ಬೆಳ್ತಂಗಡಿ: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santosh) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಉಡುಪಿಯ ಬ್ರಹ್ಮಾವರ ಪೊಲೀಸರು ಉಜಿರೆಗೆ ತೆರಳಿ ನಿವಾಸದಿಂದ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಿದ್ದರು.

ಕೋರ್ಟ್ ಆದೇಶದ ಹಿನ್ನೆಲೆ ಮಹೇಶ್ ತಿಮರೋಡಿ ಅವರು ಹಿರಿಯಡ್ಕ ಸಬ್ ಜೈಲು ಸೇರಿದ್ದರು.ನೂರಾರು ಶವಗಳನ್ನು ಹೂತಿದ್ದೇನೆಂದು ಹೇಳಿದ್ದ ಮಾಸ್ಕ್ ಮ್ಯಾನ್ ನನ್ನು ಎಸ್. ಐ.ಟಿ ಯವರು ವಶಕ್ಕೆ ಪಡೆದು , ಕೋರ್ಟ್ ಗೆ ಆಗಸ್ಟ್ . 22 ರಂದು ಹಾಜರು ಪಡಿಸಿದ್ದರು.

ವಿಚಾರಣೆಗೆ ಒಳಪಡಿಸಿ ಮಾಸ್ಕ್ ಮ್ಯಾನ್ ಅಲಿಯಾಸ್ ಚಿನ್ನಯ್ಯ ನನ್ನು ಎಸ್. ಐ ಟಿ ಕಸ್ಟಡಿ ಗೆ ತೆಗೆದುಕೊಂಡಿದೆ.ಮಹೇಶ್ ಶೆಟ್ಟಿ ತಿಮರೋಡಿ ಗೆ ಷರತ್ತು ಬದ್ಧ ಜಾಮೀನು ಮಂಜೂರಾಗಿದೆ.
ಆಗಸ್ಟ್ .22 ರಂದು ಎಸ್. ಐ. ಟಿ.ತಂಡ ಮಹೇಶ್ ಶೆಟ್ಟಿ ತಿಮರೋಡಿಯನ್ನು ವಶಕ್ಕೆ ಪಡೆಯಲು ಉಡುಪಿಗೆ ತೆರಳಿದೆ ಎಂಬ ಮಾಹಿತಿ ಲಭ್ಯವಾಗಿದೆ.


