ಬೆಳ್ತಂಗಡಿ: ಅನನ್ಯ ಭಟ್ ಎಂಬ ಮಗಳೇ ಇಲ್ಲ ನಾನು ಸುಳ್ಳು ಹೇಳಿದ್ದೇನೆ ಎಂದು ಸುಜಾತಾ ಭಟ್ ಯೂಟ್ಯೂಬ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದು ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಗಿರೀಶ್ ಮಟ್ಟಣ್ಣನವರ್ ಮತ್ತು ಜಯಂತ್ ಅವರು ಈ ರೀತಿ ಹೇಳಲು, ಹೇಳಿದ್ದರು. ಅನನ್ಯ ಭಟ್ ಎಂಬ ಮಗಳೇ ಇಲ್ಲ. ತಾತನ ಆಸ್ತಿ ವಿಷಯದಲ್ಲಿ ನಾನು ಈ ರೀತಿ ಮಾಡಿದ್ದೇನೆ ಎಂಬ ರೀತಿಯಲ್ಲಿ ಅವರು ಹೇಳಿಕೆ ನೀಡಿದ್ದಾರೆ.
ಪೋಟೋ ತೋರಿಸಿರುವುದು ದೂರು ನೀಡಿರುವುದು ಸುಳ್ಳು. ನನ್ನ ಆಸ್ತಿಯನ್ನು ನನಗೆ ಮಾಹಿತಿಯಿಲ್ಲದೆ ಮಾರಿದ್ದಾರೆ ಈ ಕಾರಣಕ್ಕೋಸ್ಕರ ನಾನು ಅನನ್ಯ ಭಟ್ ಕಥೆ ಕಟ್ಟಿದ್ದೇನೆ. ನಮ್ಮ ಆಸ್ತಿಯನ್ನು ಅವರಿಗೆ ಕೊಟ್ಟಿದ್ದನ್ನು ಪ್ರಶ್ನಿಸಿದ್ದೇನೆ. ನನಗೆ ಈ ಮಟ್ಟಕ್ಕೆ ಬರುತ್ತದೆ ಎಂದು ಗೊತ್ತಿಲ್ಲ.
ನನ್ನನು ಈ ಕೇಸ್ ನಿಂದ ಮುಕ್ತಿಗೊಳಿಸಿ, ಅದಕ್ಕಾಗಿ ನಾನು ದೇಶದ, ನಾಡಿನ ಜನರ ಕ್ಷಮೆ ಕೇಳುತ್ತೇನೆ. ಧರ್ಮಸ್ಥಳದವರಲ್ಲಿಯೂ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.