Mon. Sep 8th, 2025

ವಿಟ್ಲ: ಅಜ್ಜಿನಡ್ಕ ಒಕ್ಕೂಟದ 20 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀ ಸತ್ಯನಾರಾಯಣ ಪೂಜೆ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್,( ರಿ )ವಿಟ್ಲ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಅಳಿಕೆ ವಲಯದ ಅಜ್ಜಿನಡ್ಕ ಒಕ್ಕೂಟದ 20 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ವೇದಮೂರ್ತಿ ಶ್ರೀ ಬಿ. ಕೆ ಹೊಳ್ಳ ಕೊಪ್ಪಳ, ಬಲ್ನಾಡ್ ಇವರ ನೇತೃತ್ವದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರ ದುರ್ಗಾನಗರ ಅಜ್ಜಿನಡ್ಕ ದೇವರ ಸನ್ನಿಧಿಯಲ್ಲಿ ನೇರವೇರಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರೇಶ ನಾಯ್ಕ್ ವಹಿಸಿ,ಕಾರ್ಯಕ್ರಮದ ಉದ್ಘಾಟನೆಯನ್ನು ತಾಲ್ಲೂಕು ಯೋಜನಾಧಿಕಾರಿ ಸುರೇಶ ಗೌಡ ನೆರವೇರಿಸಿ ಯೋಜನೆಯು ನಡೆದು ಬಂದ ಹಾದಿ ಹಾಗೂ ಮಕ್ಕಳಿಗೆ ಧಾರ್ಮಿಕ ಭಾವನೆ ಹಾಗೂ ಸಂಸ್ಕೃತಿಯನ್ನು ಬೆಳೆಸುವ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಉದಯ್ ಕುಮಾರ್ ದಂಬೆ ಪ್ರಧಾನ ಕಾರ್ಯದರ್ಶಿ, ಶ್ರೀ ಮಹಿಷಮರ್ದಿನಿ ದೇವಸ್ಥಾನ ಪುಣಚ, ಸುರೇಶ್ ಗೌಡ ಪ್ರಗತಿಪರ ಕೃಷಿಕರು ಪುಣಚ, ಬಾಲಕೃಷ್ಣ ಕಾರಂತ ವಲಯಾಧ್ಯಕ್ಷರು ಜನಜಾಗೃತಿ ವೇದಿಕೆ ಅಳಿಕೆ,

ಶ್ರೀಮತಿ ಬೇಬಿ ಪಟಿಕಲ್ಲು ಅಧ್ಯಕ್ಷರು, ಗ್ರಾಮ ಪಂಚಾಯತ್ ಪುಣಚ, ಆನಂದ್ ನಾಯ್ಕ್ ಅಧ್ಯಕ್ಷರು, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ದುರ್ಗಾನಗರ ಅಜ್ಜಿನಡ್ಕ, ಕರುಣಾಕರ ಗೌಡ ನಿವೃತ್ತ ಸೈನಿಕರು ಅಜ್ಜಿನಡ್ಕ, ರಾಜೇಂದ್ರ ರೈ ವಲಯಧ್ಯಾಕ್ಷರು ಅಳಿಕೆ ಯೋಜನೆಯ ಬಗ್ಗೆ ಹಾಗೂ ಕಾರ್ಯಕ್ರಮದ ಕುರಿತು ಶುಭನುಡಿಗಳನ್ನಾಡಿದರು.

ಮೀನಾಕ್ಷಿ ಮೇಲ್ವಿಚಾರಕರು ಉಪಸ್ಥಿತರಿದ್ದರು. ಒಕ್ಕೂಟ ಸ್ಥಾಪಕಾಧ್ಯಕ್ಷರಾದ ಕುಂಞಣ್ಣ ಗೌಡ, ನಾಟಿ ವೈದ್ಯೆ ಶಾರದಾ, ನಿವೃತ್ತ ಶಿಕ್ಷಕಿ ಕಾವೇರಿ , ಚನಿಯಪ್ಪ ಗೌಡ ದಂಪತಿಗಳನ್ನು ಒಕ್ಕೂಟದ ಪರವಾಗಿ ಗೌರವಿಸಲಾಯಿತು. ಒಕ್ಕೂಟದಲ್ಲಿ ಸಂಘ ಬಿಟ್ಟ ಹಿರಿಯ ಸದಸ್ಯರನ್ನು ಹಾಗೂ ಪ್ರತಿಭಾವಂತ ಮಕ್ಕಳನ್ನು ಗೌರವಿಸಲಾಯಿತು. ಒಕ್ಕೂಟ ವರದಿಯನ್ನು ಸೇವಾಪ್ರತಿನಿಧಿ ಕಾವ್ಯ ವಾಚಿಸಿದರು.

ಶಾಲಿನಿ, ಸವಿತ, ನಳಿನಾಕ್ಷಿ ಪ್ರಾರ್ಥಿಸಿ, ಒಕ್ಕೂಟ ಕೋಶಾಧಿಕಾರಿ ಚನಿಯಪ್ಪ ನಾಯ್ಕ ಸ್ವಾಗತಿಸಿ, ಚೋಮಣ್ಣ ಗೌಡ ಧನ್ಯವಾದ ನೀಡಿ, ಜಗದೀಶ್ ಪುಣಚ ಹಾಗೂ ಜಯಂತಿ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟ ಸದಸ್ಯರು, ಪದಾಧಿಕಾರಿಗಳು, ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸದಸ್ಯರು, ಶೌರ್ಯ ವಿಪತ್ತು ಘಟಕ ಸದಸ್ಯರು, ಸ್ಥಳೀಯ ಸೇವಾಪ್ರತಿನಿಧಿಗಳು, ಯೋಜನೆಯ ಹಿತೈಷಿಗಳಾದ ಊರಿನವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *