ಬೆಂಗಳೂರು (ಅ.05): ಬೆಡ್ ರೂಮ್ನಲ್ಲಿ ಕ್ಯಾಮೆರಾ ಇಟ್ಟು ವಿಡಿಯೋ ಮಾಡಿದ್ದ ಎನ್ನುವ ಆರೋಪ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಗಂಡನೇ ಖಾಸಗಿ ವಿಡಿಯೋ ಮಾಡ್ತಿದ್ದ ಎಂದು ಹೆಂಡ್ತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು.

ಇದನ್ನೂ ಓದಿ: ⭕ಮಂಗಳೂರು: ಭೂಗತ ಪಾತಕಿ ಕಲಿ ಯೋಗೀಶ್ ಸಹಚರ ಶ್ರೀನಿವಾಸ್ ಶೆಟ್ಟಿ ಬಂಧನ
ಇದೀಗ ಗಂಡ ವಿಡಿಯೋ ಮೂಲಕ ಆರೋಪಗಳಿಗೆ ಸ್ಪಷ್ಟನೆ ಮಾಡಿದ್ದಾನೆ. ನನ್ನ ಹೆಂಡ್ತಿಯೇ ನನಗೆ ಕಿರುಕುಳ ಕೊಟ್ಟಿದ್ದಾಳೆ ಎಂದು ನೋವು ತೋಡಿಕೊಂಡಿದ್ದಾನೆ.


ವಿಡಿಯೋ ಮಾಡಿ ಆರೋಪಕ್ಕೆ ಸ್ಪಷ್ಟನೆ:
ಸೈಯದ್ ಹೀನಾಮುಲ್ ಹಕ್ ವಿರುದ್ಧ ಪತ್ನಿ ಕಿರುಕುಳದ ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ರು. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರಗೊಂಡ ಬಳಿಕ ಆಕೆಯ ಗಂಡ ವಿಡಿಯೋ ಮೂಲಕ ಸ್ಪಷ್ಟನೆ ನೀಡಲು ಮುಂದಾಗಿದ್ದಾರೆ. ನನ್ನ ಹೆಂಡ್ತಿ ಹೇಳ್ತಿರೋದೆಲ್ಲಾ ಸುಳ್ಳು, ನಾನು ಯಾವುದೇ ತಪ್ಪು ಮಾಡಿಲ್ಲ. ಆಕೆಯೇ ನನಗೆ ಟಾರ್ಚರ್ ಕೊಟ್ಟಿದ್ದಾಳೆ ಎಂದಿದ್ದಾರೆ.

ಗಂಡನಾದ ಸೈಯದ್ ಹೀನಾಮುಲ್ ಹಕ್, ಹೆಂಡತಿಯು ಮಾಡಿರುವ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದು, ಬೆಡ್ ರೂಮ್ ನಲ್ಲಿ ನಾನು ಕ್ಯಾಮೆರಾ ಇಟ್ಟಿರಲಿಲ್ಲ ಎಂದಿದ್ದಾನೆ. ಯಾವುದೇ ವಿಡಿಯೋ ಮಾಡಿಲ್ಲ. ನಿಶ್ಚಿತಾರ್ಥ ನಂತರ ಆಕೆಯ ಜೊತೆ ಸಂಬಂಧ ಹೊಂದಿದ್ದೆ, ಆದ್ರೂ ಆಕೆ ನನಗೆ ಇಲ್ಲದ ಟಾರ್ಚರ್ ಕೊಡಲು ಶುರು ಮಾಡಿದಳು ಎಂದು ಹೇಳಿಕೊಂಡಿದ್ದಾನೆ.
