Tue. Oct 14th, 2025

ಕಲ್ಮಂಜ : ಸಿದ್ದಬೈಲು ಪರಾರಿ ಅಂಗನವಾಡಿಯಲ್ಲಿ ಮಹಿಳಾ‌ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರೋಟರಿ ಸಮುದಾಯ ದಳ ಕಲ್ಮಂಜ ಜಂಟಿಯಾಗಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ

ಕಲ್ಮಂಜ : ಸಿದ್ದಬೈಲು ಪರಾರಿ ಅಂಗನವಾಡಿಯಲ್ಲಿ ಅಕ್ಟೋಬರ್ 3 ರಂದು ಮಹಿಳಾ‌ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರೋಟರಿ ಸಮುದಾಯ ದಳ ಕಲ್ಮಂಜ ಜಂಟಿಯಾಗಿ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.

ಇದನ್ನೂ ಓದಿ: ⭕ಕಾರ್ಕಳ: ಪ್ರೀತಿಸಿದ ಯುವಕನೊಂದಿಗೆ ಮನೆ ಬಿಟ್ಟು ಹೋಗ್ತೇನೆ ಎಂದ ಮಗಳು


ಅರೋಗ್ಯ ಶಿಕ್ಷಣಾಧಿಕಾರಿಯಾದ ಅಮ್ಮಿ ಮೇಡಂ ಇವರು ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು.


ವಿಮುಕ್ತಿ ಸಂಸ್ಥೆಯ ಮೇಲ್ವಿಚಾರಕಿಯಾದ ಶ್ರೀಮತಿ ರೋಹಿನಿ ಇವರು ಪೌಷ್ಟಿಕ ಆಹಾರದ ಉಪಯೋಗಗಳು ಹಾಗೂ ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷರಾದ ಪ್ರಕಾಶ್ ಪ್ರಭು ರವರು ಯಾವ ರೀತಿಯ ಪೌಷ್ಟಿಕ ಆಹಾರ ಸೇವಿಸಬಹುದು ಎಂಬುದರ ಮಾಹಿತಿ ನೀಡಿದರು, ಕಾರ್ಯಕ್ರಮದಲ್ಲಿ ಉತ್ತಮ ಆಹಾರ ತಯಾರಿಸಿದ ತಾಯಂದಿರಿಗೆ ಬಹುಮಾನ ವಿತರಿಸಲಾಯಿತು.


ಈ ಕಾರ್ಯಕ್ರಮದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಮೇಡಂ, ಬಾಲ‌ ವಿಕಾಸ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸವಿತಾ,ವಿಮುಕ್ತಿ ಸಂಸ್ಥೆಯ ‌ಮೇಲ್ವಿಚಾರಕಿ ರೋಹಿಣಿ, ಬೆಳ್ತಂಗಡಿ ರೋಟರಿ ಕ್ಲಬ್ ನ‌ ಅಧ್ಯಕ್ಷರಾದ ಪ್ರಕಾಶ್ ಪ್ರಭು, ಕಲ್ಮಂಜ ರೋಟರಿ ಸಮುದಾಯ ದಳದ ಕೋಶಾಧಿಕಾರಿ ಡಿ ಜಯಂತ್ ರಾವ್ ಕಲ್ಮಂಜ,ಸದಸ್ಯರಾದ ರಾಘವ್ ಕಲ್ಮಂಜ, ಸತೀಶ್ ಭಟ್ ತಂಟ್ಯ, ಸುಂದರ ಆಚಾರ್ಯ, ಪಂಚಾಯತ್ ಸದಸ್ಯರಾದ ಶ್ರೀಮತಿ ಶೋಭಾ, SDMC ಅಧ್ಯಕ್ಷರಾದ ದಿನೇಶ್ ಗೌಡ , ಆಶಾ ಕಾರ್ಯಕರ್ತೆ, ಮಕ್ಕಳ ತಾಯಂದಿರು ಮತ್ತು ಸ್ತ್ರೀ ಶಕ್ತಿ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಶ್ರೀಮತಿ ಸರೋಜಿನಿ, ಧನ್ಯವಾದ ಭಾಷಣ ಶ್ರೀಮತಿ ವಸಂತಿ ಹಾಗೂ ಶ್ರೀಮತಿ ವಸಂತಿ ಇವರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *