Tue. Oct 14th, 2025

ನಾಳ ಕ್ಷೇತ್ರದಲ್ಲಿ ನವರಾತ್ರಿ ತಾಳಮದ್ದಳೆ

(ಸೆ.26) ಶ್ರೀ ಕಾಳಿಕಾಂಬಾ ಯಕ್ಷ ಕಲಾ ಟ್ರಸ್ಟ್. (ರಿ)ಉಪ್ಪಿನಂಗಡಿ ಸುವರ್ಣಮಹೋತ್ಸವದ ಪ್ರಯುಕ್ತ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಮಹಾಭಾರತ ಸರಣಿಯಲ್ಲಿ 99 ನೇ ಕಾರ್ಯಕ್ರಮವಾಗಿ ಘೋರ ಭೀಷಣ ಕಾಳಗ ತಾಳಮದ್ದಳೆ ಜರಗಿತು.

ಭಾಗವತರಾಗಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಪ್ರಕಾಶ ಅಭ್ಯಂಕರ್ ಬೆಳ್ತಂಗಡಿ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಶ್ರೀ ಅರ್ಜುನ ಅಭ್ಯಂಕರ್ ಬೆಳ್ತಂಗಡಿ, ಅರ್ಥದಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ (ಅರ್ಜುನ), ಪಾತಾಳ ಅಂಬಾ ಪ್ರಸಾದ್ (ಮೇದೋಹೋತ), ಸತೀಶ ಶಿರ್ಲಾಲು (ಘೋರಭೀಷಣ), ಶ್ರುತಿ ವಿಸ್ಮಿತ್ (ಯೋಜನಸ್ತನಿ), ಗೀತಾ ಕುದ್ದಣ್ಣಾಯ, ಕರಾಯ (ಹನುಮಂತ) ಭಾಗವಹಿಸಿದರು .

ದೇವಳದ ಪ್ರಧಾನ ಅರ್ಚಕರಾದ ರಾಘವೇಂದ್ರ ಆಸ್ರಣ್ಣ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ರಾಘವ ಯಚ್ ಗೇರುಕಟ್ಟೆ, ಕಲಾವಿದ ಸಂಜೀವ ಪಾರೆಂಕಿ, ಭಾಗವತ ದಿನಕರ ಕಾವಲಕಟ್ಟೆ ಕಲಾವಿದರನ್ನು ಗೌರವಿಸಿದರು. ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟಿನ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ವಂದಿಸಿದರು.

Leave a Reply

Your email address will not be published. Required fields are marked *