ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಉದ್ದಿಮೆ ಭೇಟಿ, ಅಭಿಯಾನದಡಿಯಲ್ಲಿ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಹಾಗೂ ಉಜಿರೆಯ ಮಂಜುಶ್ರೀ ಪ್ರಿಂಟಸ್೯ಗೆ ಭೇಟಿ ನೀಡಿದರು.

ಇದನ್ನೂ ಓದಿ: 🌸ಧರ್ಮಸ್ಥಳ: ಧರ್ಮಸ್ಥಳದಲ್ಲಿ 27 ನೇ ವರ್ಷದ ಭಜನಾ ಕಮ್ಮಟ ಸಂಪನ್ನ
ಸಿರಿ ಸಂಸ್ಥೆಯ ಮೆನೇಜರ್ ಶ್ರೀ ಜೀವನ್ ಶೆಟ್ಟಿಯವರು ಸಂಸ್ಥೆಯ ಉದ್ದೇಶ ಕಾರ್ಯವೈಖರಿ, ಎಲ್ಲಾ ಉತ್ಪನ್ನಗಳ ತಯಾರಿಕೆಯ ವಿವಿಧ ಹಂತಗಳ ಬಗ್ಗೆ ಹಾಗೂ ಉದ್ಯೋಗಿಗಳಿಗೆ ಸಂಸ್ಥೆಯಿಂದ ದೊರಕುವ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಮಂಜುಶ್ರೀ ಪ್ರಿಂಟಸ್೯ ಮೆನೇಜರ್ ಸಂಸ್ಥೆಯಲ್ಲಿ ಅಳವಡಿಸಲಾಗಿರುವ ತಂತ್ರಜ್ಞಾನ ಹಾಗೂ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊಪೆಸರ್ ಪ್ರಮೋದ್ ಕುಮಾರ್ ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕರು ಹಾಗೂ ವಿವಿಧ ವಿಭಾಗಗಳ ಉಪನ್ಯಾಸಕರು ಸಹಕಾರ ನೀಡಿದರು.



