Wed. Nov 20th, 2024

Daily Horoscope: ಈ ರಾಶಿಯವರಿಗೆ ವೈವಾಹಿಕ ಜೀವನದಲ್ಲಿ ಮನಸ್ತಾಪ !!

ಮೇಷ ರಾಶಿ: ಪಾಲುದಾರಿಕೆಯಲ್ಲಿ ಹೊಸ ಉದ್ಯಮವನ್ನು ಆರಂಭಿಸುವಿರಿ. ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯನ್ನು ಕಂಡು ಖುಷಿಯಾಗುವುದು. ಸ್ತ್ರೀಯರಿಂದ ಧನಸಹಾಯವು ಆಗಲಿದೆ. ಇಂದು ನಿಮಗೆ ಸಾಕಷ್ಟು ಸಮಯವಿರಲಿದ್ದು, ಸದುಪಯೋಗ ಮಾಡಿಕೊಳ್ಳಬೇಕಿದೆ.

ವೃಷಭ ರಾಶಿ: ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಿರಿ. ನಿಮ್ಮ ಗುರಿಯನ್ನು ಬಹಳ ಪ್ರಯತ್ನದಿಂದ ಇಂದು ಮುಟ್ಟುವಿರಿ. ರಾಜಕೀಯವಾಗಿ ಪ್ರಭಾವವಿರುವ ವ್ಯಕ್ತಿಗಳ ಸಂಪರ್ಕವು ಇಂದು ಆಗಲಿದೆ. ವೈವಾಹಿಕ ಜೀವನದಲ್ಲಿ ಮನಸ್ತಾಪ ಇರಲಿದೆ.

ಮಿಥುನ ರಾಶಿ: ನೀವು ಇಂದು ಅಸಾಧ್ಯವೆಂದು ಬಿಟ್ಟ ಕಾರ್ಯಗಳನ್ನು ಪುನಃ ಕೈಗೆತ್ತಿಕೊಳ್ಳುವಿರಿ. ಇದಕ್ಕೆ ಧನ ಸಹಾಯ ಹಾಗೂ ಜನ ಸಹಾಯವೂ ಸಿಗಲಿದೆ. ಧಾರ್ಮಿಕ ಮತ್ತು ನಿಮ್ಮ ಮಕ್ಕಳು ನಿಮ್ಮನ್ನು ಸಂತೋಷವಾಗಿ ಇಡುವರು. ಅನಿವಾರ್ಯವಾಗಿ ಖರ್ಚು ಮಾಡಬೇಕಾದ ಸಂದರ್ಭ ಬಂದಾಗ ಸ್ನೇಹಿತರ ಸಹಾಯವನ್ನು ಕೇಳುವಿರಿ.

ಕರ್ಕಾಟಕ ರಾಶಿ: ಇಂದು ನಿಮ್ಮ ಕಷ್ಟಕರ ಸಂದರ್ಭದಲ್ಲಿಯೂ ಧೈರ್ಯವನ್ನು ಬಿಡದೇ ಎದುರಿಸಬೇಕು. ದೂರಪ್ರಯಾಣದಲ್ಲಿ ಸ್ನೇಹಿತರ ಮನೆಯಲ್ಲಿ ವಾಸ ಮಾಡಬೇಕಾಗಬಹುದು. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು.

ಸಿಂಹ ರಾಶಿ: ಇಂದು ನಿಮಗೆ ಹಣವನ್ನು ಉಳಿಸಿಕೊಳ್ಳಬೇಕು ಎಂಬ ಇಚ್ಛೆ ಇದ್ದರೂ ಬಂದ ಹಣವು ನಿಲ್ಲದೆ ಖಾಲಿಯಾಬಹುದು. ಕಛೇರಿಯಲ್ಲಿ ನಿಮ್ಮನ್ನು ಸೂಕ್ತ ವ್ಯಕ್ತಿ ಎಂದು ಆಯ್ಕೆ ಮಾಡಿದ್ದರೂ ನಿಮಗೆ ಹಿಂಜರಿಕೆ ಉಂಟಾಗಲಿದೆ. ಶುಷ್ಕಭೂಮಿಯ ಮಾರಾಟದಿಂದ ಲಾಭವಿರಲಿದೆ. ವೃತ್ತಿಯ ಸಾಧನೆಯನ್ನು ಮನೆಯಲ್ಲಿ ಹೇಳಿಕೊಳ್ಳುವಿರಿ.

ಕನ್ಯಾ ರಾಶಿ: ನಿಮ್ಮ ಶಿಕ್ಷಣದಿಂದ ಪ್ರತಿಷ್ಠಿತ ಕಂಪೆನಿಯ ಉದ್ಯೋಗವನ್ನು ಪಡೆಯುವಿರಿ. ನಿಮ್ಮ ಹಾಸ್ಯದ ಸ್ವಭಾವವು ಮನೆಯಲ್ಲಿ ಸಂತೋಷದ ವಾತಾವರಣವನ್ನು ಇರಿಸುತ್ತದೆ. ನಿಮ್ಮನ್ನು ನೀವೇ ಹೊಗಳಿಕೊಳ್ಳುವುದು ವಿಚಿತ್ರ ಎನಿಸಬಹುದು. ಇಂದು ಹೂಡಿಕೆ‌ ಮಾಡಿ ಬಹುದಿನದ ಬಯಕೆಯನ್ನು ತೀರಿಸಿಕೊಳ್ಳುವಿರಿ.

ತುಲಾ ರಾಶಿ: ನೀವು ಬಹಳ ನಾಜೂಕಿನಿಂದ ಕೆಲಸ ಮಾಡಿಕೊಂಡು ಎಲ್ಲಿಯೂ ಸಿಕ್ಕಿಹಾಕಿಕೊಳ್ಳಲಾರಿರಿ. ಇದರಿಂದ ನೀವು ಜಟಿಲವಾದ ಸಮಸ್ಯೆಯನ್ನು ಸರಾಗವಾಗಿ ಪರಿಹರಿಸಿಕೊಳ್ಳುವಿರಿ. ನಿಮ್ಮ‌ ಆಸಕ್ತಿಯನ್ನು ನೀವು ಬದಲಾಯಿಸಿಕೊಳ್ಳುವುದು ಬೇಡ. ಸಂಗಾತಿಯಿಂದ‌ ನಿರ್ಲಕ್ಷ್ಯಕ್ಕೆ‌ ಒಳಗಾಗುವಿರಿ. ನಿಮ್ಮ ಕೆಲಸದ ಮೇಲೇ ಹೆಚ್ಚು ಗಮನವಿಡುವುದು ಒಳ್ಳೆಯದು.‌

ವೃಶ್ಚಿಕ ರಾಶಿ: ಇಂದಿನ ನಿಮ್ಮ‌ ಶ್ರಮವು ಫಲಿಸಿ, ಉತ್ಸಾಹವನ್ನೂ ಹೆಚ್ಚಿಸುವುದು. ಅತಿಯಾಗಿ ಭಾವನಾತ್ಮಕವಾಗುವುದು ಮತ್ತು ನಿಮ್ಮವರಿಂದ ಹೆಚ್ಚಿನದನ್ನು ನಿರೀಕ್ಷಿಸದಿರುವುದು ಒಳ್ಳೆಯದು. ಅಸೂಯೆಯಿಂದ‌ ನಿಮ್ಮ ಕೆಲಸವು ಹಿಂದುಳಿಯುವುದು. ಅನಗತ್ಯ ಕೆಲಸಗಳಿಗೆ ಕೈ ಹಾಕಿ ಹಣವನ್ನು ಕಳೆದುಕೊಳ್ಳಬಹುದು.

ಧನು ರಾಶಿ: ಇಂದು ನೀವು ಅಂದುಕೊಂಡಿದ್ದನ್ನು ಸಾಧಿಸಿಕೊಂಡು ನೆಮ್ಮದಿಯಿಂದ ನಿದ್ರಿಸುವಿರಿ. ನಿಮ್ಮ ಪ್ರತಿಭೆಗೆ ಇಂದು ಪರೀಕ್ಷಾ ಕಾಲವಾಗಲಿದೆ. ಇದರಿಂದ ನಿಮ್ಮ ಆತ್ಮಬಲವು ಅಧಿಕವಾಗುವುದು. ನಿಮ್ಮ ವ್ಯಕ್ತಿತ್ವವನ್ನು ಬದಲಿಸಿಕೊಳ್ಳಲು ಬಯಸುವಿರಿ.

ಮಕರ ರಾಶಿ: ಇನ್ನೊಬ್ಬರಿಗೆ ಮಾಡುವ ಸಹಾಯದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಮ್ಮ ಜೀವನದ ಎಲ್ಲ ಪರೀಕ್ಷೆಯನ್ನೂ ಪಾಸಾಗಬೇಕು ಎಂಬುದೇ ನಿಮ್ಮ‌ ನಿಶ್ಚಲ ನಿರ್ಧಾರ. ಹಣಕಾಸಿನ ತೊಂದರೆ ಬಂದರೂ ಅದನ್ನು ನಿಭಾಯಿಸುವ ಚಾಣಾಕ್ಷತನ ನಿಮಗೆ ಗೊತ್ತಿದೆ. ತಂದೆಯ ಮಾತನ್ನು ಶ್ರದ್ಧೆಯಿಂದ ಪಾಲಿಸುವಿರಿ.

ಕುಂಭ ರಾಶಿ: ಆಹಾರವನ್ನು ಕಡಿಮೆ ಮಾಡಲು ವೈದ್ಯರ ಸಲಹೆಯನ್ನು ಪಡೆಯುವಿರಿ. ಕುಟುಂಬದ ಒತ್ತಡವನ್ನು ಕಛೇರಿಗೆ ಒಯ್ಯವುದು ಬೇಡ. ಬಹು ಮುಖ್ಯ ಕೆಲಸಕ್ಕಾಗಿ ಕಾದು ಸಮಯವನ್ನು ವ್ಯರ್ಥ ಮಾಡಿಕೊಳ್ಳುವಿರಿ.

ಮೀನ ರಾಶಿ: ನೀವು ಉತ್ತಮ ಕ್ರಮವನ್ನು ರೂಢಿಸಿಕೊಳ್ಳಲು ಪ್ರಯತ್ನಿಸಿ. ಮನೆಯಲ್ಲಿ ಶಿಸ್ತಿನ ವಾತಾವರಣವು ಸಂತೋಷವನ್ನು ತರುವುದು. ನಿಮ್ಮ ದುರಾಭ್ಯಾಸಗಳು ನಿಮ್ಮವರಿಗೆ ಅಪಮಾವನ್ನು ಮಾಡಿಸೀತು. ಆಯಾಸವಾಗಿದ್ದರೆ ವಿಶ್ರಾಂತಿಯನ್ನು ಸ್ವಲ್ಪ ಪಡೆಯಿರಿ.

Leave a Reply

Your email address will not be published. Required fields are marked *