ಮುಂಡಾಜೆ : ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇದರ ಅಧೀನಕ್ಕೊಳಪಟ್ಟ ಮುಂಡಾಜೆ ಪದವಿ ಪೂರ್ವ ಕಾಲೇಜು ಮುಂಡಾಜೆ ಹಾಗೂ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಮುಂಡಾಜೆ ಇಲ್ಲಿನ ಕಬ್ಸ್- ಬುಲ್ ಬುಲ್, ಸೌಟ್ಸ್- ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್ ವಿಭಾಗಗಳ ಎರಡು ದಿನದ ತರಬೇತಿ ಶಿಬಿರದ ಉದ್ಘಾಟನೆಯು ಜರುಗಿತು.

ಇದನ್ನೂ ಓದಿ: ⭕ಕುಂದಾಪುರ: ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿ ಶವವಾಗಿ ಪತ್ತೆ
ಶಿಬಿರದ ಉದ್ಘಾಟನೆಯನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ಬೆಳ್ತಂಗಡಿ ಇದರ ಕಾರ್ಯದರ್ಶಿಗಳಾದ ಪ್ರಮೀಳಾರವರು ನೆರವೇರಿಸಿ, ಸ್ಕೌಟಿಂಗ್ ಗೈಡಿಂಗ್ ಸಮವಸ್ತ್ರ ಹಾಗೂ ಪರೀಕ್ಷೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಮುಂಡಾಜೆ ಇದರ ಅಧ್ಯಕ್ಷರಾದ ಶ್ರೀ ವಿನಯಚಂದ್ರ ಇವರು ಶಿಬಿರಕ್ಕೆ ಶುಭ ಹಾರೈಸಿದರು.

ಪ. ಪೂ. ಕಾಲೇಜಿನ ಪ್ರಾಂಶುಪಾಲರಾದ ಗೀತಾ, ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಮುಂಡಾಜೆಯ ಮುಖ್ಯಶಿಕ್ಷಕಿ ಚಂದ್ರಮತಿ, ಹಿರಿಯ ಶಿಕ್ಷಕಿ ಶ್ರೀಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ರೇಂಜರ್ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ರೇಂಜರ್ ಶ್ರಾವ್ಯ ನಿರೂಪಿಸಿ, ರೇಂಜರ್ ಮೇಟ್ ಹೊಂಗಿರಣ ಸ್ವಾಗತಿಸಿ, ರೇಂಜರ್ ಜಲಜಾಕ್ಷಿ ಧನ್ಯವಾದಗೈದರು.


