ಪುತ್ತೂರು: ಶ್ರೀಕೃಷ್ಣ- ಪೂಜಾ ಕೇಸಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಡಿಎನ್ ಎ ಪರೀಕ್ಷೆಯಲ್ಲಿ ಮಗು ಶ್ರೀಕೃಷ್ಣನದ್ದೇ ಎಂದು ಸಾಬೀತಾಗಿದೆ. ಈ ಮೂಲಕ ನೊಂದ ಯುವತಿ ಪೂಜಾ ನಿರಂತರ ಹೋರಾಟಕ್ಕೆ ಜಯ ಸಿಕ್ಕಿದೆ.

ಪೂಜಾ ಶ್ರೀಕೃಷ್ಣನದ್ದೇ ಮಗು ಎಂದು ಹೇಳುತ್ತಲೇ ಬಂದರೂ ಶ್ರೀಕೃಷ್ಣನ ಕುಟುಂಬಸ್ಥರು ಇದನ್ನು ನಿರಾಕರಿಸಿದ್ದರು. ಅಲ್ಲದೇ ಡಿಎನ್‌ಎ ಪರೀಕ್ಷೆಗೆ ಆಗ್ರಹಿಸಿದ್ದರು. ಅದರಂತೆ ಒಂದು ತಿಂಗಳ ಹಿಂದೆ ಡಿಎನ್ ಎ ಪರೀಕ್ಷೆ ನಡೆಸಲಾಗಿತ್ತು.
ಇದೀಗ ಅದರ ವರದಿ ಬಂದಿದ್ದು ಮಗು ಆತನದ್ದೇ ಎಂದು ಸಾಬೀತಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಶ್ರೀಕೃಷ್ಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.



