Wed. Aug 20th, 2025

ಬೆಳ್ತಂಗಡಿ: ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ (ರಿ) ಮೊಗ್ರು ಇದರ ದತ್ತುಸ್ವೀಕಾರ – ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೊಗ್ರು ಇಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಪ್ರಾರಂಭೋತ್ಸವ ಹಾಗೂ ಶಾಲೆಗೆ ಹೊಸ ಪೀಠೋಪಕರಣ ಹಸ್ತಾಂತರ ಕಾರ್ಯಕ್ರಮ

ಬೆಳ್ತಂಗಡಿ: ಬದಲಾದ ಶಿಕ್ಷಣ ವ್ಯವಸ್ಥೆಯಲ್ಲಿ ಆಂಗ್ಲ ಮಾಧ್ಯಮದ ಪ್ರೌಡಿಮೆ ಪ್ರಾಥಮಿಕ ಹಂತದಿಂದಲೇ ಅಗತ್ಯ. ಈ ದೃಷ್ಠಿಯಲ್ಲಿ ಕರ್ನಾಟಕ ಸರಕಾರ ಸರಕಾರಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದಲೇ ದ್ವಿಭಾಷಾ ಶಿಕ್ಷಣ ನೀತಿಕಥೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲು ಆದೇಶ ಮಾಡಿರುವುದು ಅಭಿನಂದನಾರ್ಹ ಎಂದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅಭಿಪ್ರಾಯಪಟ್ಟರು.

ಇದನ್ನೂ ಓದಿ: 🟣ಮಂಜೊಟ್ಟಿ: ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸ್ಟಾರ್ ಲೈನ್ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ (ರಿ) ಮೊಗ್ರು ಇದರ ದತ್ತು ಸ್ವೀಕಾರದೊಂದಿಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೊಗ್ರು ಇಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಪ್ರಾರಂಭೋತ್ಸವ ಹಾಗೂ ಶಾಲೆಗೆ ಹೊಸ ಪೀಠೋಪಕರಣ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಒಂದು ಕಾಲದ ಕುಗ್ರಾಮದಂತಿದ್ದ ಮೊಗ್ರು ಶಾಲೆ ಉಳಿವಿಗಾಗಿ ಟ್ರಸ್ಟ್ ಉತ್ತಮ ಪ್ರಯತ್ನದೊಂದಿಗೆ ಕೆಲಸ ಮಾಡಿ ಆಂಗ್ಲ ಭಾಷಾ ಶಿಕ್ಷಣಕ್ಕೆ ಅನುಮತಿ ಪಡೆದಿದೆ ಎಂದರು.

ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ (ರಿ) ಮೊಗ್ರು ಅಧ್ಯಕ್ಷ ಕುಶಾಲಪ್ಪ ಗೌಡ ನೆಕ್ಕರಜೆ ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಮೀಣ ಮಟ್ಟದ ಮಕ್ಕಳು ಜಾಗತಿಕ ಮಟ್ಟಕ್ಕೆ ತಲುಪಲು ಆಂಗ್ಲ ಮಾಧ್ಯಮದ ಶಿಕ್ಷಣ ಅಗತ್ಯ, ಅದಕ್ಕೆ ಪೂರಕವಾಗಿ ಟ್ರಸ್ಟ್ನ ವತಿಯಿಂದ ಇಬ್ಬರು, ಅನುಭವಿ ಶಿಕ್ಷಕಿಯನ್ನು ಒದಗಿಸಿ, ಮಕ್ಕಳಿಗೆ ಉತ್ತಮ ಗುಣಮಟ್ಟದ ಪೀಠೋಪಕರಣದೊಂದಿಗೆ ಶಾಲಾಕಲಿಕಾ ವಾತಾವರಣವನ್ನು ಉನ್ನತಿಕರಿಸಲಾಗಿದೆ ಎಂದರು. ಪದ್ಮುಂಜ ಸಿ.ಎ ಬ್ಯಾಂಕಿನ ಅಧ್ಯಕ್ಷ ರಕ್ಷಿತ್ ಪಣೆಕರ್ ಮಾತನಾಡಿ ಸರಕಾರಿ ಶಾಲಾ ಉಳಿವಿಗೆ ಪ್ರತಿಯೊಬ್ಬರು ಸಹಕರಿಸಬೇಕು. ಈ ದೃಷ್ಟಿಯಿಂದ ಸಹಕಾರಿ ಬ್ಯಾಂಕಿನ ವಿದ್ಯಾನಿಧಿಯೋಜನೆಯಿಂದ ಶಾಲೆ ಆರ್ಥಿಕ ಸಹಕಾರ ಒದಗಿಸಲಾಗುವುದು ಎಂದರು.

ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಖಂಡಿಗ ಅಧ್ಯಕ್ಷತೆ ವಹಿಸಿ ಮಾತನಾಡಿ ಸರಕಾರಿ ಶಾಲೆಗಳಿಗೆ ಪಂಚಾಯತ್‌ನಿಂದ ನೆರವು ಸಿಗಬೇಕು ಎಂದರು. ಶ್ರೀ ಕ್ಷೇತ್ರ ಮುಗೇರಡ್ಕದ ಆಡಳಿತ ಮುಕ್ತೇಸರ ರಾಮಣ್ಣಗೌಡ ದೇವಸ್ಯ ಬಂದಾರು ಪಂಚಾಯತ್ ಸದಸ್ಯ ಗಂಗಧರ ಪೂಜಾರಿ, ಬಾಲಕೃಷ್ಣಗೌಡ, ಎಸ.ಡಿ.ಎಂ.ಸಿ ಅಧ್ಯಕ್ಷೆ ಶ್ರೀಮತಿ ಪ್ರಜ್ಞಾ ಉಪಸ್ಥಿತರಿದ್ದರು ಟ್ರಸ್ಟ್ನ ಕಾರ್ಯದರ್ಶಿ ಮನೋಹರ ಅಂತರ ಸ್ವಾಗತಿಸಿದರು. ಕೋಶಾಧಿಕಾರಿ ಪುರಂದರ ಗೌಡ ಧನ್ಯವಾದ ಗೈದರು, ಶಾಲಾ ಮುಖ್ಯೋಪಾಧ್ಯಾಯ ಮಾಧವ ಗೌಡ ನಿರೂಪಿಸಿದರು.

5 ಲಕ್ಷ ಮೌಲ್ಯದ ಪೀಟೋಪಕರಣ ಕೊಠಡಿ ಹಾಗೂ ವಾಹನ ಸೌಲಭ್ಯ ಟ್ರಸ್ಟ್ನ ನೇತೃತ್ವದಲ್ಲಿ ದ.ಕ. ಸರಕಾರಿ ಪ್ರಾಥಮಿಕ ಶಾಲೆಗೆ ದಾನಿ ಮೋಹನ್ ಕುಮಾರ್ ಮಾಲಕರು ಶ್ರೀ ಲಕ್ಷ್ಮಿ ಇಂಡಸ್ಟ್ರೀಸ್ ಉಜಿರೆ ಇವರಿಂದ 1 ಲಕ್ಷ ಮೌಲ್ಯದ ಡೆಸ್ಕ್ ಮತ್ತು ಚೆಂಡು, ಟ್ರಸ್ಟ್ನ ವತಿಯಿಂದ ಮೊಗ್ರು ಅಂಗನವಾಡಿಯ ವಿದ್ಯಾರ್ಥಿಗಳಿಗೆ ಹಾಗೂ 1ನೇ ತರಗತಿಗೆ ಆಂಗ್ಲಮಾಧ್ಯಮ ವಿದ್ಯಾರ್ಥಿಗಳಿಗೆ ಆಕರ್ಷಕ ಕುರ್ಚಿ ಹಾಗೂ ಮೇಜುಗಳನ್ನು, ಪಾಠದ ಕೊಠಡಿಗಳಿಗೆ ವಿಭಜಕಗಳನ್ನು ಮಾಡಿ ಒದಗಿಸಲಾಯಿತು. ಗ್ರಾಮೀಣ ಮಟ್ಟದ ಮಕ್ಕಳನ್ನು ಶಾಲೆಗೆ ಕರೆತರಲು ಟ್ರಸ್ಟ್ನ ನೇತೃತ್ವದಲ್ಲಿ ವಾಹನ ಖರೀದಿಸಿ ಮಕ್ಕಳ ಪ್ರಯಾಣಕ್ಕೆ ಒದಗಿಸಲಾಗಿದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು