Tue. Sep 2nd, 2025

ಉಜಿರೆ: ಅನುಗ್ರಹ ಶಾಲೆಯಲ್ಲಿ “ಕಲರ್ಸ್ ಡೇ” -2025

ಉಜಿರೆ: ಅನುಗ್ರಹ ಶಾಲೆಯಲ್ಲಿ ಪ್ರೀ ಕೆ.ಜಿ, ಎಲ್.ಕೆ.ಜಿ, ಯು.ಕೆ.ಜಿ ಹಾಗೂ ಒಂದನೇ ತರಗತಿಯ ಪುಟಾಣಿಗಳಿಗೆ ‘ಕಲರ್ಸ್ ಡೇ( ಬಣ್ಣಗಳ ದಿನ) ಯನ್ನು ವಿನೂತನ ರೀತಿಯಲ್ಲಿ ವೈಭವದಿಂದ ಆಚರಿಸಲಾಯಿತು. ಶಾಲೆಯ ಹೆಮ್ಮಯ ಬ್ಯಾಂಡ್ ವಾದನದೊಂದಿಗೆ ಪುಟಾಣಿಗಳನ್ನು ಅವರ ಹೆತ್ತವರೊಂದಿಗೆ ಅನುಗ್ರಹ ಶಾಲಾ ಮಹಾದ್ವಾರದಿಂದ ಸಭಾಭವನಕ್ಕೆ ಶಿಸ್ತಿನಿಂದ ಕರೆತರಲಾಯಿತು.

ಇದನ್ನೂ ಓದಿ: 🔴ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ


ತದನಂತರ ಪುಟಾಣಿ ಮಕ್ಕಳ ಪ್ರಾರ್ಥನಾ ನೃತ್ಯದೊಂದಿಗೆ ಸಭಾಕಾರ್ಯವನ್ನು ಪ್ರಾರಂಭಿಸಲಾಯಿತು. ಪುಟಾಣಿ ವಿದ್ಯಾರ್ಥಿಗಳು ಗಣ್ಯರನ್ನು ಸ್ವಾಗತಿಸಿದರು. ವಿಭಿನ್ನ ಶೈಲಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾದ ಡಾ. ಮರೀನಾ ಬ್ಯಾಪ್ಟಿಸ್ಟ್ ಇವರು ತಮ್ಮ ಭಾಷಣದಲ್ಲಿ ಬಣ್ಣಗಳ ಮಹತ್ವವನ್ನು ತಿಳಿಸಿ, ಮಕ್ಕಳನ್ನು ಪ್ರೀತಿಯಿಂದ ಬೆಳೆಸಬೇಕು ಎಂದು ತಿಳಿಸಿದರು. ನಂತರ ಶಾಲಾ ಸಂಚಾಲಕರಾದ ವಂದನೀಯ ಫಾ! ಅಬೆಲ್ ಲೋಬೊ ಅವರು ಕರ‍್ಸ್ ಡೇ ಯ ಮಹತ್ವವನ್ನು ತಿಳಿಸುತ್ತಾ ಮಕ್ಕಳ ಪ್ರಯತ್ನ ಸಂತಸ ವ್ಯಕ್ತಪಡಿಸಿ, ಶುಭ ಹಾರೈಸಿದರು.

ವೇದಿಕೆಯಲ್ಲಿ ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾ! ವಿಜಯ್ ಲೋಬೊ, ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಅಂಟನಿ ಫೆರ್ನಾಂಡೀಸ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ಗುರುರಾಜ್ ಶಬರಾಯ ಹಾಗೂ ಶಿಕ್ಷಕಿಯಾದ ಶ್ರೀಮತಿ ಗ್ರೇಸಿ ಸಲ್ಡಾನ್ಹಾ ಉಪಸ್ಥಿತರಿದ್ದರು. ವಿದ್ಯಾರ್ಥಿ ರಾಹುಲ್ ಪ್ರಭು ಕಾರ್ಯಕ್ರಮ ನಿರೂಪಿಸಿದರು.


ತದನಂತರ ಪುಟಾಣಿ ಮಕ್ಕಳಿಂದ ನಡೆದ ವೈವಿಧ್ಯಮಯ ಬಣ್ಣಗಳ ವಸ್ತ್ರಾಲಂಕಾರದಿಂದ ಕೂಡಿದ ನೃತ್ಯವು ಎಲ್ಲರ ಮನರಂಜಿಸಿತು.

Leave a Reply

Your email address will not be published. Required fields are marked *