ಕೊಕ್ಕಡ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪಕ್ಷ ಸಂಘಟನಾ ದೃಷ್ಟಿಯಿಂದ ಕೊಕ್ಕಡ ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಅಭ್ಯಾಸ ವರ್ಗ ಸಭೆ ಸೆ 06 ರಂದು ಶ್ರೀರಾಮ ಭಜನಾ ಮಂದಿರ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪಕ್ಷದ ಹಿರಿಯ ಕಾರ್ಯಕರ್ತರಾದ ಬಿಜೆಪಿ ಗ್ರಾಮ ಸಮಿತಿ ಮಾಜಿ ಅಧ್ಯಕ್ಷರು ಹಿರಿಯರಾದ ಸುಂದರ ಭಂಡಾರಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಸಕರಾದ ಹರೀಶ್ ಪೂಂಜಾರವರು ಉದ್ಘಾಟನಾ ಭಾಷಣದ ಜೊತೆಗೆ ಪಕ್ಷ ಸಂಘಟನೆ ಮತ್ತು ಕಾರ್ಯಚಟುವಟಿಕೆಯ ಕುರಿತು ವಿಸ್ಕ್ರುತವಾಗಿ ಸಮಾಲೋಚನೆ ನಡೆಸಿದರು.
ಕಣಿಯೂರು ಗ್ರಾಮ ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ್, ಯುವ ವಕೀಲರಾದ ಯತೀಶ್ ಶೆಟ್ಟಿ ಪಣೆಕ್ಕರ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೀತಾರಾಮ್ ಬಿ. ಎಸ್. ಬೆಳಾಲು,ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಸುಧಾಕರ ಲಾಯಿಲ, ಧರ್ಮಸ್ಥಳ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಗಣೇಶ್ ಹೊಸ್ತೋಟ, ಬೈಠಕ್ ನೀಡಿದರು,ಪಕ್ಷದ ಹಿರಿಯರಾದ ಎಸ್ ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾದ ಕುಶಾಲಪ್ಪ ಗೌಡ ಪೂವಾಜೆ ಸಮಾರೋಪ ಭಾಷಣ ನೆರವೇರಿಸಿದರು, ಈ ಸಂದರ್ಭದಲ್ಲಿ ನಡೆಸಿದರು.
ಈ ಸಂದರ್ಭದಲ್ಲಿ ಕೊಕ್ಕಡ ಶಕ್ತಿ ಕೇಂದ್ರ ಪ್ರಮುಖ್ ಪ್ರಶಾಂತ್ ಪೂವಾಜೆ, ಶ್ರೀಮತಿ ಲಕ್ಷ್ಮೀ ಅಡೈ, ರಾಮಣ್ಣ ಗೌಡ ಕೇಚೋಡಿ, ಲೋಕಯ್ಯ ಗೌಡ ಕೆಂಪಮಜಲು, ಧರ್ಮಸ್ಥಳ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಹರೀಶ್ ಗೌಡ ಕೊಯಿಲ,ಅಭ್ಯಾವರ್ಗ ಪ್ರಭಾರಿ ಕೊರಗಪ್ಪ ಗೌಡ ಚಾರ್ಮಾಡಿ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ,
ಕೊಕ್ಕಡ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬೇಬಿ,ಮಂಡಲ ಯುವಮೋರ್ಚಾ ಕಾರ್ಯದರ್ಶಿ ರಂಜು ಕೊಕ್ಕಡ, ಕೊಕ್ಕಡ ಶಕ್ತಿ ಕೇಂದ್ರ ಬೂತ್ ಅಧ್ಯಕ್ಷ, ಕಾರ್ಯದರ್ಶಿಗಳಾದ ಕಿರಣ್ ಬಳ್ತಿಮಾರ್,ರವಿಚಂದ್ರ ಪುಡಿಕೇತ್ತೂರು,ಶಶಿಕುಮಾರ್ ತಿಪ್ಪಮಜಲು, ಶ್ರೀಧರ್ ಬಳಕ್ಕ, ಲಿಂಗಪ್ಪ ಕಡೀರ, ಭಾಸ್ಕರ ಶೆಟ್ಟಿಗಾರ್, ಕಿಶೋರ್ ಪೋಯ್ಯೋಲೆ, ಕೊಕ್ಕಡ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರುಗಳು,ಸಿ.ಎ. ಬ್ಯಾಂಕ್ ಉಪಾಧ್ಯಕ್ಷರು, ನಿರ್ದೇಶಕರುಗಳು, ಮಿಲ್ಕ್ ಸೊಸೈಟಿ ಪದಾಧಿಕಾರಿಗಳು, ಹಾಗೂ ಪಕ್ಷದ ಅನ್ಯನ್ಯ ಜವಾಬ್ದಾರಿ ಇರುವ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು. ಶ್ರೀಮತಿ ಪವಿತ್ರ ಸ್ವಾಗತಿಸಿ, ಶ್ರೀಮತಿ ಪ್ರಮೀಳ. ಜಿ. ಬಿಜೆಪಿ ಗೀತೆ ಹಾಡಿದರು, ಕೊಕ್ಕಡ ಪಂಚಾಯತ್ ಮಾಜಿ ಅಧ್ಯಕ್ಷರಾದ ಯೋಗೀಶ್ ಗೌಡ ಆಳಂಬಿಲ ಕಾರ್ಯಕ್ರಮ ನಿರೂಪಿಸಿ, ದೇವದುರ್ಲಭ ಕಾರ್ಯಕರ್ತರು ಸಹಕಾರವಿತ್ತರು.



