ಮಂಗಳೂರು:(ಜು.20) ಮುಲ್ಲೈ ಮುಹಿಲನ್ ಅವರು ದಕ್ಷಿಣ ಕನ್ನಡದ ಡಿಸಿ ಆಗಿರೋದು ಈಗಿನ ಮಕ್ಕಳಿಗಂತೂ ಬಹಳ ಖುಷಿ. ಮುಹಿಲನ್ ಅಂದ್ರೆ ಮಕ್ಕಳಿಗೆ ಪಂಚಪ್ರಾಣ. ಮಳೆ ಬಂದರೆ ಸಾಕು ಶಾಲೆಗೆ ಮರುದಿವಸ ರಜೆ ಸಿಗುತ್ತೇ ಎಂದು ಮಕ್ಕಳಿಗೆ ಖುಷಿಯೋ ಖುಷಿ.
ಇದನ್ನೂ ಓದಿ: https://uplustv.com/2024/07/20/mangaluru-video-shooting-ಸ್ನಾನ-ಮಾಡುತ್ತಿದ್ದ-ಯುವತಿಯ-ವೀಡಿಯೋ
ರಜೆಯ ಬಗ್ಗೆ ಏನೂ ಮಾಹಿತಿ ಬರದಿದ್ದರೆ , ಡೈರೆಕ್ಟ್ ಆಗಿ, ಯಾವುದೇ ಅಂಜಿಕೆ ಇಲ್ಲದೇ ತಮ್ಮ ಫೇವರೆಟ್ ಆದ ಡಿಸಿ ಅವರಿಗೆ ಕರೆ ಮಾಡಿ ನಾಳೆ ರಜೆ ಉಂಟಾ ಸರ್ ಅಂತಾ ಮಕ್ಕಳು ಕೇಳ್ತಾರೆ ಎಂದು ಸ್ವತಃ ಡಿಸಿ ಯವರೇ ಒಮ್ಮೆ ಹೇಳಿದ್ದರು.
ಒಮ್ಮೆ ಒಬ್ಬ ವಿದ್ಯಾರ್ಥಿ ಡಿಸಿ ಅವರಿಗೆ ಕರೆ ಮಾಡಿ , ಮೊದಲು ಸರ್ ಹೇಗಿದ್ದೀರಿ ಅಂತ ಕೇಳಿ, ನಂತರ ಸ್ವಲ್ಪ ಇಂಗ್ಲೀಷ್ ನಲ್ಲಿಯೇ ಮಾತಾಡಿ, ಸರ್ ನಾಳೆ ರಜೆ ಉಂಟಾ ಸರ್ ಎಂದು ಕೇಳಿದ್ದುಂಟು ಎಂದು ಡಿಸಿ ಹೇಳಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ಒಂದು ಪುಟ್ಟ ಹುಡುಗಿ ತನ್ನ ತೊದಲು ನುಡಿಯಲ್ಲಿ ತನ್ನ ಮಾವನಿಗೆ ಕರೆ ಮಾಡಿ ,
ನಾಳೆ ಸ್ಕೂಲ್ ಗೆ ರಜೆ ಉಂಟಾ ಎಂದು ಕೇಳಿದಾಗ ಮಾವ ನನ್ಗೆ ಗೊತ್ತಿಲ್ಲ, ಡಿಸಿ ಯವರಿಗೆ ಕರೆ ಮಾಡಿ ಕೇಳು ಎಂದಾಗ , ಡಿಸಿ ಯ ನಂಬರ್ ಇದ್ಯಾ , ಇದ್ರೆ ಕಳ್ಸಿ, ಮಾತಾಡ್ತೇನೆ ಎಂದು ಆ ಪುಟ್ಟ ಹುಡುಗಿ ಹೇಳಿದಳು. ಆಗ ಮಾವ ಕಳಿಸ್ತೇನೆ , ಡಿಸಿ ಹೆಸ್ರು, ಮುಲ್ಲೈ ಮುಹಿಲನ್ ಅಂತ ಹೇಳಿದ್ರು. ಅವಾಗ ಅವರ ಮಾವ ಡಿಸಿ ಹೆಸರು ಏನು ಎಂದು ಕೇಳಿದಾಗ ಆ ಪುಟ್ಟ ಹುಡುಗಿ ಮಲ್ಲೈ ಮುಗಿಲನ್ ಎಂದು ತೊದಲು ನುಡಿಯಲ್ಲಿ ಹೇಳಿದ್ದಳು. ಆ ಮಗುವಿನ ತೊದಲು ನುಡಿಯ ಆಡಿಯೋ ವೈರಲ್ ಆಗಿತ್ತು.
ಹೀಗೆ ಡಿಸಿ ಅವರು ಪಾಣೆಮಂಗಳೂರು ಆಲಡ್ಕ ನೆರೆ ವೀಕ್ಷಣೆಗೆ ಬಂದಾಗ ಮಳೆಯಲ್ಲಿ ಆಟ ಆಡುತ್ತಿರುವ ಮಕ್ಕಳನ್ನು ನೋಡಿದರು. ಮಳೆಯಲ್ಲಿ ನೆನೆದು ರಜೆಯ ಮಜಾ ಮಾಡುತ್ತಿರುವ ಮಕ್ಕಳೊಂದಿಗೆ ಡಿಸಿ ಸಂಭಾಷಣೆ ನಡೆಸಿದರು. ಮಕ್ಕಳೊಂದಿಗೆ ಮಾತನಾಡುತ್ತಾ, ಹೀಗೆ ಮಳೆಯಲ್ಲಿ ಆಟ ಆಡಿಕೊಂಡು, ಓಡಾಡ್ತಿದ್ರೆ, ನಾನು ರಜೆ ಕೊಡಲ್ಲ ಅಂತ ಮುಹಿಲನ್ ಅವರು ಹೇಳಿದಾಗ, ಮಕ್ಕಳು ಸ್ವಲ್ಪ ಯೋಚನೆ ಮಾಡಿ ,ನಾಳೆ ಮತ್ತೆ ರಜೆ ಕೊಡ್ತೀರಾ ಸರ್ ಎಂದು ಆ ಪೋಕ್ರಿ ಮಕ್ಕಳು ಕೇಳಿದಾಗ ಡಿಸಿ ನಗು ಬೀರುತ್ತಾ ಅಲ್ಲಿಂದ ತೆರಳಿದರು.