Thu. Aug 14th, 2025

Ujire: ಉಜಿರೆ ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ಕಿಂಡರ್‌ಗಾರ್ಟನ್ ವಿಭಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪೂರ್ವ ಸಂಭ್ರಮ

ಉಜಿರೆ :(ಆ. 13) ಉಜಿರೆ ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ಕಿಂಡರ್‌ಗಾರ್ಟನ್ ವಿದ್ಯಾರ್ಥಿಗಳಿಂದ ದೇಶಭಕ್ತಿಯನ್ನು ಆಚರಿಸುವ ಉದ್ದೇಶದಿಂದ ಆಗಸ್ಟ್ 13 ರಂದು ಸ್ವಾತಂತ್ರ್ಯ ದಿನ ವಿಶೇಷ ಕಾರ್ಯಕ್ರಮ ನಡೆಯಿತು. ಪ್ರೀ-ಕೆ.ಜಿ, ಎಲ್‌.ಕೆ.ಜಿ ಹಾಗೂ ಯು.ಕೆ.ಜಿ ಯ ಎಲ್ಲಾ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು.

ಇದನ್ನೂ ಓದಿ: 🔴ಉಜಿರೆ: ಉಜಿರೆ ಎಸ್‌.ಡಿ.ಎಂ (ಸಿ.ಬಿ.ಎಸ್.ಇ) ಶಾಲೆಯಲ್ಲಿ “ರಾಷ್ಟ್ರಧ್ವಜದ ಮಾಹಿತಿ” ಕಾರ್ಯಕ್ರಮ

ತರಗತಿ ವಿಭಾಗವಾರು ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗಳನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೋಷಕರೂ ಸಾಕ್ಷಿಯಾಗಿದ್ದು, ಕಾರ್ಯಕ್ರಮಕ್ಕೆ ಮತ್ತಷ್ಟು ಹರ್ಷ ಮತ್ತು ದೇಶಭಕ್ತಿಯ ವಾತಾವರಣವನ್ನು ನೀಡಿತು.

ಕಾರ್ಯಕ್ರಮದ ಅಧ್ಯಕ್ಷತೆ ಶಾಲಾ ಪ್ರಾಂಶುಪಾಲರಾದ ಶೀ ಮನಮೋಹನ್ ನಾಯ್ಕ್ ಕೆ.ಜಿ ವಹಿಸಿದ್ದರು.

Leave a Reply

Your email address will not be published. Required fields are marked *