Tue. Oct 14th, 2025

ಕೊರಿಂಜ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜದಲ್ಲಿ ನವರಾತ್ರಿ ಪ್ರಯುಕ್ತ ಭಜನಾ ಕಾರ್ಯಕ್ರಮ

ಕೊರಿಂಜ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜ ಇಲ್ಲಿಯ ನವರಾತ್ರಿಯ ಭಜನಾ ಕಾರ್ಯಕ್ರಮವನ್ನು ಯು.ತಿಲಕ್ ಇವರು ಉದ್ಘಾಟನೆ ಮಾಡಿದರು.

ಇದನ್ನೂ ಓದಿ: 🔴ಮುಂಡಾಜೆ: ಮುಂಡಾಜೆ ಕಾಲೇಜಿನ ಎನ್ ಎಸ್ ಎಸ್ ಶಿಬಿರ ಉದ್ಘಾಟನೆ

ದೇವಸ್ಥಾನದ ಆಡಳಿತ ಮೋಕ್ತೇಸರರಾದ ಯೋಗೀಶ್ ಪೂಜಾರಿ ಕಡ್ತಿಲ ಸ್ವಾಗತಿಸಿದರು. ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಪದ್ಮನಾಭ ಶಿಲ್ಪಿ, ಕಣಿಯೂರು ವಲಯದ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಪ್ರಪುಲ್ಲ ಚಂದ್ರ ಅಡ್ಯಂತಾಯ, ಕುಣಿತ ಭಜನಾ ತರಬೇತಿಯ ಗುರುಗಳಾದ ನಾಗೇಶ ನೆರಿಯ, ವಕೀಲರಾದ ಮನೋಹರ್ ಕುಮಾರ್ ಇಳಂತಿಲ ಉಪಸ್ಥಿತರಿದ್ದರು.

ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷರಾದ ಸೀತಾರಾಮ ಆಳ್ವ ಕೊರಿಂಜ ಕಾರ್ಯಕ್ರಮ ನಿರೂಪಿಸಿ ರಂಜಿತ್ ಧರ್ಮಾಡಿ ಧನ್ಯವಾದ ಮಾಡಿದರು. ಈ ಸಂದರ್ಭದಲ್ಲಿ ಕೊರಿಂಜ ಶ್ರೀ ಪಂಚಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಹಾಗೂ ಪಂಚಲಿಂಗೇಶ್ವರ ಚಿಣ್ಣರ ಬಳಗದವರಿಂದ ಭಜನಾ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *