(ಸೆ.17) ಬೆಳ್ತಂಗಡಿ ರೋಟರಿ ಸಂಸ್ಥೆ, ಕಳೆದ ಹಲವು ವರ್ಷಗಳಲ್ಲಿ ತಾಲೂಕಿನಾದ್ಯಂತ ಸಮುದಾಯದ ಅಗತ್ಯಗಳಿಗೆ ಸ್ಪಂದಿಸುವ ಹಾಗೂ ಜನಪರ ಕೆಲಸ ಮಾಡುವ ಮೂಲಕ ಮಾದರಿ ಸಂಸ್ಥೆಯಾಗಿ ಬೆಳೆದಿರುವುದು ಹೆಮ್ಮೆಯ ಸಂಗತಿ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ವೀರೇಂದ್ರ ಹೆಗ್ಗಡೆಯವರು ಗೌರವ ಸದಸ್ಯರಾಗಿರುವ ನಮ್ಮ ಈ ಸಂಸ್ಥೆಯ, 55ನೇ ವರ್ಷದ ಅಧ್ಯಕ್ಷರಾಗಿ ಪ್ರೊ. ಪ್ರಕಾಶ ಪ್ರಭು, ಕಾರ್ಯದರ್ಶಿಯಾಗಿ ಡಾ. ಎಮ್ ಎಮ್ ದಯಾಕರ್, ಇಂಟರಾಕ್ಷ, ರೋಟರಾಕ್ಷ, ಆರ್ ಸಿ ಸಿ ಇದರ ಚೆಯರ್ ಮ್ಯಾನ್ ಆಗಿ ನಾರಾಯಣ ಭಿಡೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ROTARY COMMUNITY CORPS (RCC) ಅಥವಾ ರೋಟರಿ ಸಮುದಾಯ ದಳ ಇದು ರೋಟರಿ ಕ್ಲಬ್ ನ ಅಂಗಸಂಸ್ಥೆಯಾಗಿದ್ದು, ಸದಸ್ಯರಾಗಿರುವುದಿಲ್ಲ. ಕನಿಷ್ಠ 10 ಜನ ಸದಸ್ಯರಿರುವ ಈ ಸಂಸ್ಥೆ, ಹಳ್ಳಿಗಳ ಸ್ಥಳೀಯ ಇದರ ಸದಸ್ಯರು ರೋಟರಿ ಅವಶ್ಯಕತೆಗಳನ್ನು ಅರಿತುಕೊಂಡು, ಅಲ್ಲಿ, ಮಾತೃ ರೋಟರಿ ಸಂಸ್ಥೆಯ ನೆರವಿನಿಂದ ಸೇವಾ ಚಟುವಟಿಕೆಯನ್ನು ಹಮ್ಮಿಕೊಳ್ಳುವುದು ಇದರ ಮುಖ್ಯ ಉದ್ದೇಶ. ಅಲ್ಲಿನ ಅನಕ್ಷರತೆ, ಹಸಿವು, ಮತ್ತು ಕುಡಿಯುವ ನೀರಿನ ಕೊರತೆ ನೀಗಿಸುವುದು ಮುಂತಾದ ಕಾರ್ಯ ಚಟುವಟಿಕೆಗಳನ್ನು ಮಾಡುವುದರ ಮೂಲಕ ರೋಟರಿ ಕ್ಲಬ್ ನ ಮೂಲ ಉದ್ದೇಶವನ್ನು ಸಫಲಗೊಳಿಸಲು ಸಹಕರಿಸುವುದು ಇದರ ಮುಖ್ಯ ಉದ್ದೇಶ.
ಇದಕ್ಕಾಗಿ ಬೆಳ್ತಂಗಡಿ ರೋಟರಿ ಕ್ಲಬ್, ಪ್ರತಿ ಆರ್.ಸಿ.ಸಿ ತಂಡಕ್ಕೆ, ಕೆಲವು ನಿಯಮಗಳನ್ನು ಒಡ್ಡಿ, 20,000/- ರೂಪಾಯಿಗಳ ಧನಸಹಾಯ ಮಾಡುತ್ತದೆ. ಪ್ರತಿ ಆರ್.ಸಿ.ಸಿ ತಂಡ ಸುಮಾರು ಅಷ್ಟೇ ಮೊತ್ತದ ಹಣವನ್ನು ವ್ಯಯಿಸಬೇಕಾಗುತ್ತದೆ ಮತ್ತು ಕನಿಷ್ಠ 20 ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಬೇಕಾಗುತ್ತದೆ. ಅತೀ ಉತ್ತಮ ಕಾರ್ಯ ನಿರ್ವಹಿಸಿದ ಒಂದು ತಂಡವನ್ನು ನಮ್ಮ ಜಿಲ್ಲಾ ಗವರ್ನರ್ ಭೇಟಿ ಸಂದರ್ಭದಲ್ಲಿ ಗುರುತಿಸಲಾಗುವುದು.

ಬೆಳ್ತಂಗಡಿ ರೋಟರಿ ಸಂಸ್ಥೆಯಡಿಯಲ್ಲಿ ಆರ್.ಸಿ.ಸಿ. ಮುಂಡಾಜೆ, ಆರ್.ಸಿ.ಸಿ. ಕಕ್ಕಿಂಜೆಯ ಆರ್.ಸಿ.ಸಿ ಕಲ್ಮಂಜ ಮತ್ತು ಆರ್.ಸಿ.ಸಿ. ನೆರಿಯ ಹೀಗೆ ನಾಲ್ಕು ಆರ್.ಸಿ.ಸಿ ಗಳು ಇದ್ದು, ಕಳೆದ ವರ್ಷ ಅನಿವಾರ್ಯ ಕಾರಣಗಳಿಂದ, ಯಾವುದೇ ಆರ್.ಸಿ.ಸಿ ಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿಲ್ಲ. ಆದರೆ ಈ ಬಾರಿ, ಈ ನಾಲ್ಕು ಭಾಗದ ಸೇವಾ ಮನೋಭಾವದ ಜನರು ಆಸಕ್ತಿ ತೋರಿದ್ದರಿಂದ ಈ ಸಮುದಾಯ ದಳಗಳ ಪದಗ್ರಹಣ ಕಾರ್ಯಕ್ರಮವನ್ನು ತಾ.20-09-2025 ರಂದು ಸಂಜೆ ೪ ಗಂಟೆಗೆ ಮುಂಡಾಜೆಯ ಪರಶುರಾಮ ದೇವಸ್ಥಾನದ ಆವರಣದಲ್ಲಿ ಹಮ್ಮಿ ಕೊಂಡಿದ್ದೇವೆ. ಪದಗ್ರಹಣ ಕಾರ್ಯಕ್ರಮವನ್ನು, ಬೆಳ್ತಂಗಡಿ ರೋಟರಿ ಕ್ಲಬ್ ನ ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ರೋ. ಡಾ. ಎ. ಜೆ. ಶೆಟ್ಟಿ ಯವರು ನೆರವೇರಿಸುತ್ತಾರೆ.
ಮುಂಡಾಜೆ ಆರ್.ಸಿ.ಸಿ.ತಂಡದ ಅಧ್ಯಕ್ಷರಾಗಿ ಶ್ರೀ ಪಿ. ಸಿ ಸೆಬೆಸ್ಬಿಯನ್, ಕಾರ್ಯದರ್ಶಿ ಯಾಗಿ ಶ್ರೀ ರಾಕೇಶ್ ಮತ್ತು ಕೋಶಾಧಿಕಾರಿಯಾಗಿ ಶ್ರೀ ರಂಗನಾಥ ಹೆಬ್ಬಾರ್ ರವರು ಅಧಿಕಾರ ಸ್ವೀಕರಿಸಲಿದ್ದಾರೆ. ಅದೇ ರೀತಿ ಆರ್.ಸಿ.ಸಿ. ಕಕ್ಕಿಂಜೆ ಇದರ ಅಧ್ಯಕ್ಷರಾಗಿ ಶ್ರೀಮತಿ ಶಾರದ ಎ, ಕಾರ್ಯದರ್ಶಿಯಾಗಿ ಶ್ರೀ ಗೋಪಾಲಕೃಷ್ಣ ಗೌಡ, ಕೋಶಾಧಿಕಾರಿಯಾಗಿ ಶ್ರೀ ಪ್ರಾನ್ಸಿಸ್ ವಿ.ಪಿ, ಆರ್.ಸಿ.ಸಿ ಕಲ್ಮಂಜ ಇದರ ಅಧ್ಯಕ್ಷರಾಗಿ ಶ್ರೀ ನಾಗೇಶ್ ಕಲ್ಮಂಜ, ಕಾರ್ಯದರ್ಶಿಯಾಗಿ ಶ್ರೀ ದಿನೇಶ್ ಗೌಡ ಬನದ ಬೈಲು, ಕೋಶಾಧಿಕಾರಿಯಾಗಿ ಶ್ರೀ ಡಿ.ಜಯಂತ್ ರಾವ್ ಕಲ್ಮಂಜ, ಆರ್.ಸಿ.ಸಿ ನೆರಿಯ ಇದರ ಅಧ್ಯಕ್ಷರಾಗಿ ಶ್ರೀ.ಪಿ.ಕೆ.ರಾಜನ್, ಕಾರ್ಯದರ್ಶಿಯಾಗಿ ಬಿ.ಎಮ್.ಶರೀಫ್ ಕೋಶಾಧಿಕಾರಿಯಗಿ ಎಮ್. ಬಾಲಕೃಷ್ಣ ಗೌಡ ಇವರು ಅಧಿಕಾರ ಸ್ವೀಕರಿಸಲಿದ್ದಾರೆ.

ಆರ್.ಸಿ.ಸಿ. ಸೇವಾ ಕಾರ್ಯಗಳು:- “ನಮ್ಮ ಊರು ನಮ್ಮ ಹೆಮ್ಮೆ” ಎಂಬ ಘೋಷಣೆಯೊಂದಿಗೆ ಮುಂಡಾಜೆ ಮತ್ತು ಕಕ್ಕಿಂಜೆ ಪರಿಸರದ ಸ್ವಚ್ಛತಾ ಕಾರ್ಯಕ್ರಮ, ಅಂಗನವಾಡಿಗಳಿಗೆ ಸಹಾಯ ಹಸ್ತ, ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಆರೋಗ್ಯ ಜಾಗೃತಿ ಶಿಬಿರ, ಮಹಿಳಾ ಸಬಲೀಕರಣ ಕಾರ್ಯಕ್ರಮಗಳು, ಹೀಗೆ ವಿವಿಧ ಆಯಾಮಗಳಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ಹಾಕಿಕೊಂಡಿದ್ದಾರೆ. ಈ ವರ್ಷದ ರೋಟರಿ ಸಂದೇಶ “ಒಳಿತಾಗಿ ಒಟ್ಟು ಸೇರೋಣ” (Unite for good) ಇದಕ್ಕನುಗುಣವಾಗಿ, ಬೆಳ್ತಂಗಡಿ ರೋಟರಿ ಸಂಸ್ಥೆಯೊಂದಿಗೆ ಆರ್.ಸಿ.ಸಿ. ಮುಂಡಾಜೆ ಮತ್ತು ಆರ್.ಸಿ.ಸಿ. ಕಕ್ಕಿಂಜೆ ಕೈ ಜೋಡಿಸುವುದರ ಮೂಲಕ ಸಮಾಜಕ್ಕೆ ಕೈಲಾದಷ್ಟು ಸೇವೆ ಮಾಡುವ ಉದ್ದೇಶ ಹೊಂದಿದ್ದಾರೆ.

ಆ ಪ್ರಯುಕ್ತ ತಾ 20-09-2025 ರಂದು ಮುಂಡಾಜೆಯ ಪರಶುರಾಮ ದೇವಸ್ಥಾನದ ಆವರಣದಲ್ಲಿ ಸಂಜೆ 4 ಗಂಟೆಗೆ ನಡೆಯುವ ಪದಗ್ರಹಣ ಕಾರ್ಯಕ್ರಮಕ್ಕೆ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷ ರೊ. ಪ್ರೊ. ಪ್ರಕಾಶ್ ಪ್ರಭು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷ ರೊ. ಪ್ರೊ. ಪ್ರಕಾಶ್ ಪ್ರಭು, ರೊ.ನಾರಾಯಣ ಭಿಡೆ- ಆರ್.ಸಿ.ಸಿ. ಚೆಯರ್ ಮ್ಯಾನ್, ಆರ್.ಸಿ.ಸಿ. ಮುಂಡಾಜೆಯ ಅಧ್ಯಕ್ಷ ಶ್ರೀ ಪಿ.ಸಿ.ಸೆಬಾಸ್ಟಿಯನ್, ಆರ್.ಸಿ.ಸಿ.ಕಕ್ಕಿಂಜೆ ಅಧ್ಯಕ್ಷೆ ಶ್ರೀಮತಿ ಶಾರದ ಎ ಉಪಸ್ಥಿತರಿದ್ದರು.
ಇದನ್ನು ಓದಿ : ಧರ್ಮಸ್ಥಳ: ನೇತ್ರಾವತಿ ನದಿ ಸ್ವಚ್ಛತೆ ಮಾಡುವ ಮೂಲಕ ತಾಲೂಕು ಮಟ್ಟದ ಸ್ವಚ್ಛತಾ ಹೀ ಸೇವಾ
