ಉಜಿರೆ: ಎಲ್ಲರೊಂದಿಗೆ ಬೆರೆತುಕೊಂಡು , ತಮ್ಮತನವನ್ನು ಬಿಡದೆ , ನಮ್ಮ ಕಾಲ ಮೇಲೆ ನಿಂತುಕೊಳ್ಳಬೇಕು. ಹಾಗೆಯೇ ಸಿಗುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಅಂಕಿತಾ ಆರ್ ತೆಲ್ಲಕಾಲು ಹೇಳಿದರು.

ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಆಯೋಜಿಸಿದ ಹಿರಿಯ ವಿದ್ಯಾರ್ಥಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಬಿ.ವೊಕ್ ಪಠ್ಯಕ್ರಮ ಹಾಗೂ ಅನೇಕ ಮೂಲವಿಜ್ಞಾನದ ಪಠ್ಯಕ್ರಮಗಳ ಬಗ್ಗೆ ಸಂವಹನ ನಡೆಸಿದರು.
ಯಶಸ್ ಪಿ ಕಾಕತ್ಕರ್ ಸ್ವಾಗತಿಸಿ , ಪ್ರಸನ್ನಾ ವಂದಿಸಿದರು. ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇದರ ಪ್ರಧಾನ ಸಂಯೋಜಕಿ ಅಂಜನಾ ನಿರೂಪಿಸಿದರು.
ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಉಪಸ್ಥಿತರಿದ್ದರು.



