Sun. Aug 24th, 2025

ಬಡಗಕಾರಂದೂರು: ಬಡಗಕಾರಂದೂರು, ಸುಲ್ಕೇರಿಮೊಗ್ರು, ಪಿಲ್ಯ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

ಬಡಗಕಾರಂದೂರು : ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪಕ್ಷ ಸಂಘಟನಾ ದೃಷ್ಟಿಯಿಂದ ಆ 23 ರಂದು ನಡೆದ ಬಡಗಕಾರoದೂರು, ಸುಲ್ಕೇರಿಮೊಗ್ರು, ಪಿಲ್ಯ ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಅಭ್ಯಾಸ ವರ್ಗ ಸಭೆ ನಡೆಯಿತು.

https://www.youtube.com/live/jsZ8Y2CR658?si=7rX2ZtY2Aw-ye-KV

ಕಾರ್ಯಕ್ರಮವನ್ನು ಪಕ್ಷದ ಹಿರಿಯರಾದಶಿವಪ್ಪ ಪೂಜಾರಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಯಾನಂದ ಗೌಡರವರು ಉದ್ಘಾಟನಾ ಭಾಷಣ ಮಾಡಿದರು. ಶಾಸಕರಾದ ಹರೀಶ್ ಪೂಂಜರವರು ಪಾಲ್ಗೊಂಡು ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆ ಮತ್ತು ಕಾರ್ಯಚಟುವಟಿಕೆಯ ಕುರಿತು ವಿಸ್ತ್ರುತವಾಗಿ ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ಮಂಡಲ ಪ್ರಮುಖರಾದ ನಂದ ಕುಮಾರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಜಯಂತ ಕೋಟ್ಯಾನ್, ವೃಷಾoಕ್ ಖಾದಿಲ್ಕರ್, ಆಳದಂಗಡಿ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಮಾಧವ ಶಿರ್ಲಾಲು ಬೈಠಕ್ ನೀಡಿದರು. ಮಂಡಲ ಬಿಜೆಪಿ ಉಪಾಧ್ಯಕ್ಷರಾದ ಸದಾನಂದ ಪೂಜಾರಿ ಉಂಗಿನಬೈಲು,ಅಭ್ಯಾಸ ವರ್ಗ ಪ್ರಭಾರಿ ಕೊರಗಪ್ಪ ಗೌಡ, ನವೀನ್ ಸಾಮಾನಿ, ಅಳದಂಗಡಿ ಪಂಚಾಯತ್ ಅಧ್ಯಕ್ಷರಾದ ಸರಸ್ವತಿ, ಪ್ರಮುಖರು, ಜನಪ್ರತಿನಿದಿನಗಳು ಹಾಗೂ ಅನ್ಯನ್ಯ ಜವಾಬ್ದಾರಿಯ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು. ಹರೀಶ್ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *