ಪಾಲಡ್ಕ :(ಆ.13) ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ, ಟ್ರಸ್ಟ್ ಗುರುವಾಯನಕೆರೆ ಮಡಂತ್ಯಾರು ವಲಯದ ಪಾಲಡ್ಕ ಕಾರ್ಯಕ್ಷೇತ್ರದ ದ, ಕ, ಜಿ, ಪಾ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಲಡ್ಕ ಶಾಲೆಯ ಹೊರಾಂಗಣದಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮವನ್ನು ಶೌರ್ಯ ವಿಪತ್ತು ಘಟಕ ಒಕ್ಕೂಟದವರ ಹಾಗೂ ಶಾಲಾ ಎಸ್.ಡಿ.ಎಂ.ಸಿ ತಂಡದ ಸದಸ್ಯರ ಸಹಕಾರದೊಂದಿಗೆ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮೇಲ್ವಿಚಾರಕರು ಕೇಶವ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು ಪ್ರೀತ್ ಕುಮಾರ ಕೃಷಿ ಮೇಲ್ವಿಚಾರಕರು ಕೃಷ್ಣ, ಶಾಲಾ ಮುಖ್ಯೋಧ್ಯಾಪಕರಾದ ಶ್ರೀಮತಿ ಶಾಮಲಾ ಪಿ, ಉಪಾಧ್ಯಕ್ಷರು ಶುಭ ಲತಾ, ವಲಯದ ಅಧ್ಯಕ್ಷರು ಜಯ ಪೂಜಾರಿ, ಪಾಲಡ್ಕ ಒಕ್ಕೂಟದ ಅಧ್ಯಕ್ಷರು ಶ್ರೀಮತಿ ಕುಸುಮಾವತಿ, ಕುದ್ರಡ್ಕ ಒಕ್ಕೂಟದ ಅಧ್ಯಕ್ಷರು ವಿಜಯ ಮಡಕ್ಕಿಲ,
ಕಾರ್ಯದರ್ಶಿ ಸವಿತಾ ವಿಪತ್ತು ಘಟಕದ ಸ್ವಯಂಸೇವಕರು, ಗೋಪಾಲ, ಪುಷ್ವರಾಜ ಸಂದೀಪ ಪರಮೇಶ್ವರ ಕುದ್ರಡ್ಕ ಸೇವಾ ಪ್ರತಿನಿಧಿ ಶ್ರೀಮತಿ ನಂದಿನಿ, ಎಸ್.ಡಿ.ಎಂ.ಸಿ ಸದಸ್ಯರು ಪೋಷಕರು, ತಂಡದ ಸದಸ್ಯರು ಶ್ರಮದಾನದಲ್ಲಿ ಉಪಸಿತರಿದ್ದರು.


