Tue. Oct 14th, 2025

Belthangady : ಜಿಲ್ಲೆಯ ಬಸದಿಗಳನ್ನು ಸಂರಕ್ಷಿತ ಸ್ಮಾರಕ ಘೋಷಣೆ ಪ್ರಸ್ತಾವನೆಯನ್ನು ಕೈಬಿಡುವಂತೆ ಜಿಲ್ಲಾಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಕೆ

ಬೆಳ್ತಂಗಡಿ (ಅ.09) : ಪುರಾತತ್ವ ಇಲಾಖೆ ಬೆಳ್ತಂಗಡಿ ತಾಲೂಕಿನ ಮತ್ತು ಜಿಲ್ಲೆಯ ಕೆಲವು ಬಸದಿಗಳು ಸೇರಿದಂತೆ ಜಿಲ್ಲೆಯ ಹಲವು ಬಸದಿಗಳನ್ನು ಅರಕ್ಷಿತ ಸ್ಮಾರಕಗಳೆಂದು ಗುರುತಿಸಿ ಘೋಷಣೆ ಪ್ರಕ್ರಿಯೆಗಳು ಚಾಲ್ತಿಯಲ್ಲಿದ್ದು. ಜಿಲ್ಲೆಯ ಜೈನ ಬಸದಿಗಳು ಪುರಾತನ ಬಸದಿಗಳಾಗಿದ್ದರೂ ಅವುಗಳ‌ ಅಭಿವೃದ್ದಿಯನ್ನು ಜೈನ ಸಮಾಜವೇ ಮಾಡುತ್ತಾ ಬಂದಿದ್ದು ಅಲ್ಲಿ ಧಾರ್ಮಿಕ ವಿಧಿವಿಧಾನಗಳು ನಿತ್ಯ ನಡೆಯುತ್ತಿದೆ ಈ ಬಸದಿಗಳನ್ನು ಅರಕ್ಷಿತ ಸ್ಮಾರಕ ಎಂದು ಘೋಷಿಸುವುದರಿಂದಾಗಿ ಇಲ್ಲಿನ ಎಲ್ಲ ಕಾರ್ಯಗಳಿಗೆ ಅಡಚಣೆಯುಂಟಾಗುವ ಸಾಧ್ಯೆತಿದ್ದು ಈ ಹಿನ್ನಲೆಯಲ್ಲಿ ಈ ಬಸದಿಗಳನ್ನು ಅರಕ್ಷಿತ ಸ್ಮಾರಕ ಎಂದು ಘೋಷಿಸುವುದನ್ನು ಕೈಬಿಡಬೇಕು ಎಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಜಿಲ್ಲಾಧಿಕಾರಿ ರವರಿಗೆ ಆಕ್ಷೇಪನ ಸಲ್ಲಿಸಿದ್ದಾರೆ.

ಈ ಬಗ್ಗೆ ರಕ್ಷಿತ್ ಶಿವರಾಂ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಜೈನ್ ಸಮುದಾಯದ ಮುಖಂಡರುಗಳು ಮನವಿ ಸಲ್ಲಿಸಿದರು.

ಬೆಳ್ತಂಗಡಿ ತಾಲೂಕಿನ ಬಂಗಾಡಿ ಶ್ರೀ ಶಾಂತಿನಾಥ ಬಸದಿ, ಬೈಪಾಡಿ ಶ್ರೀ ಶಾಂತಿ ನಾಥ ಬಸದಿ, ಅಳದಂಗಡಿ ಶ್ರೀ ಪಾರ್ಶ್ವನಾಥ ಬಸದಿ, ಬಂಗಾಡಿ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ, ಬೈಲಂಗಡಿ ಶ್ರೀ ಪಾರ್ಶ್ವನಾಥ ಬಸದಿ, ಶಿಶಿಲ ಚಂದ್ರನಾಥ ಬಸದಿಯನ್ನು ಅರಕ್ಷಿತ ಸ್ಮಾರಕಗಳು ಎಂದು ಗುರುತಿಸಿದೆ. ಈಗ ಅರಕ್ಷಿತ ಸ್ಮಾರಕಗಳೆಂದು ಗುರುತಿಸಲಾಗಿರುವ ಬಸದಿಗಳು ಸದ್ಯ ಸುಸ್ಥಿತಿಯಲ್ಲಿದ್ದು ಪೂಜೆ ಪುರಸ್ಕಾರಗಳು, ಧಾರ್ಮಿಕ ವಿಧಿವಿಧನಗಳ, ಸಂಪ್ರದಾತೆ ಆರಾಧನೆಗಳು ಇಲ್ಲಿ ನಿರಂತರ ನಡೆಯುತ್ತಿದೆ. ಏಕಾಏಕಿ ಸದ್ರಿ ಬಸದಿಗಳನ್ನು ಅರಕ್ಷಿತ ಸ್ಮಾರಕ ಎಂದು ಘೋಷಿಸುವುದರಿಂದ ಸದ್ರಿ ಬಸದಿಗಳಿಗೆ ಒಳಪಟ್ಟ ಜೈನ ಧರ್ಮೀಯರಿಗೆ ತಮ್ಮ ಆಚರಣೆಗಳನ್ನು ನಡೆಸಲು ಅಡಚಣೆಯುಂಟಾಗುತ್ತದೆ. ಕಾಯ್ದೆಯ ನಿಬಂಧನೆಗಳಿಂದ ಪ್ರತಿನಿತ್ಯದ ಕಾರ್ಯಗಳಿಗೂ ತೊಂದರೆಯಾಗುತ್ತದೆ. ಅಲ್ಲದೆ ಸಮಾಜದವರಿಗೆ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ ಇದರಿಂದಾಗಿ ಸಿಸ್ಥಿತಿಯಲ್ಲಿರುವ ಈ ಬಸದಿಗಳು ಅಜೀರ್ಣಗೊಳ್ಳುವ ಸಾಧ್ಯತೆಗಳೂ ಇದೆ ಇದರಿಂದಾಗಿ ಬಸದಿಗಳನ್ನು ಅರಕ್ಷಿತ ಸ್ಮಾರಕಗಳ ಪಟ್ಟಿಯಿಂದ ಕೈಬಿಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ

ಈ ಸಂದರ್ಭದಲ್ಲಿ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ! ಪದ್ಮಪ್ರಸಾದ್ ಅಜಿಲ ಅಳದಂಗಡಿ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷರಾದ ಲಾವಣ್ಯ ಬಲ್ಲಾಳ್ ಜೈನ್, ಡಾ. ಕೆ ಜಯಕೀರ್ತಿ ಜೈನ್ ಧರ್ಮಸ್ಥಳ, ಸುರೇಂದ್ರ ಕುಮಾರ್ ಜೈನ್ ಧರ್ಮಸ್ಥಳ, ಯಶೋಧರ ಬಲ್ಲಾಳ್ ಬಂಗಾಡಿ ಅರಮನೆ, ಅಜಿತ್ ಕುಮಾರ್ ಉಳಿಯಬೀಡು, ಶ್ರೀ ವೀರೇಂದ್ರ ಕುಮಾರ್ ಅಳದಂಗಡಿ, ಪ್ರಮೋದ್ ಕುಮಾರ್ ಬಳೆoಜ, ಜಿತೇಶ್ ಜೈನ್ ಮಂಗಳೂರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *