ಉಜಿರೆ: ಬೆಳ್ತಂಗಡಿ ತಾಲೂಕಿನ ಜನಮಾನಸದಲ್ಲಿ ನೆಲೆಯಾಗಿರುವ ಅತ್ಯಂತ ಪ್ರಸಿದ್ಧ ಶಿಕ್ಷಣ ಸಂಸ್ಥೆ ಅದುವೇ ಅನುಗ್ರಹ ಶಿಕ್ಷಣ ಸಂಸ್ಥೆ. ದೇವರ ಅನುಗ್ರಹದಂತೆ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಧಾರೆ ಎರೆದ, ಅವರನ್ನು ಸಮಾಜದ ಉತ್ತಮ ವ್ಯಕ್ತಿಯಾಗಿ ಸಾಧಕನನ್ನಾಗಿ ಬದಲಿಸುತ್ತಿರುವ ಏಕೈಕ ಶಿಕ್ಷಣ ಸಂಸ್ಥೆ ಮತ್ತು ತಾಲೂಕಿನ ಪ್ರಪ್ರಥಮ ಆಂಗ್ಲ ಮಾಧ್ಯಮ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಒಬ್ಬ ವ್ಯಕ್ತಿಯ ಜೀವನದಲ್ಲಿ ಕಳೆದ ವರ್ಷಗಳು ಜ್ಞಾನ ಮತ್ತು ಅನುಭವವನ್ನು ಸೇರಿಸುತ್ತವೆ ಅದೇ ರೀತಿ ಒಂದು ಸಂಸ್ಥೆಯಲ್ಲಿ ಕಳೆದಂತಹ ವರ್ಷಗಳು ಅದಕ್ಕೆ ಬೆಳವಣಿಗೆ ಮತ್ತು ಘನತೆಯನ್ನು ಸೇರಿಸಿಸುತ್ತದೆ ಕಳೆದ 46 ವರ್ಷಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಈ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ನಿರೂಪಿಸಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿಗಳು ಒಂದುಗೂಡುವುದಕ್ಕಾಗಿ “ಅನುಗ್ರಹ ಸಮಾಗಮ” ಸಮಾರಂಭವನ್ನು19-10-2025 ಆದಿತ್ಯವಾರದಂದು ಪೂರ್ವಾಹ್ನ 9.30 ಗೆ ಸರಿಯಾಗಿ ಅನುಗ್ರಹ ಸಭಾಂಗಣದಲ್ಲಿ ಆಯೋಜಿಸಿದ್ದೇವೆ. ಈ ಕಾರ್ಯಕ್ರಮದ ಪ್ರಯುಕ್ತ ಹಿರಿಯ ವಿದ್ಯಾರ್ಥಿಗಳಿಗೆ ಲಕ್ಕಿ ಗೇಮ್ಸ್ ಸ್ಪರ್ಧೆಯನ್ನು ನಡೆಸುತ್ತಿದ್ದು ಆನಂತರ ಸಭಾ ಕಾರ್ಯಕ್ರಮ,ಮನೋರಂಜನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತೇವೆ.

ಇದೇ ಸಂದರ್ಭದಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಕೂಡ ನಡೆಯಲಿದೆ. ಬಳಿಕ ಊಟೋಪಚಾರದ ವ್ಯವಸ್ಥೆಯನ್ನು ಕೂಡ ಮಾಡಲಾಗಿದ್ದು ತಮ್ಮ ಹಳೆಯ ನೆನಪುಗಳನ್ನು ಮರುಕಳಿಸಲು ಪರಸ್ಪರ ಭೇಟಿ ಮಾಡಿ ಹೃದಯಂಗಮವಾಗಿ ಮಾತನಾಡಲು ಈ ಸಮಾಗಮವು ಒಂದು ಸುವರ್ಣಾವಕಾಶ.
ನಿಮ್ಮ ಹಾಜರಾತಿಯು ನಮ್ಮ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡುತ್ತದೆ. ಆದ್ದರಿಂದ ಅನುಗ್ರಹ ವಿದ್ಯಾ ಸಂಸ್ಥೆಯ ಎಲ್ಲಾ ಹಿರಿಯ ವಿಧ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಹಾಜರಾಗಬೇಕೆಂದು ಪ್ರಾಂಶುಪಾಲರು ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


