Tue. Sep 16th, 2025

ಮೂಡಬಿದ್ರೆ : ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಡೆದ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಉಜಿರೆಯ ಶ್ರೀ ಧ.ಮಂ. ಪ.ಪೂ.ಕಾಲೇಜಿನ ಉಪನ್ಯಾಸಕಿಯರ ತಂಡ ಸತತ ಮೂರನೇ ಬಾರಿಗೆ ಪ್ರಥಮ ಸ್ಥಾನ

ಮೂಡಬಿದ್ರೆ : ದ.ಕ. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ(ರಿ), ದ.ಕ. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಅನುದಾನಿತ ನೌಕರರ ಸಂಘ(ರಿ), ವಿವಿಧ ವಿಷಯವಾರು ಉಪನ್ಯಾಸಕರ ಸಂಘ, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ಹಾಗೂ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು, ಕಲ್ಲಬೆಟ್ಟು,

ಮೂಡಬಿದ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಸೆಪ್ಟೆಂಬರ್ 14 ರಂದು ಕಲ್ಲಬೆಟ್ಟು, ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ರಾಜ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಡೆದ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಉಜಿರೆಯ ಶ್ರೀ ಧ ಮಂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿಯರ ತಂಡ ಸತತ ಮೂರನೇ ಬಾರಿಗೆ ಪ್ರಥಮ ಸ್ಥಾನ ಪಡೆದಿದೆ.

ತಂಡದಲ್ಲಿ ಉಪನ್ಯಾಸಕಿಯರಾದ ಸ್ಮಿತಾ, ವೈದೇಹಿ, ಸುಪ್ರೀತಾ, ಪದ್ಮಶ್ರೀ, ಅಂಕಿತ, ಪ್ರಜ್ಞಾ, ಸ್ವಪ್ನಾ, ಅರ್ಚನಾ, ಶ್ರಾವ್ಯ, ಪ್ರತೀಕ್ಷಾ, ಅಕ್ಷತಾ, ಹಾಗೂ ಅಮೃತ ಭಾಗವಹಿಸಿದ್ದರು.

ಇವರಿಗೆ ಪ್ರಮೋದ್ ಡ್ಯಾನ್ಸ್ ಸ್ಟುಡಿಯೋ ಮಂಗಳೂರು, ಇದರ ಸಂಸ್ಥಾಪಕ ಹೆಸರಾಂತ ಕಲಾವಿದ ಪ್ರಮೋದ್ ಆಳ್ವ ನೃತ್ಯ ಸಂಯೋಜನೆ ಮಾಡಿರುತ್ತಾರೆ.

ತಂಡದ ಸಾಧನೆಗೆ ಸೋನಿಯಾ ವರ್ಮ, ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ, ಉಪ ಪ್ರಾಚಾರ್ಯ ಡಾ. ರಾಜೇಶ್ ಬಿ, ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *