ ಹಾಲಿನ ನೊರೆಯಂತೆ ಉಕ್ಕಿ ಹರಿಯುವ ಜಲಪಾತವನ್ನು ನೋಡುವುದೇ ಕಣ್ಣಿಗೆ ಆನಂದ.

ಮಹಾರಾಷ್ಟ್ರದಲ್ಲಿರುವ ನಾನೇ ಘಾಟ್ ಜಲಪಾತವು ವಿಶೇಷತೆಯಿಂದ ಕೂಡಿದೆ.

ಮಹಾರಾಷ್ಟ್ರ ರಾಜ್ಯದ ಕೊಂಕಣ ಕರಾವಳಿ ಮತ್ತು ಡೆಕ್ಕನ್ ಪ್ರಸ್ಥಭೂಮಿಯ ಸಮೀಪವಿರುವ ಪರ್ವತ ಶ್ರೇಣಿಯೇ ಈ ನಾನೇ ಘಾಟ್.

ಮುಂಬೈನಿಂದ ಸುಮಾರು ಮೂರು ಗಂಟೆಗಳ ಕಾಲ ಪ್ರಯಾಣಿಸಿದರೆ ಪುಣೆಯ ಜುನ್ನಾರ್ ಬಳಿಯಿರುವ ಈ ಜಲಪಾತ ಇರುವಲ್ಲಿಗೆ ತಲುಪಬಹುದು.

ನಾನೇ ಘಾಟ್ ಜಲಪಾತವು ವಿರುದ್ಧ ದಿಕ್ಕಿನಲ್ಲಿ ಹರಿಯುವುದೇ ಈ ಫಾಲ್ಸ್ನ ವಿಶೇಷತೆಯಾಗಿದೆ. ಈ ಜಲಪಾತ ಕೆಳಗಿನಿಂದ ಮೇಲಕ್ಕೆ ಹರಿಯುವುದಿಲ್ಲ.

ಈ ಜಲಪಾತದ ನೀರು ಕೆಳಗೆ ಹರಿಯುವಾಗ ವೇಗವಾದ ಗಾಳಿಯ ಬಲವಾದ ಶಕ್ತಿಯಿಂದ ಮೇಲಕ್ಕೆ ತಳ್ಳಲ್ಪಡುವ ಕಾರಣ ನೀರು ಮೇಲಕ್ಕೆ ಹೋಗುತ್ತದೆ.

Leave a Reply

Your email address will not be published. Required fields are marked *