ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಗ್ರಾಮದಲ್ಲಿ ಹಾದು ಹೋಗುವ ಕೊಕ್ರಾಡಿಯಿಂದ ಶಿರ್ತಾಡಿ ಸಂಪರ್ಕಿಸುವ ರಸ್ತೆಯ ಮೂರು ಮಾರ್ಗ ರಿಕ್ಷಾ ನಿಲ್ದಾಣದ ಬಳಿ ಇತ್ತೀಚೆಗೆ ನಿರಂತರವಾಗಿ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು



ದನ್ನು ಮನಗಂಡ ಕ್ಯಾಪ್ಸಿ ಫ್ರೆಂಡ್ಸ್ ಕಾಶಿಪಟ್ಣ ತಂಡವು, ದಿ ಕ್ಯಾಪ್ಸಿ ಕ್ಯಾಟರರ್ಸ್ ಸಂಸ್ಥೆಯ ಮಾಲಕರಾದ ಅನಿಲ್ ಅಂಚನ್ ರವರ ಸಹಕಾರದೊಂದಿಗೆ ಬ್ಯಾರಿಕೇಡ್ ಅಳವಡಿಸುವ ಕಾರ್ಯಕ್ಕೆ ಮುಂದಾಗಿದ್ದು, ಅದರಂತೆ ಇಂದು ಪಂಚಾಯತ್ ಅಧ್ಯಕ್ಷರಾದ ಸತೀಶ್. ಕೆ ರವರ ದಿವ್ಯ ಹಸ್ತದಲ್ಲಿ ಉದ್ಘಾಟನೆ ನಡೆಸುವ ಮೂಲಕ ಲೋಕಾರ್ಪಣೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಪೆರಾಡಿ ಸೊಸೈಟಿಯ ನಿರ್ದೇಶಕರಾದ ಪ್ರವೀಣ್ ಪಿಂಟೋ, ಗರಡಿ ಪ್ರೆಂಡ್ಸ್ ಇದರ ಅಧ್ಯಕ್ಷರಾದ ಜಿತೇಶ್ ಸಾಲ್ಯಾನ್, ರಿಕ್ಷಾ ಮಾಲಕರ ಉಪಾಧ್ಯಕ್ಷರಾದ ಸುಂದರ ಪೂಜಾರಿ, ಯುವ ಉದ್ಯಮಿ ಶೈಲೇಶ್ ಕೋಟ್ಯಾನ್, ಕ್ಯಾಪ್ಸಿ ಕ್ಯಾಟರರ್ಸ್ ಮಾಲಕರಾದ ಅನಿಲ್ ಅಂಚನ್, ಕ್ಯಾಪ್ಸಿ ಫ್ರೆಂಡ್ಸ್ ತಂಡದ ಅಧ್ಯಕ್ಷರಾದ ಸಂದೀಪ್ ಕೋಟ್ಯಾನ್ ಹಾಗೂ ಸೇವಾಪ್ರತಿನಿಧಿಯಾದ ಶ್ರೀಮತಿ ಶಶಿಕಲಾ ಉಪಸ್ಥಿತರಿದ್ದರು.




